ನವದೆಹಲಿ:
ವಿಶ್ವದೆಲ್ಲಡೆ ಆರ್ಥಿಕ ಹಿಂಜರಿತ ಮತ್ತು ಲೇ ಆಫ್ ಗಳು ಜಾರಿಯಲ್ಲಿದ್ದರೆ ಇತ್ತ ಭಾರತೀಯ ಮೂಲದ ಕಂಪನಿ ಟಿಸಿಎಸ್ 40000 ಮಂದಿಯನ್ನು ತೆಗೆದುಕೊಳ್ಳುವುದಾಗಿ ಹೇಳುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ದೇಶದ ಅತಿದೊಡ್ಡ ಐಟಿ ರಫ್ತುದಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹೊಸಬರ ಮುಖದಲ್ಲಿ ಮಂದಹಾಸ ಮೂಡಿಸುವ ಘೋಷಣೆ ಮಾಡಿದೆ. Q4 ಗಾಗಿ ಫಲಿತಾಂಶವನ್ನು ಪ್ರಕಟಿಸಿದ ನಂತರ, ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್ ಅವರು 2023-24 ರ ಆರ್ಥಿಕ ವರ್ಷದಲ್ಲಿ 40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಕಂಪನಿ ಯೋಜಿಸಿದೆ ಎಂದು ಹೇಳಿದ್ದಾರೆ.
2022-23ರ ಆರ್ಥಿಕ ವರ್ಷದಲ್ಲಿ ಕಂಪನಿಯು 44 ಸಾವಿರ ಫ್ರೆಶರ್‌ಗಳನ್ನು ನೇಮಿಸಿಕೊಂಡಿದೆ ಎಂದು ಅವರು ಹೇಳಿದರು. ಇದಲ್ಲದೇ ಅನುಭವಿ ವೃತ್ತಿಪರರ ದಾಖಲೆ ನೇಮಕಾತಿ ನಡೆದಿದೆ. ಆಫರ್ ಮಾಡಿರುವ ಎಲ್ಲ ಫ್ರೆಷರ್‌ಗಳಿಗೂ ಕಂಪನಿಯಿಂದ ಕೆಲಸ ಖಂಡಿತ ಸಿಗುತ್ತದೆ ಎಂದು ಕಂಪನಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ