ಜೂನ್‌ 4ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ನೀರಿನ ವ್ಯತ್ಯಯ….!

ಬೆಂಗಳೂರು 

   ಲೋಕಸಭಾ ಚುನಾವಣೆ ಫಲಿತಾಂಶದ ದಿನ  ಬೆಂಗಳೂರಿನಲ್ಲಿ ನೀರು ವ್ಯತ್ಯಯವಾಗಲಿದೆ. ಕಾವೇರಿ 5ನೇ ಹಂತದ ಕಾಮಗಾರಿಯಿಂದಾಗಿ ಇಡೀ ನಗರಕ್ಕೆ ಇದರ ಎಫೆಕ್ಟ್‌ ಆಗಲಿದೆ.

   ಕಾವೇರಿ-5ನೇ ಹಂತದ ಅನುಷ್ಠಾನದ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂನ್ 4 ಹಾಗೂ 5 ರಂದು ಇಡೀ ನಗರದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ  ಪ್ರಕಟಣೆಯಲ್ಲಿ ತಿಳಿಸಿದೆ.

    ಬೆಂಗಳೂರು ಜಲಮಂಡಳಿಯು ಜೂನ್ 4 ರಂದು ಒಟ್ಟು ಆರು ಕಡೆ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೊಳ್ಳಲು ಉದ್ದೇಶಿಸಿದೆ. ಕಾಮಗಾರಿ ನಡೆಯುವ ಅವಧಿಯಲ್ಲಿ ನೀರು ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ನಂತರ ಜೂನ್ 5 ರಂದು ನಗರದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

   ಮೊದಲ ಹಂತದಲ್ಲಲಿ ಕಾವೇರಿ 1, 2 ಹಾಗೂ 3 ಹಂತಗಳ ನೀರು ಸರಬರಾಜು ಘಟಕದಲ್ಲಿ ಜೂನ್ 4 ರಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಕಾಮಗಾರಿ ನಡೆಸುವುದರಿಂದ 12 ಗಂಟೆ ನೀರು ಪೂರೈಕೆ ಇರುವುದಿಲ್ಲ.

   ಎರಡನೇ ಹಂತದಲ್ಲಿ ಕಾವೇರಿ 4 ನೇ ಹಂತದ 1 ಮತ್ತು 2ನೇ ಫೇಸ್‌ನಲ್ಲಿ ಅದೇ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆ ನೀರು ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಹೀಗಾಗಿ, ಸಾರ್ವಜನಿಕರು ಅಗತ್ಯ ಪ್ರಮಾಣದ ನೀರು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಸಹಕರಿಸುವಂತೆ ಜನಮಂಡಳಿ ಮನವಿ ಮಾಡಿದೆ. 

   ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದ್ದು, ಜಲಮಂಡಳಿ ನೀರು ಸರಬರಾಜು ಮಾಡಲು ಸಿದ್ಧತೆ ನಡೆಸಿದೆ. 110 ಗ್ರಾಮಗಳಿಗೆ ಕಾವೇರಿ ಸಂಪರ್ಕ ನೀಡಲು ಜನರ ಮನೆಬಾಗಿಲಿಗೆ ಜಲಮಂಡಳಿ ತೆರಳಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ.ರಾಮ್​ ಪ್ರಸಾತ್​ ಮನೋಹರ್‌ ತಿಳಿಸಿದರು.

   ಕಾವೇರಿ-5ನೇ ಹಂತದ ಕಾಮಗಾರಿಯನ್ನು ಹಾರೋಹಳ್ಳಿ ಬಳಿ ಬುಧವಾರ ಅವರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ, “ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ಇನ್ನು ಕೆಲವೇ ವಾರಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು ನೀರು ಸರಬರಾಜು ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ನೀರಿನ ಸಮರ್ಪಕ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸುವುದು ಹಾಗೂ ಹೊಸ ಕನೆಕ್ಷನ್‌ಗಳನ್ನು ನೊಂದಾಯಿಸಿಕೊಳ್ಳುವ ಪ್ರಕ್ರಿಯೆ ನಡೆಸಬೇಕಾಗಿದೆ” ಎಂದರು.

  “5ನೇ ಹಂತದ ಯೋಜನೆಯಿಂದ ಬೆಂಗಳೂರು ನಗರಕ್ಕೆ 750 ಎಂ.ಎಲ್‌.ಡಿಯಷ್ಟು ಹೆಚ್ಚು ನೀರು ಲಭ್ಯವಾಗಲಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು 110 ಗ್ರಾಮಗಳಲ್ಲಿ ಎಲ್ಲರೂ ಕಾವೇರಿ ನೀರಿನ ಸಂಪರ್ಕ ಪಡೆಯಲು ಪ್ರೋತ್ಸಾಹಿಸಬೇಕು” ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap