ತುಮಕೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ವಿಧಾನ ಪರಿಷತ್ ನೂತನ ಸದಸ್ಯರಾದ ರಮೇಶ್ ಬಾಬು ಅವರೊಂದಿಗೆ ಶುಕ್ರವಾರ ಸಂವಾದ ನಡೆಸಲಾಯಿತು.ಸಂವಾದ ಸಭೆಯಲ್ಲಿ ಮಾತನಾಡಿದ ರಮೇಶ್‌ಬಾಬು ಅವರು, ಮೇಲ್ಮನೆಗೆ ೨ನೇ ಬಾರಿಗೆ ಆಯ್ಕೆಯಾಗುವ ಅವಕಾಶ ದೊರೆ ತಿದ್ದು, ಚಿಂತಕರ ಚಾವಡಿಯಲ್ಲಿ ಜನಸಾಮಾನ್ಯರ ಧ್ವನಿಯಾಗಿ ಸಾಮಾಜಿಕ ನ್ಯಾಯ ಸಂವಿಧಾನದ ಪರವಾಗಿ ಕಾರ್ಯನಿರ್ವಹಿಸಲು ಬಯಸಿರುವೆ. ನನ್ನ ಅವಧಿ ಹತ್ತು ತಿಂಗಳಾದರೂ ಸ್ಥಾನದ ಘನತೆ ಎತ್ತಿ ಹಿಡಿಯುವಂತೆ ಕಾರ್ಯನಿರ್ವಹಿಸುವೆ ಎಂದರು.
ಚಾರಿತ್ರಿಕ ಇತಿಹಾಸದ ಚಿಕ್ಕ ನಾಯಕನಹಳ್ಳಿ ತಾಲ್ಲೂಕಿನ ಮೂಲ ನನ್ನ ದು ಎನ್ನುವುದಕ್ಕೆ ಹೆಮ್ಮೆಪಡುತ್ತೇನೆ. ಪಿಯುಸಿ ಅನುತ್ತೀರ್ಣ ನಾಗಿ ಪತ್ರಿಕೋದ್ಯಮ ಸರ್ಟಿಫಿಕೇಟ್ ಕೋರ್ಸ್ ನೊಂದಿಗೆ ಪತ್ರಿಕಾ ರಂಗ ಪ್ರವೇಶಿಸಿದೆ. ಸುಮಾರು ಹದಿನಾಲ್ಕು ಪತ್ರಿಕೆ ಏಜೆಂಟರಾಗಿ ವರದಿಗಾರನಾಗಿ ಕಾರ್ಯನಿರ್ವಹಿಸಿದೆ. ಲಂಕೇಶ್ ಪತ್ರಿಕೆ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಈ ವೇಳೆ ಎಲ್‌ಎಲ್ ಬಿ ಪೂರೈಸಿ ವಕೀಲ ವೃತ್ತಿ ಯನ್ನು ಆಯ್ಕೆ ಮಾಡಿಕೊಂಡು ೯೮-೯೯ರಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡೆ. ಅಲ್ಲಿ ದೊಡ್ಡ ರಾಜಕೀಯ ನಾಯಕರ ಸಂಪರ್ಕ ದೊರೆತು ಜೆಡಿಎಸ್ ನಿಂದ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದೆ.
ಆದರೆ ಪಕ್ಷದಿಂದ ಹೊರಹೋಗುವ ಸ್ಥಿತಿ ನಿರ್ಮಾಣ ವಾಯಿತು. ನಮ್ಮ ತತ್ವ ಸಿದ್ಧಾಂತ ಕ್ಕೆ ಒಪ್ಪಿ ಗೆ ಯಾಗುವ ಪಕ್ಷವೆಂದು ಕಾಂಗ್ರೆಸ್ ಸೇರ್ಪಡೆ ಗೊಂಡೆ. ಪಕ್ಷದ ವಕ್ತಾರನಾಗಿ ನನ್ನ ಸೇವೆ ಗುರುತಿಸಿ ಸಿಎಂ, ಡಿಸಿಎಂ ಹಾಗೂ ಪಕ್ಷದ ವರಿಷ್ಠರು ನನಗೆ ಮೇಲ್ಮನೆ ಗೆ ನಾಮ ನಿರ್ದೇಶನವಾಗುವ ಅವಕಾಶ ಕಲ್ಪಿಸಿದರು ಎಂದು ತಮ್ಮ ಜೀವನಯಾನದ ವೃತ್ತಾಂತ ವಿವರಿಸಿದರು.
ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ಬಗ್ಗೆ ಅನಗತ್ಯ ಗುಲ್ಲೆಬ್ಬಿಸಲಾಗುತ್ತಿದೆ ಎಂದು ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಬಾಬು ಅವರು ಅರ್ಹ ಫಲಾನುಭವಿಗಳಿಗೆ ಯೋಜನೆ ಗಳನ್ನು ತಲುಪಿಸಲು ಗಣತಿ ಸಮೀಕ್ಷೆ ಅತ್ಯಾವಶ್ಯಕ ಎಂದು ಪ್ರತಿಪಾದಿಸಿದರು. ಯೂಟ್ಯೂಬ್ ವಾಹಿನಿಗಳಿಗೆ ಪರವಾನಗಿ ಅವಶ್ಯಕ ಎಂಬ ಸಿಎಂ ನಿಲುವನ್ನು ಸಮರ್ಥಿಸಿಕೊಂಡ ರಮೇಶ್ ಬಾಬು ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಮಾಧ್ಯಮ ಕ್ಕೆ ವಿಶೇಷವಿಲ್ಲ. ಇದರ ಹೆಸರಲ್ಲಿ ಚಾರಿತ್ರ್ಯ ವಧೆಯಾಗಬಾರದು ಅಷ್ಟೇ ಎಂದರು. ಜಿಲ್ಲೆಯಲ್ಲಿ ಮರಳಿ ಗಣಿಗಾರಿಕೆ ಚಟುವಟಿಕೆ ಗಳಿಗೆ ಆಸ್ಪದವಾಗಬಾರದು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷ ರಾದ ಚಿ. ನಿ. ಪುರುಷೋತ್ತಮ್ ಅವರು ಅಧ್ಯಕ್ಷತೆ ವಹಿಸಿ ರಮೇಶ್ ಬಾಬು ಅವರು ಜೀವನ ಸಾಧನೆ ಯನ್ನು ಸಂಕ್ಷಿಪ್ತ ವಾಗಿ ವಿವರಿಸಿ ಹಿಂದೆ ಅವರು ಪತ್ರಕರ್ತರಾಗಿ ಎರಡು ಬಾರಿ ಮೇಲ್ಮನೆ ಪ್ರವೇಶಿಸುವ ಅವಕಾಶ ಪಡೆದಿರುವುದು ನಾವೆಲ್ಲ ಹೆಮ್ಮೆ ಪಡುವ ಸಂಗತಿ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಇ. ರಘುರಾಮ್ ಸ್ವಾಗತಿಸಿದರು. ಸಂಘದ ಪರವಾಗಿ ರಮೇಶ್ ಬಾಬು ಅವರನ್ನು ಅಭಿನಂದಿಸಲಾಯಿತು. ಕಾಂಗ್ರೆಸ್ ಮುಖಂಡ ಷಣ್ಮುಖಪ್ಪ, ರಾಷ್ಟ್ರೀಯ ಮಂಡಳಿ ಸದಸ್ಯ ಟಿ. ಎನ್. ಮಧುಕರ್ ಸೇರಿದಂತರೆ ಸಂಘದ ಪದಾಧಿಕಾರಿಗಳು,ನಿರ್ದೇಶಕರು, ಪತ್ರಕರ್ತರು ಪಾಲ್ಗೊಂಡರ.
ಸಿಇಸಿ ಪ್ರಶ್ನಿಸಿದರೆ ಬಿಜೆಪಿಯವರಿಗೇಕೆ ಸಿಡಿಮಿಡಿ
ಇಂದಿನ ಚುನಾವಣೆ ವ್ಯವಸ್ಥೆ ನೋಡುತ್ತಿದ್ದರೆ ನಮ್ಮಂತಹವರು ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದ ರಮೇಶ್‌ಬಾಬು ಅವರು ಮತಗಳ್ಳತನ ಕುರಿತಾಗಿ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆ. ಎಲ್ಲೋ ಕುಳಿತು ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಮಾಡಿ ಹೆಸರು ಡಿಲೀಟ್ ಹಾಗೂ ವರ್ಗಾವಣೆ ಮಾಡುತ್ತಾರೆಂದರೆ ಏನರ್ಥ. ಇದನ್ನು ಜವಾಬ್ದಾರಿ ಯುತ ಸ್ಥಾನದಲ್ಲಿದ್ದು ನಾವು ಪ್ರಶ್ನಿಸಬಾರದೇ? ಅಷ್ಟಕ್ಕೂ ಚುನಾವಣೆ ಆಯೋಗವನ್ನು ಪ್ರಶ್ನಿಸಿದರೆ ಬಿಜೆಪಿ ಯವರು ಏಕೆ ಸಿಡಿಮಿಡಿಗೊಳ್ಳುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಇಂದು ಸಾಂವಿಧಾನಿಕ ಸಂಸ್ಥೆ ಗಳು ರಾಜಕೀಕರಣಗೊಳ್ಳುತ್ತಿರುವುದಕ್ಕೆ ಸ್ಪಷ್ಟ ನಿರ್ದರ್ಶನ ಎಂದರು.
