ತುಮಕೂರು
ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಸಿ.ಎ. ವಿಭಾಗದಿಂದ WAR TECH ಅಂತರ ಕಾಲೇಜು ಎಗ್ಸಿಭ್ಯುಷನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಸರ್ವೋದಯ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಸುಬ್ಬರಾವ್ ಅವರು ಉದ್ಘಾಟಿಸಿ ಮಾತನಾಡುತ್ತ ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ನಾವು ಎಷ್ಟು ಕಲಿತರು ಸಾಲದು. ವಿದ್ಯಾರ್ಥಿಗಳು ಗುರುಗಳಿಗೆ ಗೌರವವನ್ನು ಕೊಡುವುದರ ಮೂಲಕ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಆದರೆ ಕಲಿಯುವ ಉತ್ಸಾಹ ವಿದ್ಯಾರ್ಥಿಗಳಲ್ಲಿ ಕಡಿಮೆ ಆಗಬಾರದು. ಈ ಸಂಸ್ಥೆಯನ್ನು ಅತ್ಯುತ್ತಮ ಶಿಕ್ಷಣ ಸಂಸ್ಥೆಯನ್ನಾಗಿ ಮಾಡುವಲ್ಲಿ ಕಾರ್ಯದರ್ಶಿಗಳಾದ ಪ್ರದೀಪ್ ಕುಮಾರ್ ಅವರ ಶ್ರಮ ಅನನ್ಯವಾದದ್ದು ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಗಣಕ ಯಂತ್ರ ವಿಭಾಗದ ಅಸೋಸಿಯೇಟ್ ಪ್ರೊಪೆಸರ್ ಮುಕುಂದಪ್ಪ ಅವರು ಮಾತನಾಡುತ್ತ ಇಂದಿನ ಕಾರ್ಯಕ್ರಮವನ್ನು ತುಂಬ ಸೊಗಸಾಗಿ ಆಯೋಜಿಸಲಾಗಿದೆ. ವಿದ್ಯಾವಾಹಿನಿ ಸಂಸ್ಥೆ ಇಂದು ತುಮಕೂರಿನಲ್ಲಿ ಪ್ರತಿಷ್ಠಿತ ಕಾಲೇಜು ಎಂಬ ಹೆಸರನ್ನು ಪಡೆದುಕೊಂಡಿದೆ. ಯಾವಾಗಲು ಇಂತಹ ಹೊಸ ಹೊಸ ಕಾರ್ಯಕ್ರಮವನ್ನು ಅಯೋಜಿಸುತ್ತ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹವನ್ನು ನೀಡುತ್ತ ಬಂದಿದೆ. ಇಂತಹ ಅವಕಾಶವನ್ನು ಬಳಸಿಕೊಂಡು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ವಿದ್ಯಾವಾಹಿನಿ ಸಂಸ್ಥೆಯ ಅಧ್ಯಕ್ಷರಾದ ಕೆ.ಬಿ. ಜಯಣ್ಣನವರು ಮಾತನಾಡುತ್ತ ವಿದ್ಯಾವಾಹಿನಿ ಕಾಲೇಜು ವಿದ್ಯಾರ್ಥಿಗಳ ಬೆಳವಣಿಗೆಗೆ ಸಾಕಷ್ಟು ಶ್ರಮಿಸುತ್ತದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉಪನ್ಯಾಸಕರಿಗೆ ಗೌರವವನ್ನು ಕೊಡುವುದರ ಮೂಲಕ ಉತ್ತಮ ವ್ಯಕ್ತಿಗಳಾಗಿ ತಂದೆ, ತಾಯಿಗಳಿಗೆ ಹಾಗು ಓದಿದಂತಹ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಕೀರ್ತಿಯನ್ನು ತಂದು ಕೊಡಬೇಕೆಂದು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರದೀಪ್ ಕುಮಾರ್ ರವರು ಕಾರ್ಯಕ್ರಮವನ್ನು ಕುರಿತು ವಿದ್ಯಾರ್ಥಿಗಳೆ ಇಂದಿನ ಪ್ರಪಂಚದಲ್ಲಿ ಸಾಕಷ್ಟು ಮುಂದುವರಿದಿದೆ. ಹಾಗಾಗಿ ವಿದ್ಯಾರ್ಥಿದೆಸೆಯಿಂದಲೆ ಸಾಕಷ್ಟು ಪ್ರಾಜೆಕ್ಟಗಳನ್ನು ಮಾಡಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ 29 ಮಾಡೆಲ್ ಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.ಇದರಲ್ಲಿ ಮಾಡೆಲ್ ಗೆ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನವನ್ನು ಪಡೆದರು. ಮತ್ತು ತುಮಕೂರು ವಿ.ವಿ. ವಿಜ್ಞಾನದ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ ದೊರಕಿತು. ಕಾಲೇಜಿ ಗಣಕ ಯಂತ್ರ ವಿಭಾಗದ ಮುಖ್ಯಸ್ಥರು ಹಾಗು ಪಿ ಜಿ ವಿಭಾಗದ ಕೋ-ಆರ್ಡಿನೇಟರ್ ಆದ ಶ್ರೀಮತಿ.ರಮಣಿ ಆರ್. ರವರು ಬಹುಮಾನವನ್ನು ವಿತರಿಸಿದರು. ವಿದ್ಯಾವಾಹಿನಿ ಸಂಸ್ಥೆಯ ಕೋ-ಆರ್ಡಿನೇಟರ್ ಸಿದ್ದೇಶ್ವರಸ್ವಾಮಿರವರು, ಉಪ ಪ್ರಾಂಶುಪಾಲರು ಶ್ರೀಮತಿ. ಆರುಣ , .ಬಿ.ಸಿ.ಎ.ಬವಿಭಾಗದ ಮುಖ್ಯಸ್ಥರಾದ ಹಂಸ ಕೆ ರವರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.