ಧೋನಿಯ ಮುಂದಿನ ನಡೆಯೇನು ……?

ಚೆನ್ನೈ: 

     2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಆಡುತ್ತಾರೆಯೋ ಅಥವಾ ಟೂರ್ನಿ ಆರಂಭಕ್ಕೂ ಮುನ್ನ ನಿವೃತ್ತಿ ಘೋಷಿಸಲಿದ್ದಾರೆಯೇ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಧೋನಿ ಮಾತ್ರ ತಮ್ಮ ನಿವೃತ್ತಿ ಬಗ್ಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ತಮ್ಮ ದೇಹದ ಸ್ಥಿತಿ ಮತ್ತು ಮುಂದಿನ ಋತುವಿನಲ್ಲಿ ಆಡಲು ಸಾಧ್ಯವಾಗುತ್ತದೆಯೇ ಎಂದು ನೋಡಲು ಇನ್ನೂ 6-8 ತಿಂಗಳು ಕಾಯುವುದಾಗಿ ಮಾತ್ರ ಹೇಳಿದ್ದಾರೆ. ಇದೀಗ ಧೋನಿ ಚೆನ್ನೈ ತಂಡದ ಜತೆಗಿನ ಬಾಂಧವ್ಯದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

   ಚೆನ್ನೈಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಧೋನಿ, ಕ್ರಿಕೆಟ್ ವೃತ್ತಿಜೀವನದಲ್ಲಿ ಮುಂದೆ ಏನೇ ಆದರೂ, ತಮ್ಮ ಹೃದಯ ಯಾವಾಗಲೂ ಸಿಎಸ್‌ಕೆಗಾಗಿ ಬಡಿಯುತ್ತದೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

   “ನಿವೃತ್ತಿ ಬಗ್ಗೆ ನಿರ್ಧರಿಸಲು ನನಗೆ ಸಾಕಷ್ಟು ಸಮಯವಿದೆ, ಆದರೆ ನೀವು ಹಳದಿ ಜೆರ್ಸಿಯಲ್ಲಿ ಮತ್ತೆ ಬರುವ ಬಗ್ಗೆ ಕೇಳುತ್ತಿದ್ದರೆ, ನಾನು ಯಾವಾಗಲೂ ಹಳದಿ ಜೆರ್ಸಿಯಲ್ಲಿಯೇ ಇರುತ್ತೇನೆ, ನಾನು ಆಡುತ್ತಿರಲಿ ಅಥವಾ ಇಲ್ಲದಿರಲಿ, ಅದು ಬೇರೆ ವಿಷಯ. ನಾನು ಮತ್ತು ಸಿಎಸ್‌ಕೆ ಒಟ್ಟಿಗೆ ಇರುತ್ತೇವೆ. ಮುಂದಿನ 15-20 ವರ್ಷಗಳವರೆಗೆ ಸಹ ನಿಮಗೆ ತಿಳಿದಿದೆ” ಎಂದು ಧೋನಿ ಹೇಳಿದರು.

   ಧೋನಿಯ ಈ ಮಾತುಗಳು ಕೇಳುವಾಗ ಅವರು ಒಂದೊಮ್ಮೆ ಐಪಿಎಲ್‌ನಿಂದ ನಿವೃತ್ತಿ ಹೊಂದಿದರೂ ಕೂಡ ಚೆನ್ನೈ ತಂಡದ ಕೋಚ್‌ ಅಥವಾ ಮೆಂಟರ್‌ ಆಗಿ ತಂಡದೊಂದಿಗಿನ ನಂಟು ಮುಂದುವರಿಸುವುದು ಖಚಿತ. ಕಳೆದ ಆವೃತ್ತಿಯಲ್ಲಿ ತಂಡದ ಖಾಯಂ ನಾಯಕ ಋತುರಾಜ್‌ ಗಾಯಕ್ವಾಡ್‌ ಗಾಯಗೊಂಡು ಅರ್ಧದಲ್ಲೇ ಟೂರ್ನಿಯಿಂದ ಹೊರಬಿದ್ದ ಕಾರಣ ಧೋನಿ ತಂಡವನ್ನು ಮುನ್ನಡೆಸಿದ್ದರು. ಆದರೆ ತಂಡ ಹೇಳಿಕೊಳ್ಳುವ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿತ್ತು.

Recent Articles

spot_img

Related Stories

Share via
Copy link