ಬೆಂಗಳೂರು:
ಇಂದು ಪುನೀತ್ ರಾಜ್ಕುಮಾರ್ ಅವರ ಜನ್ಮದಿನವೂ ಆಗಿರುವುದರಿಂದ ಅವರ ಅಭಿನಯವನ್ನು ತೆರೆಯ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಚಿತ್ರಮಂದಿರಗಳಿಗೆ ಧಾವಿಸುತ್ತಿದ್ದಾರೆ. ಜೇಮ್ಸ್ ಸಿನಿಮಾ ಚಿತ್ರ ವೀಕ್ಷಿಸಿದವರು ಸಿನಿಮಾ ಹೇಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಜೇಮ್ಸ್ ಚಲನಚಿತ್ರ ಹೇಗಿದೆ?
ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಚಿತ್ರ ತೆರೆಗೆ ಬರುತ್ತಿದ್ದಂತೆ ಅಭಿಮಾನಿಗಳು ತೆರೆ ಮೇಲೆ ನಟನ ಪ್ರದರ್ಶನ ನೋಡಿ ಥ್ರಿಲ್ ಆಗಿದ್ದಾರೆ. ಅನೇಕ ಅಭಿಮಾನಿಗಳು ಚಲನಚಿತ್ರವನ್ನು ನೋಡಲು ಬಿಡುಗಡೆಯಾದ ಮೊದಲ ದಿನದ ಮೊದಲ ಶೋವನ್ನೇ ಆಗಮಿಸಿದ್ದಾರೆ.
ಮುಂಜಾನೆಯಿಂದಲೇ ಶುರುವಾಗಿದೆ ಜೇಮ್ಸ್ ಜಾತ್ರೆ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಜಾನೆ 5 ಗಂಟೆಯಿಂದಲೇ ಜೇಮ್ಸ್ ಜಾತ್ರೆ ಶುರುವಾಗಿದೆ. ಅಪ್ಪು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ನಿದ್ದೆಗೆಟ್ಟು, ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದ್ದಾರೆ. ಮುಂಜಾನೆಯೇ ಫ್ಯಾಮಿಲಿ ಜೊತೆಗೆ ಬಂದು ಸಿನಿಮಾ ನೋಡಿದ್ದಾರೆ.
ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ ಜೇಮ್ಸ್ ಅಬ್ಬರ
ಪುನೀತ್ ಅಭಿನಯದ ಜೇಮ್ಸ್ ಸಿನಿಮಾ ಬರೀ ಬೆಂಗಳೂರು ಅಥವಾ ರಾಜ್ಯದಲ್ಲಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ರಿಲೀಸ್ ಆಗಿದೆ. ವಿಶ್ವದಾದ್ಯಂತ ಇಂದು ಸುಮಾರು 4000 ಸ್ಕ್ರೀನ್ ಗಳಲ್ಲಿ ಜೇಮ್ಸ್ ರಿಲೀಸ್ ಆಗಿದೆ.
ಬೆಟ್ಟದ ಹೂವು, ಅರಸು, ಜಾಕಿ, ಅಣ್ಣಾಬಾಂಡ್, ರಣ ವಿಕ್ರಮ, ಯುವರತ್ನ, ರಾಜಕುಮಾರ, ನಟಸಾರ್ವಭೌಮ ಮತ್ತು ಇನ್ನೂ ಹಲವು ಜನಮೆಚ್ಚಿದ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನು ರಂಜಿಸಿದ್ದಾರೆ. ಇದೀಗ ಜೇಮ್ಸ್ ಮೂಲಕ ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಕನ್ನಡದ ಕಣ್ಮಣಿ ಅಪ್ಪು ಅಭಿಮಾನಿಗಳಿಗೆ ರಸದೌತಣ ಉಣಬಡಿಸಲು ಜೇಮ್ಸ್ ಆಗಿ ಬಂದಿದ್ದಾರೆ.
ನಿಂತು ಕೊಂಡೇ ಸಿನಿಮಾ ವೀಕ್ಷಿಸಿದ ಫ್ಯಾನ್ಸ್!
ಬೆಂಗಳೂರಿನ ವೀರಭದ್ರೇಶ್ವರ ಥಿಯೇಟರ್ ಫಸ್ಟ್ ಶೋ ಹೌಸ್ ಫುಲ್ ಆಗಿದೆ. ಥಿಯೇಟರ್ ಕಿಕ್ಕಿರಿದು ತುಂಬಿತ್ತು. ಕೂರೋದಕ್ಕೆ ಜಾಗ ಇಲ್ಲದೇ ಥಿಯೇಟರ್ ನಲ್ಲಿ ನಿಂತುಕೊಂಡೇ ಅಭಿಮಾನಿಗಳು ಸಿನಿಮಾ ನೋಡಿದ್ರು. ಪರದೆಯ ಮುಂಭಾದದಲ್ಲಿಯೂ ಅಭಿಮಾನಿಗಳು ನಿಂತುಕೊಂಡಿದ್ದು ಕಂಡು ಬಂತು. ಚಿತ್ರದುದ್ದಕ್ಕೂ ಅಪ್ಪು ಅಪ್ಪು ಅಂತ ಕೂಗಿ ಅಭಿಮಾನಿಗಳು, ಪವರ್ ಸ್ಟಾರ್ ಅವರನ್ನು ನೆನೆಸಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
