ವಿಪತ್ತಿನಿಂದ ರಕ್ಷಿಸಿಕೊಳ್ಳುವ ಅರಿವು ಅಗತ್ಯ

ತುಮಕೂರು

    ರಾಸಾಯನಿಕ, ಜೈವಿಕ, ವಿಕಿರಣ ಶಾಸ್ತç, ಪರಮಾಣು ತಾರ್ಕಿಕ ದುರಂತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ವಿಪತ್ತುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಬಗ್ಗೆ ಅರಿವು ಹೊಂದಿರುವುದು ಅತ್ಯಗತ್ಯ ಎಂದು ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ತಿಳಿಸಿದರು.

    ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ NDRF ಸಹಯೋಗದಲ್ಲಿ ಕುಣಿಗಲ್ ತಾಲ್ಲೂಕು ಚಾಕೇನಹಳ್ಳಿ ಗ್ರಾಮದ ಬಳಿಯಿರುವ  ಬಾಟ್ಲಿಂಗ್ ಪ್ಲಾಂಟ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಣುಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮವನ್ನು ವೀಕ್ಷಿಸಿ ಮಾತನಾಡಿದ ಅವರು, ಇಂತಹ ಅಣುಕು ಪ್ರದರ್ಶನಗಳಿಂದ ತುರ್ತು ಪರಿಸ್ಥಿತಿಯಲ್ಲಿ ವಿಪತ್ತುಗಳನ್ನು ನಿರ್ವಹಿಸುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಲಿದೆ ಎಂದರು.

    ಅಣುಕು ಪ್ರದರ್ಶನದಲ್ಲಿ ಹೇಗೆ ಚಾಕಚಕ್ಯತೆಯಿಂದ ಭಾಗವಹಿಸಿ ತುರ್ತು ಪರಿಸ್ಥಿತಿಯನ್ನ ನಿಭಾಯಿಸಿದ ರೀತಿಯಲ್ಲಿ ತುರ್ತು ಸಂದರ್ಭಗಳಲ್ಲೂ ಸಹ ಇದೇ ರೀತಿ ಸಮನ್ವಯದಿಂದ ತಾವುಗಳು  ಅಗ್ನಿಶಾಮಕ, ಪೋಲೀಸ್, ವೈದ್ಯಕೀಯ ವಿಭಾಗದವರು ಬರುವವರೆಗೆ ಕಾಯದೆ ತಾವೇ ನಿಭಾಯಿಸಬೇಕೆಂದು ಹೆಚ್‌ಪಿಸಿಎಲ್ ಕಂಪನಿಯವರಿಗೆ ತಿಳಿಸಿದರು.

   ತಹಶೀಲ್ದಾರ್ ಮಹಬಲೇಶ್ವರ್ ಮಾತನಾಡಿ, ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಸ್ಥಳೀಯ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.  ಅಸಿಸ್ಟೆಂಟ್ ಕಮಾಂಡೆAಟ್ ಜೆ ಸೆಂಥಿಲ್ ಕುಮಾರ್ ಮಾತನಾಡಿ, ತುರ್ತು ಪರಿಸ್ಥಿತಿ ಯಾವಾಗ, ಹೇಗೆ ಸಂಭವಿಸುತ್ತದೆ ಎಂದು ಯಾರಿಗೂ ಕೂಡ ಒಂದು ಸಣ್ಣ ಊಹೆ ಇರುವುದಿಲ್ಲ.

    ಎಲ್ಲಾ ತುರ್ತು ಪರಿಸ್ಥಿತಿಯಲ್ಲಿಯೂ ಸಮನ್ವಯತೆಯನ್ನು ಇದೇ ರೀತಿ ಕಾಪಾಡಿಕೊಳ್ಳಬೇಕು. ಮಾನವ ರಕ್ಷಣೆ ನಮ್ಮ ಹೊಣೆ ಎನ್ನುವ ಧ್ಯೇಯದೊಂದಿಗೆ ವಿಪತ್ತು ನಿರ್ವಹಣೆ ಮಾಡಬೇಕು. ದೂರವಾಣಿ ಸಂಖ್ಯೆಗಳನ್ನು ನವೀಕರಿಸುತ್ತಿರಬೇಕು ಎಂದು ಹೇಳಿದರು. ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದಿಂದ ನೇಮಕ ಮಾಡಲಾಗಿದ್ದ 5 ಮಂದಿ ಪರಿವೀಕ್ಷಕರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

    ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ|| ಡಿ.ಎನ್ ಮಂಜುನಾಥ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಲಿಂಗಪ್ಪ,  ದೊರೆಮುನಿ ಭೀಮಯ್ಯ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಪರಿಸರ ಅಧಿಕಾರಿ ಶಿವಮೂರ್ತಿ, ಪಲ್ಲವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಮುನಿಯಪ್ಪ, ಸಬ್ ಇನ್ಸ್ಪೆಕ್ಟರ್ ಬಿ.ಎನ್ ನಾಗಯ್ಯ, ಜಿಲ್ಲಾ ನಿರ್ವಹಣೆ ಪರಿಣಿತೆ ಲತಾ ಜಿ.ಬಿ, ಓಆಖಈ ತಂಡದ ಸದಸ್ಯರು, ಕಂಪನಿಯ ಆಪರೇಷನ್ ಮ್ಯಾನೇಜರ್ ಸುರೇಶ್, ಪ್ರವೀಣ್, ಮಾರ್ಷಲ್ ಡಿ, ದುರ್ಗೇಶ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap