ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತಹ ಪೋಸ್ಟ್ ಗಳ ಪೈಕಿ ಅತೀ ಹೆಚ್ಚಿನ ಗಮನ ಸೆಳದಿದ್ದು ಮಾತ್ರ ಮೋದಿಯ ಭಾವಚಿತ್ರವಿರುವ ಒಂದು ಸ್ಟಾಂಪ್. ಅದನ್ನು ನೋಡಿದ ತಕ್ಷಣ ನಿಜವೆನ್ನಿಸಿದರೂ ಸರಿಯಾಗಿ ಪರಿಶೀಲಿಸಿದಾಗ ತಿಳಿಯುವುದೇ ಬೇರೆ, ಟರ್ಕಿ ದೇಶ ಇದುವರೆಗೂ ಆರೀತಿಯ ಯಾವುದೇ ಸ್ಟಾಂಪ್ ಅನ್ನು ಬಿಡುಗಡೆ ಮಾಡಿಯೇ ಇಲ್ಲ ಎಂಬುದು.
ಆ ಚಿತ್ರವಿರುವಂತಹ ಸ್ಟಾಂಪ್ 2015ರ ಜಿ20 ರಾಷ್ಟ್ರಗಳ ಸಮ್ಮೇಳನದ ಗುರುತಾಗಿ ಮುದ್ರಿಸಲಾಗಿತ್ತು. ಎಂಬುದು ತಿಳಿದು ಬಂದಿದೆ. ಮತ್ತು ಅ ಸ್ಮರಣಿಕೆ ಪ್ರತಿಯಿಂದ ಫೋಟೋಶಾಪ್ ಮಾಡಿ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂಬುದು ತಿಳಿದು ಬಂದಿದ್ದು ಅದರಲ್ಲಿ ಕೇವಲ ಮೋದಿ ಮಾತ್ರವಲ್ಲ ಜಗತ್ತಿನ ಇನ್ನು ಅನೇಕ ನಾಯಕರ ಭಾವ ಚಿತ್ರಗಳೂ ಇವೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ