ನವದೆಹಲಿ
ವಿಸ್ತಾರ ಏರ್ಲೈನ್ಸ್ ಮತ್ತು ಏರ್ ಇಂಡಿಯಾ ಸಂಸ್ಥೆಗಳು ವಿಲೀನಗೊಳ್ಳುವುದು ಸನ್ನಿಹಿತವಾಗಿದೆ. ವರದಿಗಳ ಪ್ರಕಾರ ನವೆಂಬರ್ 12ರಂದು ಈ ಎರಡು ದೈತ್ಯ ವಿಮಾನ ಸಂಸ್ಥೆಗಳು ವಿಲೀನಗೊಳ್ಳುವ ಸಾಧ್ಯತೆ ಇದೆ. ಇದೇನಾದರೂ ಆದಲ್ಲಿ ಏರ್ ಇಂಡಿಯಾ ಬ್ರ್ಯಾಂಡ್ನಲ್ಲೇ ಕಂಪನಿ ವಿಸ್ತಾರ ಆಗಲಿದೆ. ವಿಶ್ವದ ಅತಿದೊಡ್ಡ ವಿಮಾನ ಸಂಸ್ಥೆಗಳಲ್ಲಿ ಒಂದೆನಿಸಲಿದೆ. ಹೊಸ ಏರ್ ಇಂಡಿಯಾ ಸಂಸ್ಥೆಯಲ್ಲಿ ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆ ಶೇ. 25.1ರಷ್ಟು ಷೇರುಪಾಲು ಖರೀದಿಸಲಿದೆ. ಈ ಹೂಡಿಕೆಗೆ ಭಾರತ ಸರ್ಕಾರದಿಂದ ಸಮ್ಮತಿ ಸಿಕ್ಕಿದೆ.
ನವೆಂಬರ್ 12ರ ಬಳಿಕ ವಿಸ್ತಾರ ಹೆಸರಿನಲ್ಲಿ ವಿಮಾನಗಳಿರುವುದಿಲ್ಲ. ಇವೆಲ್ಲವೂ ಏರ್ ಇಂಡಿಯಾ ಬ್ರ್ಯಾಂಡ್ ಅಡಿಯಲ್ಲಿ ಚಾಲನೆಯಲ್ಲಿರುತ್ತವೆ. ನವೆಂಬರ್ 11ರವರೆಗೂ ವಿಸ್ತಾರ ವಿಮಾನಗಳಿಗೆ ಬುಕಿಂಗ್ ಮಾಡಲು ಅವಕಾಶ ಇರುತ್ತದಾದರೂ ಅವೆಲ್ಲವೂ ಏರ್ ಇಂಡಿಯಾ ತಾಣಕ್ಕೆ ರೀಡೈರೆಕ್ಟ್ ಆಗಲಿದೆ.