ವಿಧಾನಸೌಧದ ಗೋಡೆಗಳು ಲಂಚ ಎಂದು ಪಿಸುಗುಟ್ಟುತ್ತಿ : ಸಿದ್ದರಾಮಯ್ಯ

ವಿಜಯಪುರ

   ಕೆಲ ದಿನಗಳ ಹಿಂದೆ ಪಿಎಸ್‌ಐ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮದಲ್ಲಿ ಪ್ರತೀ ಹುದ್ದೆಗೆ 80 ಲಕ್ಷದಿಂದ 1 ಕೋಟಿ ಲಂಚ ಪಡೆದಿದ್ದಾರೆ. ದಾಖಲಾತಿ ಕೇಳುವ ಬಸವರಾಜ ಬೊಮ್ಮಾಯಿ ಅವರಿಗೆ ಹಗರಣದಲ್ಲಿ ಭಾಗಿಯಾಗಿ ಜೈಲು ಸೇರಿರುವ 75 ಜನ ತಪ್ಪಿತಸ್ಥರು ಕಾಣುವುದಿಲ್ಲವೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

     ಎಡಿಜಿಪಿ ಅಮೃತ್‌ ಪೌಲ್‌ ರಂತ ಹಿರಿಯ ಅಧಿಕಾರ ಜೈಲಿಗೆ ಹೋಗಿದ್ದರಲ್ಲಪ್ಪಾ ಬೊಮ್ಮಾಯಿ ಇನ್ನೇನು ಸಾಕ್ಷಿ ಬೇಕು.? ಎಂದು ಪ್ರಶ್ನಿಸಿದ್ದಾರೆ.

   ಬಿಜೆಪಿ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದು ಕರೆದವರು ಯಾರು? ನಾವಾ? ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ತಪ್ಪಿಸಿಕೊಳ್ಳುವುದು ಬೇಡ, ಈಗಿನ ಅವಧಿ ಮತ್ತು ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿ ಎರಡೂ ಕಾಲದಲ್ಲಿ ಯಾವೆಲ್ಲ ಆರೋಪಗಳಿವೆ ಅವೆಲ್ಲವನ್ನು ಸುಪ್ರೀಂ ಕೋರ್ಟ್‌ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ತನಿಖೆ ಮಾಡಿಸಿ ಎಂದು ಬೊಮ್ಮಾಯಿಗೆ ಸವಾಲೆಸೆದಿದ್ದಾರೆ.

   ಇದನ್ನು ಸಿಬಿಐ ತನಿಖೆ ಮಾಡಿಸಲು ಬೊಮ್ಮಾಯಿಗೆ ಧಮ್‌, ತಾಕತ್‌ ಇಲ್ಲ. ಈಗ ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟಲು ಆರಂಭ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap