ಬೆಂಗಳೂರು : ಮತದಾನ ಮಾಡಿ ಡಿಸ್ಕೌಂಟ್‌ ಪಡೆಯಿರಿ …!

ಬೆಂಗಳೂರು 

    ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮತದಾನದ ದಿನಾಂಕ ಹತ್ತಿರವಾಗುತ್ತಿದೆ. ಈ ನಡುವೆ ಬೆಂಗಳೂರಿನ ಮತದಾರರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಮತದಾರರನ್ನು ಮತದಾನಕ್ಕಾಗಿ ಪ್ರೋತ್ಸಾಹಿಸಲು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು ನಿರ್ಧರಿಸಿದೆ. ಇದಕ್ಕಾಗಿ ಮತದಾನ ಮಾಡಿದವರಿಗೆ ರಿಯಾಯಿತಿ ದರದಲ್ಲಿ ತಿಂಡಿ ತಿನಿಸು ನೀಡಲು ತೀರ್ಮಾನಿಸಲಾಗಿದೆ

    ನಗರದಲ್ಲಿ ಯಾವಾಗಲೂ ಮತದಾನ ಪ್ರಮಾಣ ಕಡಿಮೆ ಆಗುತ್ತಿರುತ್ತದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರಿಗಿರುವ ಬಹುಮುಖ್ಯ ವಾದ ಹಕ್ಕು ಮತದಾನ. ಹೀಗಾಗಿ ಏಪ್ರಿಲ್ 26ರಂದು ನಡೆಯಲಿರುವ ಮೊದಲ ಹಂತದ ಮತದಾನ ಪ್ರೋತ್ಸಾಹಿಸಲು ಸಂಘದಿಂದ ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಪಿಸಿ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಕೇವಲ ಶೇ.54ರಷ್ಟು ಮಾತ್ರ ಮತದಾನವಾಗಿದೆ. ಹೆಚ್ಚು ಯುವಕರು, ವಿದ್ಯಾವಂತರನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಮತದಾನ ಆಗಿರುವುದು ಸಮಂಜಸವಲ್ಲ. ಈ ಬಾರಿ ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕರು ಸೇರಿದಂತೆ ಎಲ್ಲ ನಗಾರಿಕರೂ ಕೂಡ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಜಾಗೃತಿ ಮೂಡಸಬೇಕು. ಈ ಸಂಬಂಧ ಹೋಟೆಲ್ ಮಾಲೀಕರು ಹೋಟೆಲ್‌ಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ಪೋಸ್ಟರ್ ಹಾಕುವುದು ಸೇರಿ ಇತರೆ ಜಾಗೃತಿ ಕಾರ್ಯಗಳನ್ನು ಮಾಡಲಿದ್ದೇವೆ. ರಿಯಾಯಿತಿ ದರದಲ್ಲಿ ತಿಂಡಿ-ತಿನಿಸು, ಪಾನೀಯ ನೀಡಿ ಪ್ರೋತ್ಸಾಹಿಸಲಿದ್ದೇವೆ ಎಂದಿದ್ದಾರೆ.

    ಅಂದಹಾಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಅಂದರೆ ಏಪ್ರಿಲ್ 26ಕ್ಕೆ ಮತದಾನ ನಡೆಯಲಿದೆ. ಹೀಗಾಗಿ ಈ ದಿನ ಮತ ಚಲಾಯಿಸುವ ಮತದಾರರಿಗೆ ರಿಯಾಯಿತಿ ದರದಲ್ಲಿ ತಿಂಡಿ ತಿನಿಸು ಸಿಗಲಿದೆ. ಮತದಾನ ಮಾಡಿ ಬಂದವರಿಗೆ ಅಂದರೆ ಕೈ ಬೆರಳಿಗೆ ಶಾಹಿ ಹಚ್ಚಿಸಿಕೊಂಡು ಬಂದವರಿಗೆ ಕೆಲ ಹೋಟೆಲ್ಗಗಳಲ್ಲಿ ಉಚಿತ, ರಿಯಾಯಿತಿ ದರದಲ್ಲಿ ತಿಂಡಿ ತಿನಿಸು, ಪಾನೀಯ ನೀಡುವುದಾಗಿ ತಬೆಂಗಳೂರು ಹೋಟೆಲ್‌fಗಳ ಸಂಘವು ತಿಳಿಸಿದೆ.

    ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಇನ್ನುಳಿದ 14 ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

    ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಅಂದ್ರೆ ಮೇ 7ರಂದು ಚುನಾವಣೆ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ

 

Recent Articles

spot_img

Related Stories

Share via
Copy link
Powered by Social Snap