ಏಕಾಏಕಿ ನಿವೃತ್ತಿ ಘೋಷಿಸಿದ ವಿಕ್ರಾಂತ್ ಮಾಸ್ಸಿ….!

ನವದೆಹಲಿ 

    ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರೋ ಅದ್ಭುತ ನಟ ವಿಕ್ರಾಂತ್ ಮಾಸ್ಸಿ ಅವರು ಒಂದು ಶಾಕಿಂಗ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರು ನಟನೆಗೆ ಗುಡ್​​ಬೈ ಹೇಳಿದ್ದಾರೆ. ಅವರ ಈ ನಿರ್ಧಾರಕ್ಕೆ ಅನೇಕರು ಬೇಸರ ಹೊರಹಾಕಿದ್ದಾರೆ. 37ನೇ ವಯಸ್ಸಿಗೆ ಅವರು ನಿವೃತ್ತಿ ಘೋಷಣೆ ಮಾಡಿದ್ದು ಏಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

    ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಕ್ರಾಂತ್ ಅವರು ಪೋಸ್ಟ್ ಮಾಡಿದ್ದಾರೆ. ‘ಕಳೆದ ಕೆಲ ವರ್ಷಗಳು ಉತ್ತಮವಾಗಿತ್ತು. ನಿಮ್ಮ ನಿರಂತರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆದರೆ ನಾನು ಮುಂದೆ ಬಂದಂತೆಲ್ಲ  ಮಗನಾಗಿ, ಗಂಡನಾಗಿ, ತಂದೆಯಾಗಿ ಮನೆಗೆ ಹಿಂತಿರುಗಲು ಇದು ಸರಿಯಾದ ಸಮಯ ಎಂದು ನಾನು ಅರಿತುಕೊಂಡೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರು ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ಒತ್ತು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ‘2025ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗೋಣ. ಮುಂದೆ 2 ಸಿನಿಮಾಗಳು ಮಾತ್ರ ಮತ್ತು ಹಲವು ವರ್ಷಗಳ ನೆನಪುಗಳು. ಮತ್ತೊಮ್ಮೆ ಧನ್ಯವಾದಗಳು. ನಾನು ನಿಮಗೆ ಎಂದೆಂದಿಗೂ ಋಣಿ’ ಎಂದು ಅವರು ಬರೆದುಕೊಂಡಿದ್ದಾರೆ.  ಸದ್ಯ ಈ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ. ಫ್ಯಾನ್ಸ್​ಗೆ ಹೇಗೆ ಉತ್ತರಸಬೇಕು ಎಂದು ತಿಳಿಯುತ್ತಿಲ್ಲ.

‘   ನೀವು ನನ್ನ ಇಷ್ಟದ ನಾಯಕ’ ಎಂದು ಕೆಲವರು ಹೇಳಿದ್ದಾರೆ. ‘ನೀವು ಮರಳಿ ಬರಲಿ ಎಂದು ಕಾಯುತ್ತೇವೆ’ ಎಂದು ಕೆಲವರು ಹೇಳಿದ್ದಾರೆ. ‘ನೀವು ಭಾರತದ ಅದ್ಭುತ ನಟ. ದಯವಿಟ್ಟು ಹೋಗಬೇಡಿ’ ಎಂದು ಕೆಲವರು ಕೋರಿದ್ದಾರೆ. 2013ರಲ್ಲಿ ರಿಲೀಸ್ ಆದ ‘ಲೂಟೆರಾ’ ಚಿತ್ರದ ಮೂಲಕ ವಿಕ್ರಾಂತ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಳೆದ ವರ್ಷ ರಿಲೀಸ್ ಆದ ‘12th ಫೇಲ್’ ಸಿನಿಮಾ ಅವರ ವೃತ್ತಿ ಬದುಕನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿತ್ತು. ಈ ವರ್ಷ ‘ದಿ ಸಾಬ್ರಮತಿ ರಿಪೋರ್ಟ್’ ಚಿತ್ರದಲ್ಲಿ ನಟಿಸಿದ್ದರು. ಇದಕ್ಕಾಗಿ ಅವರು ಬೆದರಿಕೆ ಕೂಡ ಎದುರಿಸಿದ್ದರು.  ‘ಮಿರ್ಜಾಪುರ್’ ಸರಣಿಯಲ್ಲಿ ಅವರು ನಟಿಸಿ ಗಮನ ಸೆಳೆದಿದ್ದರು. ಬಬ್ಲು ಪಂಡಿತ್ ಪಾತ್ರವನ್ನು ಅವರು ಮಾಡಿದ್ದರು.

Recent Articles

spot_img

Related Stories

Share via
Copy link
Powered by Social Snap