ನೀವು ಸ್ವತಂತ್ರವಾಗಿ ನಿಲ್ಲಿ ನಾವು ಗೆಲ್ಲಿಸ್ತೀವಿ : ದತ್ತಾ ಅಭಿಮಾನಿಗಳು

ಚಿಕ್ಕಮಗಳೂರು

      ಜೆಡಿಎಸ್‌ ಪಕ್ಷದಲ್ಲಿದಷ್ಟು ದಿನ  ದೇವೇಗೌಡರ ಮಾನಸ ಪುತ್ರನಂತಿದ್ದ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಕೆಲ ನಕಾರಾತ್ಮಕ ಬೆಳವಣಿಗೆಯಿಂದ ಜೆಡಿಎಸ್ ಸಖ್ಯ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಕಡೂರು ಕಾಂಗ್ರೆಸ್ ಹಾಗೂ ದತ್ತಾ ಅವರ ಅಭಿಮಾನಿಗಳಿಗೆ ಆನೆ ಬಲ ಬಂದಿತ್ತು.

     ಈ ಹಿಂದೆ ಕಾಂಗ್ರೆಸ್ ಪಡಸಾಲೆಯಲ್ಲಿ ವೈ.ಎಸ್.ವಿ.ದತ್ತಾ ಅವರಿಗೆ ಟಿಕೆಟ್ ಎಂದು ಹೇಳಲಾಗ್ತಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಕಾಂಗ್ರೆಸ್‌ ವರಿಷ್ಠರು ಕೆ.ಎಸ್.ಆನಂದ್‍ಗೆ ಮಣಿ ಹಾಕಿದ್ದಾರೆ. ಇದರಿಂದ ದತ್ತಾ ಸೇರಿದಂತೆ ಅವರ ಅಪಾರ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿತ್ತು. ಹೀಗಾಗಿ ಅಭಿಮಾನಿಗಳು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ದತ್ತಾ ಕೂಡ ಇದು ಅಭಿಮಾನಿಗಳ ಆತ್ಮಗೌರವ-ಸ್ವಾಭಿಮಾನದ ಪ್ರಶ್ನೆ ಅಂತ ಭಾವನಾತ್ಮಕ ಪತ್ರ ಬರೆದು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದ್ದರು.

      ಇದೀಗ, ವೈ.ಎಸ್.ವಿ.ದತ್ತಾ ಅವರ ಮನೆಗೆ ಭೇಟಿ ನೀಡ್ತಿರೋ ಅಭಿಮಾನಿಗಳು ಕಾಂಗ್ರೆಸ್ ಟಿಕೆಟ್ ಕೊಡದಿದ್ರೆ ಏನಂತೆ. ಬೇಡ. ನೀವು ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಿ ನಾವು ಗೆಲ್ಲಿಸ್ತೀವಿ ಅಂತ ಶಪಥಗೈದಿದ್ದಾರೆ. ದತ್ತ ಕೂಡ ಕಡೂರಲ್ಲಿ 300 ಮತ ಹಾಗೂ ಹಣ ಬಲವೂ ಇಲ್ಲದ ಸಣ್ಣ ಜಾತಿ ನಂದು. ಜನ ನನ್ನ 47 ಸಾವಿರ ಮತಗಳ ಅಂತರದಿಂದ ಗೆಲ್ಲಸಿದ್ದರು. ನಾನು ಸೋತಾಗಲೂ ಎರಡನೇ ಸ್ಥಾನದಲ್ಲೇ ಇದ್ದೆ. ಜನ ಹೇಗೆ ಹೇಳುತ್ತಾರೋ ಹಾಗೇ ಮಾಡುತ್ತೇನೆ ಎಂದು ಹೇಳಿದ್ದಾರೆ

      ಇನ್ನು ದತ್ತಾ ಅವರ ಭಾವನಾತ್ಮಕ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕಡೂರಿನ ಕಾಂಗ್ರೆಸ್ ಅಭ್ಯರ್ಥಿ ಆನಂದ್, ದತ್ತಾ ಅವರ ಮನೆಗೆ ಭೇಟಿ ನೀಡಿ ಬಂಡಾಯವನ್ನು ಶಮನ ಮಾಡಲು ಮುಂದಾಗಿದ್ದಾರೆ. ಆದರೆ, ವೈ.ಎಸ್.ವಿ.ದತ್ತಾ ಅವರು ಎಲ್ಲವನ್ನೂ ಕಾರ್ಯಕರ್ತರ ಮೇಲೆ ಹಾಕಿ, ನನ್ನದೇನು ಇಲ್ಲ. ನನಗೆ ಅಭಿಮಾನಿಗಳೇ ದೇವರು. ನನ್ನನ್ನ ಬೆಳೆಸಿದ್ದೇ ಅವರು. ಅವರು ಹೇಳಿದಂತೆ, ನಾನು ಮಾಡುತ್ತೇನೆ ಎಂದು ಕಾಂಗ್ರೆಸ್‌ ವಿರುದ್ಧದ ಬಂಡಾಯವನ್ನು ಶಮನ ಮಾಡದೇ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap