ತೆಲಂಗಾಣ:
ಹೃತಿಕ್ ರೋಷನ್ ಜೂ ಎನ್ಟಿಆರ್ ನಟನೆಯ ‘ವಾರ್ 2’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದ್ದು, ಇಂದು ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಈ ಹಿಂದೆ ಟೀಸರ್ ಬಿಡುಗಡೆ ಆದಾಗ ಜೂ ಎನ್ಟಿಆರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈಗ ಟ್ರೈಲರ್ ಮೂಲಕ ಜೂ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಇಬ್ಬರೂ ನಟರ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ. ಜೊತೆಗೆ ಒಂದು ಪವರ್ಫುಲ್, ಆಕ್ಷನ್ ಭರಿತ ಟ್ರೈಲರ್ ನೀಡಿದ್ದಾರೆ.
ಹೃತಿಕ್ ರೋಷನ್ ಹಾಗೂ ಜೂ ಎನ್ಟಿಆರ್ ಇಬ್ಬರ ಪಾತ್ರದ ಬಗ್ಗೆ ವಿವರ ನೀಡಿರುವ ನಿರ್ದೇಶಕರು, ಇಬ್ಬರೂ ಸಹ ತಮಗೆ ವಹಿಸಲಾಗಿರುವ ಮಿಷನ್ ಅನ್ನು ಮುಗಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲ, ಯಾರನ್ನಾದರೂ ಕೊಲ್ಲಬಲ್ಲ, ತಮಗೆ ತಾವೇ ಆಯುಧವೇ ಆಗಿರುವ, ದೇಶಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಯೋಧರಾಗಿದ್ದು, ಒಂದೊಮ್ಮೆ ಇಂಥಹಾ ಇಬ್ಬರು ಪರಸ್ಪರ ಎದುರಾಳಿಗಳಾದರೆ ಅದೆಂಥಹಾ ಭೀಕರ ಯುದ್ಧ ಆಗಬಹುದು ಎಂಬ ಪ್ರಶ್ನೆಯನ್ನು ಟ್ರೈಲರ್ ಹುಟ್ಟುಹಾಕಿದೆ. ಆ ಮೂಲಕ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸುವಲ್ಲಿ ಟ್ರೈಲರ್ ಯಶಸ್ವಿಯಾಗಿದೆ.
