ಹೆದ್ದಾರಿಗಳ ಅಭಿವೃದ್ಧಿ : ಕರ್ನಾಟಕಕ್ಕೆ 64 ಸಾವಿರ ಕೋಟಿ ರೂಪಾಯಿ : ಮೋದಿ

ಬೆಂಗಳೂರು :

     ರಾಜ್ಯಗಳಲ್ಲಿ ಅಭಿವೃದ್ಧಿಯು ದೊಡ್ಡ ನಗರಗಳಿಗೆ ಸಿಮೀತವಾಗಿತ್ತು. ಆದರೆ ಈಗ ಎರಡೂ ಸರ್ಕಾರಗಳ ಪ್ರಯತ್ನದಿಂದ ಗ್ರಾಮಗಳು ಹಾಗೂ ಮೂರನೇ ಸ್ಥರದ ನಗರಗಳು ಅಭಿವೃದ್ಧಿಯಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಶಿವಮೊಗ್ಗ ವಿಮಾನ ನಿಲ್ದಾಣ, ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ, ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹೊಸ ರೈಲು ಮಾರ್ಗ, ಕೋಟೆ ಗಂಗೂರು ರೈಲ್ವೆ ಕೋಚಿಂಗ್ ಡಿಪೋ ಹಾಗೂ 953 ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಮಿಷನ್ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಡಿಕೆ ಹಾರ ಹಾಕಿ, ಶಾಲು ಹೊದಿಸಿ, ಗೌರವಿಸಲಾಯಿತು. 80 ವರ್ಷ ಪೂರೈಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ಶಾಲು ಹೊದಿಸಿ, ಸಾಂಕೇತಿಕ ನೇಗಿಲು ನೀಡಿ ಗೌರವಿಸಿದರು.

     ಬಳಿಕ ಪ್ರಧಾನಿ, ಎರಡು ಮೂರನೇ ನಾವು ನೈಸರ್ಗಿಕ ಮತ್ತು ಔದ್ಯೋಗಿಕ ಪ್ರಗತಿಯ ಜೊತೆಗೆ, ಕೇಂದ್ರ, ರಾಜ್ಯ ಸರ್ಕಾರದ ಸಮನ್ವಯತೆಯಿಂದ ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗಿದೆ. ರೈಲ್ವೆ, ಹೆದ್ದಾರಿ, ವೈಮಾನಿಕ ಕ್ಷೇತ್ರದಲ್ಲಿ ಸಂಪರ್ಕ ಕ್ರಾಂತಿಯಾಗಿದೆ. ಇಂದು ನವಭಾರತದ ಸಬ್ ಕಾ ವಿಕಾಸ್ ಮತ್ತು ಸಬ್ ಕಾ ಪ್ರಯಾಸ್ ಯೋಜನೆ ಅನುಷ್ಠಾನದಿಂದ ರಾಜ್ಯದ ಸಾಕಷ್ಟು ಪ್ರತಿಯೊಂದು ನಗರಗಳಿಗೂ ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. ನಂತರ ಮಾತನಾಡಿದ ಅವರು, ದೇಶದಲ್ಲಿ ಕಳೆದ 9 ವರ್ಷಗಳ ಹಿಂದೆ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ನಮ್ಮ ಸರ್ಕಾರದ ಕಳೆದ ಮುಂದುವರಿಕೆಯಿಂದ ಮತ್ತೆ 74 ವಿಮಾನ ನಿಲ್ದಾಣಗಳು ಕಾರ್ಯರೂಪಕ್ಕೆ ಬಂದು ಪ್ರತಿಯೊಂದು ಚಿಕ್ಕ ನಗರಗಳಿಗೂ ವಿಮಾನಯಾನ ಸೇವೆಯನ್ನು ಒದಗಿಸಿದ್ದೇವೆ ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನ್ವಯದ ಕಾರ್ಯಗಳಿಂದ ಕೆಲಸ ಮಾಡುತ್ತಿರುವುದರಿಂದ ಕರ್ನಾಟಕ ಪ್ರಗತಿಯತ್ತ ಸಾಗಿದ್ದು, ಅನೇಕ ಯೋಜನೆಗಳಿಂದ ರೈತರು, ಯುವಪೀಳಿಗೆ, ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ. ವಾಯು ಸಂಪರ್ಕ, ರಸ್ತೆ-ಹೆದ್ದಾರಿ ಹಾಗೂ ರೈಲ್ವೆ ಯೋಜನೆಗಳಿಂದ ಈ ಭಾಗದ ಜಿಲ್ಲೆಗಳು ಪ್ರಗತಿಯಾಗಲಿವೆ, ಅಲ್ಲದೇ ಹೆಚ್ಚಿನ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಯಾಗಲಿದ್ದು, ಕೃಷಿ ಉತ್ಪನ್ನಗಳಿಗೂ ಮಾರುಕಟ್ಟೆ ವಿಸ್ತಾರಗೊಂಡು ಜನರ ಜೀವನಮಟ್ಟ ಸುಧಾರಿಸಲಿದೆ. ಹೊಸ ನಿಲ್ದಾಣವು ಕರ್ನಾಟಕದ ಸಂಪ್ರದಾಯ ಮತ್ತು ತಂತ್ರಜ್ಞಾನದೊAದಿಗೆ ಸಮ್ಮಿಳಿತಗೊಂಡಿದೆ. ವಿಮಾನ ನಿಲ್ದಾಣವು ಪ್ರಮುಖ ಪ್ರವಾಸಿ ತಾಣಗಳಿಗೆ ಹಾಗೂ ಮಲೆನಾಡು ಭಾಗಗಳಿಗೆ ಸಂಪರ್ಕ ಒದಗಿಸಲಿದೆ ಎಂದರು.

    ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇಂದು ಭಾರತ ಆರ್ಥಿಕವಾಗಿ ಸದೃಢವಾಗಿದ್ದು, ಇಡೀ ಪ್ರಪಂಚ ದೇಶದತ್ತ ನೋಡುತ್ತಿದೆ. ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿರುವುದು ಇದಕ್ಕೆ ನಿರ್ದಶನವಾಗಿದೆ. ತಂತ್ರಜ್ಞಾನ, ಸಂಶೋಧನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ವಿಜಯಪುರ, ಹಾಸನ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ದೇಶದ ಆರ್ಥಿಕ ಸದೃಢತೆಗೆ ಕರ್ನಾಟಕದ ಕೊಡುಗೆ ಗಣನೀಯವಾಗಿದೆ. ವಿದೇಶಿ ಹೂಡಿಕೆ ತಂತ್ರಜ್ಞಾನ, ಸಂಶೋಧನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಅಭಿವೃದ್ಧಿ ಕ್ರಾಂತಿ ಸಾಧಿಸಿದೆ ಎಂದರು. ಜಿ-20 ಅಧ್ಯಕ್ಷ ಸ್ಥಾನ, ಜಗತ್ತಿನ ದೃಷ್ಟಿ ಕೇಂದ್ರೀಕರಿಸಿರುವ ದೇಶದ ಆರ್ಥಿಕತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆ ಕಾರಣ. ಕಳೆದ 10 ವರ್ಷಗಳಲ್ಲಿ ಕೇವಲ ಹೆದ್ದಾರಿಗಳ ಅಭಿವೃದ್ಧಿಗೆ ಕರ್ನಾಟಕಕ್ಕೆ 64 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದು, ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯ ಮತ್ತು ಅಭಿವೃದ್ಧಿಗೆ ಸಾಕ್ಷಿ ಎಂದರು.

     ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಶಿವಮೊಗ್ಗ ವಿಮಾನ ನಿಲ್ದಾಣ ಆರಂಭವಾಗಿರುವುದರಿAದ ಮಲೆನಾಡಿನ ಜನರ ಕನಸು ನನಸಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ್ದು, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾಗೆ ಅವರು ಪ್ರೇರಣೆಯಾಗಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿಯೂ ಪಟ್ಟಣದ ಸವಲತ್ತುಗಳು ದೊರೆಯುವಂತಾಗಬೇಕು ಎಂಬುದು ಪ್ರಧಾನಿ ಅವರ ಆಶಯವಾಗಿದೆ ಎಂದರು. ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಕಟ್ಟಡ ಪ್ರತಿ ಗಂಟೆಗೆ 300 ಪ್ರಯಾಣಿಕರನ್ನು ನಿರ್ವಹಿಸಲಿದೆ. ಈ ವಿಮಾನ ನಿಲ್ದಾಣ ಶಿವಮೊಗ್ಗ ಮತ್ತು ಅದರ ಸುತ್ತಮುತ್ತಲಿನ ಮಲೆನಾಡು ಭಾಗಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ.

     ಪ್ರಧಾನಮಂತ್ರಿ ಅವರು, ಶಿವಮೊಗ್ಗದಲ್ಲಿ 2 ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ಮತ್ತು ಕೋಟೆಗಂಗೂರು ರೈಲ್ವೆ ಬೋಗಿ ಘಟಕ ಸೇರಿದೆ. ಶಿವಮೊಗ್ಗ- ರಾಣೆಬೆನ್ನೂರು ರೈಲು ಮಾರ್ಗವನ್ನು ಸುಮಾರು 990 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಇದು ಮಲೆನಾಡು ಭಾಗದ ಬೆಂಗಳೂರು-ಮುAಬೈ ಮುಖ್ಯ ರಸ್ತೆಗೆ ಸಂಪರ್ಕ ಒದಗಿಸಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap