ಹಾಸನ
ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾದಂತೆ ಕ್ಷೇತ್ರ ರಾಜಕಾರಣ ರಂಗು ಪಡ್ದುಕೊಳ್ಳುತ್ತಿದೆ. ಇಂತಹ ಕ್ಷೇತ್ರಗಳಲ್ಲಿ ಒಂದಾದ ಹಾಸನ ವಿಧಾನಸಭಾ ಟಿಕೆಟ್ ಅಭ್ಯರ್ಥಿಯನ್ನ ದಳಪತಿಗಳು ಘೋಷಣೆ ಮಾಡುವ ಮೊದಲೇ ಹಾಸನದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಕಾಶ್ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನ ಆರಂಭಿಸಿದ್ದಾರೆ. ಇನ್ನು ಹಾಸನ ಟಿಕೆಟ್ ವಿಚಾರವಾಗಿ ಬೀದಿಯಲ್ಲಿ ಅಲ್ಲದೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇದರ ಬೆನ್ನೆಲೆ ಹಾಸನ ಟಿಕೆಟ್ ಆಕಾಂಕ್ಷಿ ಹಾಗು ದೇವೆಗೌಡರ ಸೊಸೆಯೂ ಆದ ಭವಾನಿ ರೇವಣ್ಣ ಅವರು ಹೆಚ್ ಡಿ ಕುಮಾರಸ್ವಾಮಿ ಹಾಡಿ ಹೊಗಳದ್ದಾರೆ . 2023 ರ ಮುಂದಿನ ಮುಖ್ಯಮಂತ್ರಿ ಕುಮಾರಣ್ಣನೇ ಆಗ್ತಾರೆ. ಕುಮಾರಣ್ಣ ಬಿಸಿಲನ್ನ ಲೆಕ್ಕಿಸದೇ ರಾಜ್ಯಾದ್ಯಂತ ಪ್ರಚಾರ ಕಾರ್ಯವನ್ನ ನಡೆಸಿದ್ದಾರೆ. ಕಳೆದ ಬಾರಿ ಪೂರ್ಣವಧಿ ಅವಕಾಶ ನೀಡಿದ್ದರೆ ಇನ್ನು ಅಭಿವೃದ್ಧಿ ಕೆಲಸ ಮಾಡು ತ್ತಿದ್ದರು . ಆದರೆ ಈ ಬಾರಿ ಅವರೇ ಮುಖ್ಯಮಂತ್ರಿ ಆಗ್ತಾರೆ ಅವರಿಗೆ ಬಲ ತುಂಬಬೇಕು ಎಂದು ಭವಾನಿ ರೇವಣ್ಣ ಹೇಳಿದ್ದಾರೆ.








