ನವದೆಹಲಿ:
ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ತಾಂತ್ರಿಕ ದೋಷದಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆ ತರಲು ನಾಸಾ ಅನೇಕ ಮಾರ್ಗಗಳನ್ನು ಅನ್ವೇಷಿಸುತ್ತಿದೆ.ಈ ನಡುವೆ ಸುನಿತಾ ಕರೆತರುವಲ್ಲಿ ನಾಸಾಗೆ ಭಾರತ ಸಹಾಯ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.
ಇದಕ್ಕೆ ಉತ್ತರಿಸಿರುವ ಇಸ್ರೋದ ಮುಖ್ಯಸ್ಥ ಎಸ್ ಸೋಮನಾಥ್, ಸುನೀತಾ ವಿಲಿಯಮ್ಸ್ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ರಷ್ಯಾ ಮತ್ತು ಯುಎಸ್ಗೆ ಮಾತ್ರ ಸಹಾಯ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಭಾರತದಿಂದ ನೇರವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅವರನ್ನು ರಕ್ಷಿಸಲು ಕ್ರಾಫ್ಟ್ ಕಳುಹಿಸುವ ಸಾಮರ್ಥ್ಯ ನಮಗಿಲ್ಲ. ಯುಎಸ್ ಕ್ರೂ ಡ್ರ್ಯಾಗನ್ ವಾಹನವನ್ನು ಹೊಂದಿದೆ. ರಷ್ಯಾ ಸೋಯುಜ್ ಹೊಂದಿದೆ. ಇದರ ಮೂಲಕ ರಕ್ಷಣಾ ಕಾರ್ಯ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.ಇನ್ನು ಗಗನಯಾತ್ರಿಗಳನ್ನು ಮರಳಿ ಭೂಮಿಗೆ ಕರೆತರಲು ಎಲೋನ್ ಮಸ್ಕ್ನ ಸ್ಪೇಸ್ ಎಕ್ಸ್ ಕ್ರ್ಯೂ-9 ಮಿಷನ್ ಮೂಲಕ ನಾಸಾ ಯೋಚಿಸುತ್ತಿದೆ. 2025ರಲ್ಲಿ ಕ್ರ್ಯೂ-9ನಲ್ಲಿ ಹಿಂದಿರುಗಲಿದ್ದಾರೆ ಎಂದು ಸೋಮನಾಥ್ ಮಾಹಿತಿ ನೀಡಿದ್ದಾರೆ.








