ಭಾರತೀಯರ ಬಗ್ಗೆ ವಿಶ್ವಸಂಸ್ಥೆ ನೀಡಿದ ವರದಿ ಕೇಳಿದರೆ ಆಶ್ಚರ್ಯವಾಗೊದು ಪಕ್ಕಾ….!

ವದೆಹಲಿ: 

   ಭಾರತೀಯರ ಸರಾಸರಿ ಜೀವಿತಾವಧಿ ಮತ್ತು ತಲಾದಾಯ ಏರಿಕೆ ಪ್ರಮಾಣ ಅದ್ಭುತವಾಗಿದೆ. ಹೀಗೆಂದು ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ(HDI) ಮೆಚ್ಚುಗೆ ವ್ಯಕ್ತಪಡಿಸಿದೆ.2023 ನೇ ಸಾಲಿನ ವಿಶ್ವಸಂಸ್ಥೆಯ ಮಾನವಾಭಿವೃದ್ಧಿ ಸೂಚ್ಯಂಕ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದು, ಅದರಲ್ಲಿ 2022 ರಲ್ಲಿ ಉಂಟಾಗಿರುವ ಭಾರತದ ಪ್ರಗತಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

   2021ರಲ್ಲಿ ಭಾರತೀಯರ ಜೀವಿತಾವಧಿ ಸರಾಸರಿ 62.7 ವರ್ಷವಿತ್ತು. ಅದು ಒಂದೇ ವರ್ಷದಲ್ಲಿ 67.7 ವರ್ಷಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಭಾರತೀಯರ ಸರಾಸರಿ ತಲಾದಾಯ ವರ್ಷಕ್ಕೆ 5.75 ಲಕ್ಷ ರೂ.ಗೆ ಏರಿಕೆಯಾಗಿದ್ದು, ಏರಿಕೆಯ ಪ್ರಮಾಣ ಶೇಕಡ 6.3ರಷ್ಟು ಇದೆ. ಒಟ್ಟಾರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಜಗತ್ತಿನ 193 ದೇಶಗಳ ಪೈಕಿ ಭಾರತ 134ನೇ ಸ್ಥಾನದಲ್ಲಿದೆ.

   ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ ಮಧ್ಯಮ ಸ್ತರದಲ್ಲಿ ಇದೆ. ಅಂಕಿ ಅಂಶದ ದೃಷ್ಟಿಯಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚಂಕ 0.64 ರಷ್ಟು ಇದೆ. 2021 ರಿಂದ 2022ರ ಅವಧಿಯಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. 1990 ರಿಂದ ಇದುವರೆಗೆ ಭಾರತೀಯರ ಜೀವಿತಾವಧಿ 9.1ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link