2ನೇ ವಿಶ್ವ ಯುದ್ದದಲ್ಲಿ ಕಾಣೆಯಾಗಿದ್ದ ಹಡಗು ಪತ್ತೆ : ಅಷ್ಟಕ್ಕೂ ಆಗಿದ್ದಾದರೂ ಏನು…?

ವದೆಹಲಿ:

       2ನೇ ವಿಶ್ವಯುದ್ಧದ ಸಂದರ್ಭದಲ್ಲಿ ನಾಪತ್ತೆಯಾಗಿದೆ ಜಗತ್ತೆಲ್ಲಾ ಅಂದುಕೊಂಡ ಹಡಗೊಂದು 84 ವರ್ಷಗಳ ನಂತರ ಪತ್ತೆಯಾಗಿ ಅಚ್ಚರಿ ಮೂಡಿಸಿದೆ 

       ಫಿಲಿಪ್ಪೀನ್ಸ್‌ನ ಲುಝಾನ್‌ ದ್ವೀಪದ ಸಮೀಪದ ಸಮುದ್ರದಾಳದಲ್ಲಿ ಜಪಾನಿನ ಮಾಂಟೆವಿಡಿಯೊ ಮಾರು ಹಡಗು ಪತ್ತೆಯಾಗಿದೆ. 13,123 ಅಡಿಗಳ ಆಳದಲ್ಲಿ ಈ ಹಡಗು ಸಿಕ್ಕನಂತರ ಯೋಧರ ಕುಟುಂಬಕ್ಕೆ ಅಂತೂ ಒಂದು ಉತ್ತರ ಸಿಕ್ಕಿದೆ.

      ಆಸೀಸ್‌ನ 864 ಯೋಧರನ್ನು ಬಲಿಪಡೆದಿದ್ದ ಈ ಘಟನೆ, ಆಸೀಸ್‌ ಇತಿಹಾಸದಲ್ಲೇ ಅತಿದೊಡ್ಡ ಸಮುದ್ರ ದುರಂತ ಎಂದು ದಾಖಲಾಗಿದೆ. 1942, ಜುಲೈ ತಿಂಗಳಲ್ಲಿ ಪಪುವಾ ನ್ಯೂಗಿನಿಯದಿಂದ ಚೀನಾದ ಹೈನಾನ್‌ಗೆ ಹೊರಟಿದ್ದ ಹಡಗು ಅಮೆರಿಕದ ಸಬ್‌ಮರಿನ್‌ವೊಂದರ  ದಾಳಿಗೆ ತುತ್ತಾಗಿತ್ತು ಎನ್ನಲಾಗಿದೆ . ಇದು ವ್ಯಾಪಾರಿ ಹಡಗಾಗಿದ್ದರೂ ಯುದ್ಧ ಕಾರ್ಯಾಚರಣೆಗಳಿಗೂ ಬಳಸಲ್ಪಡುತ್ತಿತ್ತು.

     864 ಆಸೀಸ್‌ ಯೋಧರು ಸಾವನ್ನಪ್ಪಿದ್ದರೂ ಮತ್ತು ಈ ಹಡಗಿನಲ್ಲಿ ಯುದ್ಧ ಕೈದಿಗಳಿದ್ದರೇ ಎನ್ನುವುದು ಖಚಿತವಿಲ್ಲ. ಇದರ ಶೋಧವನ್ನು ಆಸ್ಟ್ರೇಲಿಯಾದ ರಕ್ಷಣಾ ಇಲಾಖೆ ನೆರವಿನಿಂದ ಸಬ್‌ಮರಿನ್‌ ಪುರಾತತ್ವ ಇಲಾಖೆ, ಸಮುದ್ರದಾಳ ಶೋಧಪಡೆ ಕೈಗೊಂಡಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap