ಕುಣಿಗಲ್ :
ಕಿಡಿಗೇಡಿಯೋರ್ವನ್ನು ಪ್ರಸಿದ್ದ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಮೆಟ್ಟಲು ಬಳಿ ಇರುವ ವಿಷ್ಣು ಅವತಾದರ ನಾರಾಯಣಸ್ವಾಮಿ ದೇವರ ವಿಗ್ರಹವನ್ನು ಹಾನಿಗೊಳಿಸಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ,ತಾಲೂಕಿನ ಕೊತ್ತಗೆರೆ ಹೋಬಳಿ ಮೆಣಸಿನಹಳ್ಳಿ ಗ್ರಾಮದ ಪ್ರಸಿದ್ದ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಬೆಟ್ಟಕ್ಕೆ ಹತ್ತುವ ಮೆಟ್ಟಿಲು ಬಳಿ ಭಕ್ತರು ಕಟ್ಟಿಸಿರುವ ವಿಷ್ಣುವಿನ ಅವತಾರದ ನಾರಾಯಣಸ್ವಾಮಿ ವಿಗ್ರಹವನ್ನು ಬಹು ವರ್ಷಗಳಿಂದ ಭಕ್ತರು ವಿಷ್ಣು ವಗ್ರಹಕ್ಕೆ ಪೂಜೆ ಮಾಡಿ ಬಳಿಕ ಬೆಟ್ಟ ಹತ್ತಿ ಶ್ರೀ ರಂಗನಾಥಸ್ವಾಮಿ ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು ಆದರೆ ಗುರುವಾರ ರಾತ್ರಿ ಕಿಡಿಗೇಡಿಯೋರ್ವನ್ನು ವಿಷ್ಣುವಿನ ವಿಗ್ರಹವನ್ನು ಕಲ್ಲಿನಿಂದ ಹೊಡೆದು, ಕಾಲಿನಿಂದ ಒದ್ದು ವಿಗ್ರಹವನ್ನು ಭಗ್ನಗೊಳಿಸಿರುತ್ತಾನೆ.
ವಿಗ್ರಹವನ್ನು ಹಾನಿಗೊಳಿಸುತ್ತಿರುವ ದೃಷ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ತಾಲೂಕಿನ ಹಡೋನಹಳ್ಳಿ ಗ್ರಾಮದ ವೆಂಕಟೇಶ್ ಎಂದು ಗುರುತಿಸಲಾಗಿದೆ, ಘಟನೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ಶ್ರೀ ಕ್ಷೇತ್ರ ಎಡಿಯೂರು ದೇವಾಲಯದ ಕಾರ್ಯನಿವಾಹಣಾಧಿಕಾರಿ ಮಹೇಶ್ ಅವರು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.ಸಿಸಿ ಕ್ಯಾಮರ ವಿಡಿಯೋ ಆದರಿಸಿ ಪೊಲೀಸರು ಆರೋಪಿ ವೆಂಕಟೇಶನ ಪತ್ತೆಗೆ ಕ್ರಮಕೈಗೊಂಡಿದ್ದಾರೆ, ವಿಗ್ರಹ ಭಗ್ನಗೊಳಿಸಿರುವುದನ್ನು ಭಕ್ತಾಧಿಗಳು ಖಂಡಿಸಿದ್ದಾರೆ.ಬಹುದಿನಗಳಿಂದ ಹಡೋನಹಳ್ಳಿ ಗ್ರಾಮದ ವೆಂಕಟೇಶ್ ದೇವಾಲಯದ ಅವರಣವನ್ನು ಸ್ವಚ್ಛಗೊಳಿಸುತ್ತಿದ್ದನ್ನು ಎನ್ನಲಾಗಿದ್ದು, ವಿಗ್ರವನ್ನು ಏತಕ್ಕಾಗಿ ಭಗ್ನಗೊಳಿಸಿದ್ದಾನೆ ಎಂದು ತಿಳಿದುಬಂದಿಲ್ಲ, ಆರೋಪಿ ಬಂಧನದ ಬಳಿಕ ಸತ್ಯಾಂಶ ತಿಳಿಯಲಿದೆ.








