ಗುಬ್ಬಿ:
ಗುಬ್ಬಿ ಪಟ್ಟಣ ಪಂಚಾಯ್ತಿಯ ವಾರ್ಷಿಕ ಆಯವ್ಯಯ ಸಭೆಯಲ್ಲಿ ಸಾರ್ವಜನಿಕ ಸ್ಮಶಾನಗಳನ್ನು ಅಭಿವೃದ್ಧಿ ಗೊಳಿಸುವ ಬಗ್ಗೆ ಚರ್ಚೆ ನೆಡೆಯುತ್ತಿರುವಾಗ ಮದ್ಯೆ ಪ್ರವೇಶಿಸಿದ ಸದಸ್ಯ ಜಿ ಆರ್ ಶಿವಕುಮಾರ್ ವೀರಶೈವ ಸಮಾಜದ ರುದ್ರಭೂಮಿ ಅಭಿವೃದ್ಧಿಗೆ ಮನವಿ ಮಾಡಿದಾಗ ಸದಸ್ಯ ರೇಣುಕಪ್ರಸಾದ್ ವಿರೋಧ ವ್ಯಕ್ತಪಡಿಸಿ ನಾವು ಒಂದು ಜಾತಿಗೆ ಸದಸ್ಯರಾಗಿಲ್ಲ
ಸಾರ್ವಜನಿಕ ಸ್ಮಶಾನಕ್ಕೆ ಒಂದು ಇಂಚು ಜಾಗವಿಲ್ಲ ನಿಮಗೆ 3 ಎಕರೆ ಜಾಗವಿದೆ ನೀವು ಎಲ್ಲಾ ಮತದಾರರ ಪ್ರತಿನಿಧಿ ಎಲ್ಲಾಕೋಮಿಗೂ ಅನುಕೂಲವಾಗುವಂತೆ ಸಾರ್ವಜನಿಕ ಸ್ಮಶಾನ ಅಭಿವೃದ್ಧಿಯಾಗಲಿ ಎಂದರು.ಈ ಸಂದರ್ಭದಲ್ಲಿ ಮದ್ಯ ಪ್ರವೇಶಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್ ತುಮಕೂರು ಮಾದರಿಯಲ್ಲಿ ಸಮಾಜ ಬಾಂದವರೆಲ್ಲಾ ಸೇರಿ ಸ್ಮಶಾನ ಅಭಿವೃದ್ಧಿ ಪಡಿಸಿ ಎಂದು ಸಲಹೆಇಟ್ಟರು
