ನಾವು ಯಾರಿಗೂ ಟಿಕೆಟ್‌ ಭರವಸೆ ನೀಡಿ ಬರಮಾಡಿಕೊಂಡಿಲ್ಲ : ಡಿ ಕೆ ಶಿ

ಬೆಂಗಳೂರು

      ಕಾಂಗ್ರೆಸ್‌ ಸದ್ಯ ಬಿಡುಗಡೆ ಮಾಡಿರುವ ಎರಡೂ ಪಟ್ಟಿಯಲ್ಲಿ ಸ್ಥಾನ ಸಿಗದವರು ಕ್ಷೇತ್ರಗಳಲ್ಲಿ ಉತ್ತಮ ಅಭಿಮಾನಿ ಬಳಗ ಮತ್ತು ನಂಬಿಕೆ ಹೊಂದಿರುವವರಿಗೆ ಟಿಕೆಟ್‌ ಕೈ ತಪ್ಪಿದೆ ಮತ್ತು ಅವರು ಟಿಕೆಟ್‌ ಸಿಗದ ಹಿನ್ನೆಲೆ ತಮ್ಮ ದಾರಿ ತಾವು ನೋಡಿಕೊಳ್ಳವ ಇರಾದೆಯನ್ನು ಬಂಡಾಯದ ಬಾವುಟ ಪ್ರದರ್ಶಿಸುವವರು ತೋರಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. 

     ಇದಕ್ಕೆ ತಾಜಾ ಉದಾ ಎರಡನೆ ಪಟ್ಟಿ ಬಿಡುಗಡೆಯಾದ ಮಾರನೆ ದಿನವೇ ತುಮಕೂರಿನ ಹಿರಿಯ ಕಾಂಗ್ರೆಸ್‌ ಮುಖಂಡ ಎಸ್‌ ಶಫಿ ಅಹಮದ್‌ ಅವರು ತಮ್ಮ ಅಳಿಯ ಮತ್ತು ಮಾಜಿ ಶಾಸಕ ಡಾ.ರಫೀಕ್‌ ಅಹಮದ್‌ ಅವರಿಗೆ ಟಿಕೆಟ್‌ ಕೊಡದ ಕಾರಣ ತಮ್ಮ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದರು ಮತ್ತು ಮಾಜಿ ಶಾಸಕರೂ ಆದ ಡಾ.ರಫೀಕ್‌ ಅಹಮದ್‌ ಅವರು ಎರಡು ದಿನದ ನಂತರ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು .

     ಇನ್ನು ಜೆಡಿಎಸ್‌ ಪಕ್ಷವನ್ನ ತೊರೆದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭರವಸೆ ಮೇಲೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ವೈಎಸ್‌ ವಿ ದತ್ತಾ ಅವರಿಗೆ ಕಡೂರಿನಿಂದ ಟಿಕೆಟ್‌ ಸಿಗುತ್ತೇ ಎಂಬ ನಿರೀಕ್ಷೆಯಲ್ಲಿದ್ದರೂ ಆದರೇ ಕಡೂರಿನಿಂದ ಆನಂದ್‌ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ನೀಡಿದ್ದು, ವೈಎಸ್‌ ವಿ ದತ್ತಾ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‌ ನಾಯಕರ ವಿರುದ್ದ ಅಸಮಾಧಾನಗೊಂಡಿದ್ದಾರೆ.

ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳ ಬೇಕಾದರೂ ಯಾರಿಗೂ ಟಿಕೆಟ್ ಭರವಸೆ ನೀಡುವುದಿಲ್ಲ. ಬೇಷರತ್ತಿನಿಂದ ಸೇರಿಸಿಕೊಳ್ಳುತ್ತೇವೆ. ಹಾಲಿ ಶಾಸಕರು ಬಂದರೂ ಅವರು ಕಾರ್ಯಕರ್ತರಾಗಿ ದುಡಿಯಲು ಬಯಸುತ್ತೇವೆ, ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಕೆಲವರಿಗೆ ಆಕ್ರೋಶ ಇರುತ್ತದೆ. ನಾವು ಅದನ್ನು ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap