ದಾವಣಗೆರೆ
ಕೋರೊನಾದಲ್ಲಿ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪದಲ್ಲಿ ಯಾವುದೇ ಹುರಳಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಅವ್ಯವಹಾರ ಆಗಿದ್ದರೆ ನಾನೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಸವಾಲನ್ನ ಹಾಕಿದ್ದಾರೆ.
ದಾವಣಗೆರೆಯಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಆರೋಪ ಸಾಬೀತು ಮಾಡುವಂತೆ ಸವಾಲು ಹಾಕಿದ್ದಾರೆ. ಕೋವಿಡ್ ನಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 40 ಸಾವಿರ ಕೋಟಿ ಹಗರಣ ನಡೆದಿದೆ ಎಂದಿದ್ದಾರೆ. ಆಗ ಇವರು ಶಾಸಕರಾಗಿದ್ದರು. ನಾವು ಕೂಡ ಮಾಸ್ಕ್, ಆಕ್ಸಿಜೆನ್ ಸೇರಿ ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂದು ಸದನದಲ್ಲಿಯೇ ದಾಖಲೆ ತೋರಿಸಿದ್ದೇವೆ. ಯತ್ನಾಳ ಕೂಡ ಆಗ ಶಾಸಕರಾಗಿದ್ದರು, ಯಾಕೆ ಮಾತನಾಢಲಿಲ್ಲ, ಈಗ ಆರೋಪ ಮಾಡುತ್ತಿದ್ದಾರೆ. ಇವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು.
ವಿಜಯಪುರದಲ್ಲಿ ಪ್ರಭಾವಿ ಸಚಿವರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಸರ್ಕಾರದಲ್ಲಿ ಕೆಲಸ ಮಾಡಿಕೊಂಡು ಆರೋಪ ಮಾಡೋದು ಬಿಡಬೇಕು. ದಾಖಲೆ ಸಮೇತ ಚರ್ಚೆಗೆ ಬನ್ನಿ ನಾನು ಬರ್ತೀನಿ ಎಂದು ಯತ್ನಾಳಗೆ ಸವಾಲು ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿನ ಸಮಾವೇಶದಲ್ಲಿ ಹತ್ತು ಸಾವಿರ ಕೋಟಿ ಬಿಡುಗಡೆ ಮಾಡುತ್ತೇವೆ ಅಂತ ಹೇಳಿದ್ದರು. ಅಧಿವೇಶನ ವೇಳೆ ಬಹಿರಂಗವಾಗಿ ಯಾವುದನ್ನು ಮಾತನಾಡುವಂತಿಲ್ಲ. ರೈತರಿಗೆ ಪರಿಹಾರ ಕೇಳಿದ್ರೆ ಕೇಂದ್ರದತ್ತ ಕೈ ಮಾಡುತ್ತಾರೆ. ರೈತರಿಗೆ ಬಿಡುಗಾಸು ಬಿಡುಗಡೆ ಮಾಡಲಿಲ್ಲ. ಅಲ್ಪಸಂಖ್ಯಾತರ ಇಲಾಖೆ ಪರಿಶೀಲನಾ ಸಭೆ ವೇಳೆ ಭಾಗ 2 ಎಂಬಂತೆ ಒಂದು ಸಾವಿರ ಕೋಟಿ ಬಿಡುಗಡೆಗೆ ಆದೇಶ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ