ಬೇಸಗೆ ಆರಂಭಕ್ಕೂ ಮುನ್ನ ಕುಡಿಯುವ ನೀರಿಗೆ ಹಾಹಾಕಾರ

ಬೀದರ್‌: 

   ಬೇಸಗೆ ಆರಂಭಕ್ಕೂ ಮುನ್ನವೇ ರಾಜ್ಯದ ವಿವಿಧ ಕಡೆಗಳಲ್ಲಿ ನೀರಿನ ಅಭಾವ ಕಂಡು ಬಂದಿದೆ. ಬೀದರ್‌ನ ಕೆಲವು ತಾಂಡಾದಲ್ಲಿ ಈಗಾಗಲೇ ನೀರಿಗಾಗಿ ಹಾಹಾಕಾರ ಎದ್ದಿದೆ  . ಕೊಡ ಹಿಡಿದು ನಳ್ಳಿಯ ಮುಂದೆ ಜನರು ಕ್ಯೂ ನಿಂತಿರುವುದು ಕಂಡು ಬಂದಿದ್ದು, ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಂಡಾಗಳಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಉಲ್ಬಣಿಸಿದೆ. ಜಂಬಿಗಿ ತಾಂಡಾ, ಗಾನಾ ತಾಂಡಾದಲ್ಲಿ ಈ ಸಮಸ್ಯೆ ಮೀತಿಮೀರಿದೆ.

   ವಿದ್ಯಾರ್ಥಿಗಳು ಶಾಲೆ ತೊರೆದು ಕಿ.ಮೀ.ಗಟ್ಟಲೆ ದೂರ ಹೋಗಿ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ. ಈಗಲೇ ಹೀಗಾದರೆ ಬೇಸಗೆಯಲ್ಲಿ ಹೇಗೆ ಎಂದು ತಾಂಡಾ ನಿವಾಸಿಗಳು ಪ್ರಶ್ನಿಸಿದ್ದಾರೆ. ತಾಂಡಾಗಳಿಗೆ ಕುಡಿಯುವ ನೀರು ಪೂರೈಸಿ ಎಂದು ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. 

 

Recent Articles

spot_img

Related Stories

Share via
Copy link