ವಿನೀಶ್‌ ಪೋಗಟ್‌ ಬಗ್ಗೆ ಶಶಿ ತರೂರ್‌ ಹೇಳಿದ್ದಾದರೇನು ….?

ದೆಹಲಿ

   ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಕುಸ್ತಿಪಟು ವಿನೇಶ್ ಫೋಗಟ್ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ ನಂತರ ಗುರುವಾರ ಹಿಂದಿಯಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡು ಅನರ್ಹಗೊಂಡ ಒಂದು ದಿನದ ನಂತರ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇಸ್ ಸಿಸ್ಟಂ ಸೆ ಪಕ್ ಗಯೀ ಹೈ ಯೇ ಲಡ್ಕಿ, ಲಡ್ತೇ ಲಡ್ತೇ ಥಕ್ ಗಯೀ ಹೈ ಯೇ ಲಡ್ಕೀ (ಈ ಹುಡುಗಿ ವ್ಯವಸ್ಥೆಯಿಂದ ಬೇಸತ್ತಿದ್ದಾಳೆ. ಹೋರಾಡಿ ಹೋರಾಡಿ ಸುಸ್ತಾಗಿದ್ದಾಳೆ ಈ ಹುಡುಗಿ),” ಎಂದು ತರೂರ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ಕುಸ್ತಿ ನನ್ನನ್ನು ಸೋಲಿಸಿತು, ನಾನು ಸೋತಿದ್ದೇನೆ…ದಯವಿಟ್ಟು ನನ್ನನ್ನು ಕ್ಷಮಿಸು ..ನಿನ್ನ ಕನಸು. ನನ್ನ ಧೈರ್ಯ, ಎಲ್ಲವೂ ಛಿದ್ರವಾಗಿದೆ. ನನ್ನಲ್ಲಿ ಹೆಚ್ಚಿನ ಶಕ್ತಿ ಉಳಿದಿಲ್ಲ. ವಿದಾಯ ಕುಸ್ತಿ 2001-2024. ನಾನು ಯಾವಾಗಲೂ ನಿಮ್ಮೆಲ್ಲರಿಗೂ ಋಣಿಯಾಗಿರುತ್ತೇನೆ..ಕ್ಷಮಿಸಿ. ”ಎಂದು ನಿವೃತ್ತಿ ಘೋಷಿಸಿ ವಿನೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ತೂಕ ಇಳಿಸುವ ಪ್ರಯತ್ನದಲ್ಲಿ ರಾತ್ರಿಯಿಡೀ ತಂಡ ನಡೆಸಿದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ವಿನೇಶ್ ಫೋಗಟ್ ಬುಧವಾರ ಬೆಳಗ್ಗೆ ನಿಗದಿತ 50 ಕೆಜಿಗಿಂತ 100ಗ್ರಾಂ ಹೆಚ್ಚುವರಿ ತೂಕವನ್ನು ಹೊಂದಿದ್ದರು. ಇಂದರಿಂದ ಪೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಹೇಳಿಕೆಯಲ್ಲಿ ತಿಳಿಸಿದೆ. ತೂಕ ಇಳಿಸಲು ನಡೆಸಿದ ಸತತ ಪ್ರಯತ್ನಗಳ ಪರಿಣಾಮವಾಗಿ ಅವರು ನಿರ್ಜಲೀಕರಣದಿಂದ ಬಳಲಿ ಅಸ್ವಸ್ಥಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. 

    ವಿನೇಶ್ ಮೂರು ಬಾರಿ ಒಲಿಂಪಿಯನ್ ಆಗಿದ್ದು, ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಎರಡರಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಕಳೆದ ವರ್ಷದಿಂದ, ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತದ ಮಾಜಿ ರೆಸ್ಲಿಂಗ್ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅವರು ತೀವ್ರ ಪ್ರತಿಭಟನೆ ನಡೆಸಿದ್ದರು.

Recent Articles

spot_img

Related Stories

Share via
Copy link