ಬಿಜೆಪಿ ಜೊತೆಗಿನ ಸಂಬಂಧ ನಮಗೆ ಬೇಡ ಎಂದ ಬಿಜೆಡಿ…!

ಒಡಿಶಾ:

    ಒಡಿಶಾದಲ್ಲಿ ಹಲವು ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸಿಕೊಂಡು ಬರುತ್ತಿದ್ದ ಬಿಜು ಜನತಾ ದಳ, ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ ಕೇಸರಿ ಜೊತೆಗಿನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು, ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡುವುದಾಗಿ ಘೋಷಿಸಿದೆ. 

    ಸೋಮವಾರ ಪಕ್ಷದ ಒಂಬತ್ತು ರಾಜ್ಯಸಭಾ ಸಂಸದರೊಂದಿಗೆ ಸಭೆ ನಡೆಸಿದ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್, ಜೂನ್ 27 ರಂದು ಪ್ರಾರಂಭವಾಗುವ ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಮೇಲ್ಮನೆಯಲ್ಲಿ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮುವಂತೆ ಸೂಚಿಸಿದರು. ರಾಜ್ಯದ ಹಿತಾಸಕ್ತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಕ್ತವಾದ ರೀತಿಯಲ್ಲಿ ಪ್ರಸ್ತಾಪಿಸಲು ಸಂಸದರಿಗೆ ಹೇಳಿದ್ದಾರೆ. 

    ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯ ಪಕ್ಷದ ನಾಯಕ ಸಸ್ಮಿತ್ ಪಾತ್ರ, “ಬಿಜೆಡಿ ಸಂಸದರು ಈ ಬಾರಿ ಕೇವಲ ಸಮಸ್ಯೆಗಳ ಬಗ್ಗೆ ಮಾತನಾಡಲು ಸೀಮಿತರಾಗಲ್ಲ. ಆದರೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಒಡಿಶಾದ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದರೆ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದರು. ಒಡಿಶಾಗೆ ವಿಶೇಷ ಸ್ಥಾನಮಾನದ ಬೇಡಿಕೆ, ಕಳಪೆ ಮೊಬೈಲ್ ಸಂಪರ್ಕ ಮತ್ತು ರಾಜ್ಯದಲ್ಲಿ ಕಡಿಮೆ ಬ್ಯಾಂಕ್ ಶಾಖೆಗಳು ಕುರಿತು ಧ್ವನಿ ಎತ್ತಲಾಗುವುದು ಎಂದು ಅವರು ಹೇಳಿದರು.

     9 ರಾಜ್ಯಸಭೆ ಸಂಸದರು ವಿರೋಧ ಪಕ್ಷದವರಾಗಿ ಪ್ರಬಲರಾಗಿರುವಂತೆ, ತಮ್ಮ ರಾಜ್ಯದ ಜನರ ಹಕ್ಕನ್ನು ರಕ್ಷಿಸಲು ಹೋರಾಡುವಂತೆ ಪಟ್ನಾಯಕ್ ಸೂಚನೆ ನೀಡಿದ್ದಾರೆ. ಬಿಜೆಪಿಗೆ ಇನ್ನು ಮುಂದೆ ಬೆಂಬಲ ನೀಡಲ್ಲ, ಕೇವಲ ವಿರೋಧ ಪಕ್ಷವಷ್ಟೇ,. ರಾಜ್ಯದ ಹಿತಾಸಕ್ತಿ ರಕ್ಷಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧ ಎಂದು ಅವರು ಹೇಳಿದರು. 

   ರಾಜ್ಯಸಭೆಯಲ್ಲಿ ಬಿಜೆಡಿಯ 9 ಸಂಸದರಿದ್ದಾರೆ. ಆದರೆ, ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಒಡಿಶಾ ರಚನೆಯಾದ 1997ರ ನಂತರ ಇದೇ ಮೊದಲ ಬಾರಿಗೆ ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. ಅಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಕಳೆದ 24 ವರ್ಷಗಳಿಂದ ಆಡಳಿತ ನಡೆಸಿದ ಬಿಜೆಡಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಂಸತ್ತಿನಲ್ಲಿ ಕಳೆದ ಹಲವು ವರ್ಷಗಳಿಂದ ಅನೇಕ ವಿಚಾರಗಳಲ್ಲಿ ಬಿಜೆಪಿಯನ್ನು ಬಿಜೆಡಿ ಬೆಂಬಲಿಸುತ್ತಾ ಬಂದಿತ್ತು. 2019 ಮತ್ತು 2024ರಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗೆಲ್ಲುವಲ್ಲಿಯೂ ನೆರವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link