ಜಲಪಾತ ವೀಕ್ಷಣೆಗೆ ತೆರಳಿ ಬದುಕಿ ಬಂದ ಪ್ರವಾಸಿಗರು…..!

ಮುಂಬೈ: 

    ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಪ್ರಖ್ಯಾತ ಅಂಜನೇರಿ ಜಲಪಾತ ವೀಕ್ಷಣೆಗೆ ತೆರಳಿದ ಪ್ರವಾಸಿಗರು ದಿಢೀರ್ ಪ್ರವಾಹದಿಂದಾಗಿ ಅಪಾಯಕ್ಕೆ ಸಿಲುಕಿದ ವಿಡಿಯೋ ವೈರಲ್ ಆಗುತ್ತಿದೆ.

   ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಅಂಜನೇರಿ ಜಲಪಾತ ಪ್ರವಾಸಿ ತಾಣದಲ್ಲಿ ಈ ಘಟನೆ ನಡೆದಿದ್ದು, ಬರೊಬ್ಬರಿ 6 ಗಂಟೆಗಳ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 15ಕ್ಕಿಂತ ಹೆಚ್ಚು ಪ್ರವಾಸಿಗರು ಅಂಜನೇರಿ ಜಲಪಾತ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ದಿಢೀರ್ ಭಾರಿ ಮಳೆ ಸುರಿದಿದ್ದು, ಮಳೆ ಸುರಿಯುತ್ತಲೇ ಜಲಪಾಕ ಉಕ್ಕಿ ಹರಿದಿದೆ. ಪರಿಣಾಮ ಪ್ರವಾಸಿಗರು ನಿಂತಿದ್ದ ಪ್ರದೇಶಕ್ಕೂ ಪ್ರವಾಹದ ನೀರು ನುಗ್ಗಿದ್ದು, ನೋಡ ನೋಡುತ್ತಲೇ ನೀರಿನ ಪ್ರವಾಹ ಹೆಚ್ಚಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಕೂಡಲೇ ಸ್ಥಳಕ್ಕಾಗಮಿಸಿ ತಮ್ಮ ಬುದ್ದಿವಂತಿಕೆ ಬಳಸಿ ಮಾನವ ಸರಪಳಿ ರಚಿಸಿ ಸುಮಾರು 6 ಗಂಟೆಗಳ ಪರಿಶ್ರಮದ ಬಳಿಕ ಎಲ್ಲ ಪ್ರವಾಸಿಗರನ್ನು ರಕ್ಷಿಸಿದ್ದಾರೆ.

    ಕೂಡಲೇ ಅಲ್ಲಿದ್ದ ಪ್ರವಾಸಿಗರು ತಾವೇ ಮಾನವ ಸರಪಳಿ ನಿರ್ಮಿಸಿಕೊಂಡು ನಿಧಾನವಾಗಿ ಮೆಟ್ಟಿಲುಗಳ ಇಳಿದು ಪಕ್ಕದ ಸುರಕ್ಷಿತ ಜಾಗಕ್ಕೆ ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳು ಪ್ರವಾಸಿಗರಿಗೆ ಮಾನವ ಸರಪಳಿ ಮಾರ್ಗದರ್ಶನ ನೀಡಿ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ಸುರಕ್ಷಿತವಾಗಿ ಕೆಳಗೆ ಕರೆ ತಂದಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.ಅರಣ್ಯ ಇಲಾಖೆಯ ರಕ್ಷಣಾ ತಂಡದ ಕ್ಷಿಪ್ರ ಮತ್ತು ಸಂಘಟಿತ ಪ್ರತಿಕ್ರಿಯೆಯು ಸಂಭಾವ್ಯ ಸಾವುನೋವುಗಳನ್ನು ತಡೆದಿದ್ದು, ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ