ನವದೆಹಲಿ:
ಸ್ವಯಂ ನಿವೃತ್ತಿ (ವಿಆರ್‌ಎಸ್) ತೆಗೆದುಕೊಳ್ಳಲು ಯೋಚಿಸುತ್ತಿರುವ ನೌಕರರೇ ಈ ಸ್ಟೋರಿ ಒಮ್ಮೆ ಓದಿ.ನೀವು ನಿವೃತ್ತಿ ವಯಸ್ಸಿಗಿಂತ ಮುಂಚೆ ಕೆಲಸದಿಂದ ನಿವೃತ್ತಿಹೊಂದಲು ಬಯಸಿದ್ದರೆ ಇದನ್ನು ಗಮನಿಸಿ ಒಂದು ವೇಳೆ ನಾನಾಕಾರಣದಿಂದ ನೀವು ವಿಆರ್ ಎಸ್ ತೆಗೆದುಕೊಂಡರೆ ನೀವು ಎಂದಿಗೂ ಸಹ ಸಹಜವಾಗಿ ನಿವೃತ್ತರಾಗುವವರಿಗೆ ಸಮಾನವಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವೇತನ ಶ್ರೇಣಿಯ ಪರಿಷ್ಕರಣೆಯ ಪ್ರಯೋಜನವನ್ನು ನಿರಾಕರಿಸಿದ ವಿಆರ್‌ಎಸ್ ತೆಗೆದುಕೊಳ್ಳುವ ನೌಕರರು ಈ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಎಸ್ ರವೀಂದ್ರ ಭಟ್ ಅವರ ಪೀಠವು ಮಹಾರಾಷ್ಟ್ರ ರಾಜ್ಯ ಹಣಕಾಸು ನಿಗಮದ (ಎಂಎಸ್‌ಎಫ್ಸಿ) ನೌಕರರು ವಿಆರ್‌ಎಸ್ ಪಡೆದು ಸ್ವಯಂಪ್ರೇರಣೆಯಿಂದ ಸೇವೆಯನ್ನು ತೊರೆದಿದ್ದಾರೆ ಎಂದು ಹೇಳಿದರು. ‘ವಿಆರ್‌ಎಸ್ ತೆಗೆದುಕೊಳ್ಳುವ ನೌಕರರು ತಮ್ಮ ಅಧಿಕಾರಾವಧಿ ಪೂರ್ಣಗೊಂಡ ನಂತರ ನಿವೃತ್ತರಾದವರೊಂದಿಗೆ ಸಮಾನತೆಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ನಿರಂತರವಾಗಿ ಕೆಲಸ ಮಾಡಿದವರು, ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದವರು ಮತ್ತು ನಂತರ ನಿವೃತ್ತರಾದವರೊಂದಿಗೆ ಅವರು ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ ಅಂತ ನ್ಯಾಯಪೀಠ ಹೇಳಿದೆ.