ತುಮಕೂರು : ಬೆಳಿಗ್ಗೆ 8 ಗಂಟೆಯಿಂದಲೇ ಆರಂಭವಾಯ್ತು ಜೋಶ್ ನಲ್ಲಿ ಮತದಾನ

ತುಮಕೂರು :

    ಇಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದಲೇ ಮತದಾನ ನಡೆಯುತ್ತಿದೆ.

    ಜಿಲ್ಲೆಯಲ್ಲಿ ಮತದಾರರ ಒಟ್ಟು ಸಂಖ್ಯೆ 7725 ಇದ್ದು, ಇದರಲ್ಲಿ ಪುರುಷ ಮತದಾರರು- 4967 ಹಾಗೂ ಮಹಿಳಾ‌ ಮತದಾರರು-2758 ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 16 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ

    ಪಾವಗಡ ನ್ಯಾಯಾಲಯ ಸಭಾಂಗಣ, ಮತ್ತು ಪಾವಗಡ ತಾಲ್ಲೂಕು ಕಚೇರಿ, ಮಧುಗಿರಿ ಸರ್ಕಾರಿ ಪ್ರೌಢಶಾಲೆ ಕೆಆರ್ ಬಡಾವಣೆ, ಶಿರಾ ತಾಲೂಕು ಆಡಳಿತ ಸೌಧ ಕಚೇರಿ ಮತ್ತು ನ್ಯಾಯಲಯ ಸಭಾಂಗಣ, ಚಿಕ್ಕನಾಯಕನಹಳ್ಳಿ ತಾಲೂಕು ಆಡಳಿತ ಸೌಧ ಕಚೇರಿ ಮತ್ತು ನ್ಯಾಯಾಲಯ ಸಭಾಂಗಣ, ತಿಪಟೂರು ತಾಲೂಕು ಕಚೇರಿ, ತುರುವೇಕೆರೆ ತಾಲೂಕು ಕಚೇರಿ,‌ ಕುಣಿಗಲ್ ತಾಲ್ಲೂಕು ಕಚೇರಿ ಮತ್ತು ನ್ಯಾಯಾಲಯ ಸಭಾಂಗಣ, ಗುಬ್ಬಿ ತಾಲೂಕು ಕಚೇರಿ‌ ಮತ್ತು‌  ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು‌ ಹಾಗೂ ನ್ಯಾಯಾಲಯ ಸಭಾಂಗಣ, ಮತ್ತು ತಾಲೂಕು ಕಚೇರಿ, ಕೊರಟಗೆರೆ ನ್ಯಾಯಾಲಯ ಸಭಾಂಗಣ ಮತ್ತು ತಾಲೂಕು ಕಚೇರಿಯಲ್ಲಿ ಮತದಾನ ನಡೆಯುತ್ತಿದೆ.

    ಒಟ್ಟು  ತುಮಕೂರು ಜಿಲ್ಲೆಯಲ್ಲಿ 16 ಮತಗಟ್ಟೆಗಳ ಸ್ಥಾಪನೆ‌ ಮಾಡಲಾಗಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಟಿ ಶ್ರೀನಿವಾಸ್ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ವೈಎ ನಾರಾಯಣಸ್ವಾಮಿ ಕಣದಲ್ಲಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link