ನಟ ವಿಶಾಲ್‌ ಗೆ ಏನಾಗಿದೆ : ಮಾತನಾಡುವಾಗ ತಡವರೆಸಿದ್ದಾದರೂ ಏಕೆ ….?

ಚೆನ್ನೈ:

     ತಮಿಳು ನಟ ವಿಶಾಲ್ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಮಾಸ್ ಆಗಿ ಗಮನ ಸೆಳೆಯುತ್ತಾರೆ. ಯಾವುದೇ ವಿಚಾರ ಇದ್ದರೂ ನೇರ ಮಾತುಗಳಲ್ಲಿ ಹೇಳುತ್ತಾರೆ. ಯಾರೇ ಪ್ರಶ್ನೆ ಮಾಡಿದರೂ ಅವರಿಗೆ ಉತ್ತರ ನೀಡುತ್ತಾರೆ. ಇಂಥ ವಿಶಾಲ್ ಅವರು ಈಗ ಸಖತ್ ಡಲ್ ಆಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಮದ ಗಜ ರಾಜ’ ಸಿನಿಮಾದ ಪ್ರೀ ರಿಲೀಸ್ ಈವೆಂಟ್​ಗೆ ಆಗಮಿಸಿದ್ದರು. ಆಗ ಅವರ ಕೈ ನಡುಗಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

 
    ಅವರ ಮಾತುಗಳು ನೇರವಾಗಿ ಇರುತ್ತಿದ್ದವು. ಆದರೆ, ಮೊದಲಿದ್ದ ವಿಶಾಲ್ ಈಗ ಕಾಣೆ ಆಗಿದ್ದಾರೆ. ಈಗ ಕೇಳಿ ಬರುತ್ತಿರುವ ಸ್ಪಷ್ಟನೆ ಏನೆಂದರೆ ಅವರಿಗೆ ಆ ಸಂದರ್ಭದಲ್ಲಿ ತೀವ್ರ ಜ್ವರ ಇತ್ತು. ಆದಗ್ಯೂ ಅವರು ವೇದಿಕೆ ಏರಿ ಮಾತನಾಡಿದ್ದರು. ಜ್ವರ ಇದ್ದ ಕಾರಣದಿಂದಲೇ ಅವರಿಗೆ ನಡುಕ ಶುರುವಾಗಿತ್ತು ಎನ್ನಲಾಗಿದೆ.ಸದ್ಯ ವಿಶಾಲ್ ಬಗ್ಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜ್ವರದ ಮಧ್ಯೆಯೂ ಅವರು ಕಮಿಟ್​ಮೆಂಟ್ ಮರೆಯಲಿಲ್ಲ ಎಂದು ಅನೇಕರು ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ‘ವಿಶಾಲ್ ಡೆಡಿಕೇಷನ್. ಅವರು ಜ್ವರದ ಮಧ್ಯೆಯೂ ಸಿನಿಮಾ ಪ್ರಮೋಟ್ ಮಾಡಿದ್ದಾರೆ’ ಎಂದಿದ್ದಾರೆ ಅಭಿಮಾನಿಗಳು.
   ‘ಮದ ಗಜ ರಾಜ’ ಸಿನಿಮಾದಲ್ಲಿ ಅಂಜಲಿ, ಸೋನು ಸೂದ್​, ವರಲಕ್ಷ್ಮೀ ಶರತ್​ಕುಮಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾನ ಸುಂದರ್ ಸಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ 2013ರಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, 12 ವರ್ಷಗಳ ಬಳಿಕ ಸಿನಿಮಾ ರಿಲೀಸ್ ಆಗುತ್ತಿದೆ. ಜನವರಿ 12ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.

Recent Articles

spot_img

Related Stories

Share via
Copy link