ಬೆಂಗಳೂರು
ನಿನ್ನೆ ಹೊರ ಬಂದಿರುವ ಲೋಕ್‌ಪೋಲ್ ಸಮೀಕ್ಷೆಯು ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದೆ. ಮಾರ್ಚ್ ಅಂತ್ಯದವರೆಗೆ ನಡೆದಿರುವ ವಿಸ್ತೃತ ಸಮೀಕ್ಷೆಯು ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಪಕ್ಷವು 128 ರಿಂದ 131 ಸ್ಥಾನಗಳನ್ನು ಪಡೆಯಲಿದೆ.
ಬಿಜೆಪಿಯು 66 ರಿಂದ 69 ಸ್ಥಾನಗಳಲ್ಲಿ ಗೆಲ್ಲಲಿದೆ, 21 ರಿಂದ 25 ಕ್ಷೇತ್ರಗಳಲ್ಲಿ ಜೆಡಿಎಸ್ ಜಯ ಸಾಧಿಸಲಿದೆ ಎಂದು ಲೋಕ್ ಪೋಲ್ ಸಮೀಕ್ಷೆ ಹೇಳಿದೆ.ಕರ್ನಾಟಕದಲ್ಲಿ ಮಾರ್ಚ್ ಕೊನೆಯ ವಾರದವರೆಗೆ ವಲಯವಾರು ಡೇಟಾವನ್ನು ಲೋಕ್‌ಪೋಲ್ ಸರ್ವೇ ಮಾಡಿದೆ. ಈ ವಲಯವಾರ ಸರ್ವೇ ಅಲ್ಲಿ ಕರ್ನಾಟಕವನ್ನು ಆರು ಭಾಗಗಳಾಗಿ ವಿಂಗಡಿಸಲಾಗಿದೆ. ಹಳೇ ಮೈಸೂರು, ಬೆಂಗಳೂರು, ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ), ಕಿತ್ತೂರು ಕರ್ನಾಟಕ ( ಮುಂಬೈ ಕರ್ನಾಟಕ ), ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕವನ್ನಾಗಿ ವಿಂಗಡಿಸಲಾಗಿದೆ.