ಪ್ರೌಢಶಾಲೆ ಮಕ್ಕಳಿಗಾಗಿ ವಿವೇಕ – ವಿದ್ಯಾರ್ಥಿ ಸ್ಪರ್ಧೆ

ಶಿರಸಿ:

    ರಾಮಕೃಷ್ಣ – ವಿವೇಕಾನಂದ ಭಾವ ಪ್ರಚಾರ ಪರಿಷತ್, ಕರ್ನಾಟಕ ವತಿಯಿಂದ, ರಾಮಕೃಷ್ಣ – ವಿವೇಕಾನಂದ ಆಶ್ರಮದ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಈ ವರ್ಷವೂ “ವಿವೇಕ – ವಿದ್ಯಾರ್ಥಿ” ರಾಜ್ಯಮಟ್ಟದ ಸ್ಪರ್ಧೆಯನ್ನು ಲಿಖಿತ ಪರೀಕ್ಷೆ ಮೂಲಕ ಏರ್ಪಡಿಸಲಾಗಿದೆ. 8, 9 ಮತ್ತು 10ನೇ ತರಗತಿಯವರಿಗೆ ಪ್ರತ್ಯೇಕವಾಗಿ 100 ಅಂಕಗಳ ಸ್ಪರ್ಧಾತ್ಮಕ ಪರೀಕ್ಷೆ 9 ನವೆಂಬರ್ 2025 ಭಾನುವಾರದಂದು ಬೆಳಿಗ್ಗೆ 10 ರಿಂದ 12ಗಂಟೆಯ ತನಕ ರಾಜ್ಯಾದ್ಯಂತ ಏಕಕಾಲಕ್ಕೆ ಜರುಗಲಿದೆ.

    ಪ್ರತೀ ತರಗತಿಯಿಂದ ಗರಿಷ್ಠ 5 ವಿದ್ಯಾರ್ಥಿಗಳಂತೆ ಪ್ರತೀ ಪ್ರೌಢಶಾಲೆಯಿಂದ ಒಟ್ಟೂ 15 ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥರ ಮೂಲಕ ಇದೇ ಸೆಪ್ಟಂಬರ್ 10ರ ಮೊದಲು ಹೆಸರು ನೋಂದಾಯಿಸಬೇಕು. ನೋಂದಣಿ ಹಾಗೂ ಹೆಚ್ಚಿನ ಅಗತ್ಯ ಮಾಹಿತಿಗಾಗಿ ಶಿರಸಿಯ ಶ್ರೀ ರಾಮಕೃಷ್ಣ ಸ್ಟೂಡೆಂಟ್ ಹೋಮ್ ಮುಖ್ಯಸ್ಥರಾದ ವಿಂಗ್ ಕಮಾಂಡರ್ ಮುರಾರಿ ಭಟ್ಟರನ್ನು (ಮೊ.: 9483963429) ಸಂಪರ್ಕಿಸಬೇಕು.

    ಕಲಿಕೆಯಲ್ಲಿ ಶ್ರದ್ಧೆ, ಬದುಕಿನಲ್ಲಿ ಪ್ರಾಮಾಣಿಕತೆ, ವಿಶ್ವಾಸಾರ್ಹತೆ, ಸಂವೇದನಾಶೀಲತೆ, ಯೋಗ್ಯ ದೃಷ್ಟಿಕೋನ ಮತ್ತು ತೆರೆದ ಮನಸ್ಸನ್ನು ಬೆಳೆಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಹೊಂದಲು ಪೂರಕವಾಗಿ ಪ.ಪೂ. ಪುರುಷೋತ್ತಮಾನಂದಜೀಯವರ, ಮೂರು ಪ್ರಮುಖ ಭಾಗಗಳನ್ನೊಳಗೊಂಡ “ವಿವೇಕ ವಿದ್ಯಾರ್ಥಿ” ಪುಸ್ತಕವನ್ನಾಧರಿಸಿ ಸ್ಪರ್ಧೆ ಜರುಗಲಿದೆ. ಪ್ರತೀ ವಿದ್ಯಾರ್ಥಿಯು ಈ ಪುಸ್ತಕದ ಮೌಲ್ಯ ಸೇರಿದಂತೆ ರೂ. 100 ಪರೀಕ್ಷಾ ಶುಲ್ಕ ನೀಡಬೇಕು.

    ಪ್ರತೀ ವಿಭಾಗದಲ್ಲಿ ತಾಲೂಕಾ ಮಟ್ಟದಲ್ಲಿ ಮೂರು, ಜಿಲ್ಲಾ ಮಟ್ಟದಲ್ಲಿ ಮೂರು ಮತ್ತು ರಾಜ್ಯ ಮಟ್ಟದಲ್ಲಿ ಹತ್ತು ಆಕರ್ಷಕ ನಗದು ಬಹುಮಾನಗಳಿವೆ. ಪರೀಕ್ಷೆಯಲ್ಲಿ ಪಾಲ್ಗೊಂಡು ಕನಿಷ್ಠ 40 ಅಂಕ ಗಳಿಸಿದವರಿಗೆ ಅಭಿನಂದನಾ ಪತ್ರವನ್ನೂ ನೀಡಲಾಗುವುದೆಂದು ಸಂಘಟಕರ ಪರವಾಗಿ ಶ್ರೀ ರಾಮಕೃಷ್ಣ ಸ್ಟೂಡೆಂಟ್ ಹೋಮ್ ಸಲಹಾ ಮಂಡಳಿಯ ಸದಸ್ಯ ರವಿ ಹೆಗಡೆ ಗಡಿಹಳ್ಳಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link