ಡೀಲ್​ಗೆ ವಾಟ್ಸ್​ಆಯಪ್​ ಸಾಕ್ಷ್ಯ; ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ

ಬೆಂಗಳೂರು: 

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಡೀಲ್ ನಡೆದಿದೆ ಎಂಬ ಆರೋಪಕ್ಕೆ ಇದೀಗ ಹೆಚ್ಚಿನ ಪುಷ್ಠಿ ಸಿಕ್ಕಿದೆ. ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಅಭ್ಯರ್ಥಿಗಳ ಮೊಬೈಲ್​ನಲ್ಲಿ ಹರಿದಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿಂದೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಡೀಲ್ ನಡೆದಿರುವ ಬಗ್ಗೆ ಅಭ್ಯರ್ಥಿಗಳು ಸಂಶಯ ವ್ಯಕ್ತಪಡಿಸಿದ್ದರು.

ಇದೀಗ ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅಭ್ಯರ್ಥಿಗಳು ಸಾಕ್ಷಿ ಒದಗಿಸಿದ್ದಾರೆ.ಈಗಾಗಲೆ, ಸಹಾಯಕ ಪ್ರಾಧ್ಯಾಪಕ ಹುದ್ದೆ ಭರ್ತಿಗೆ 40 ಲಕ್ಷ ರೂ. ಡೀಲ್ ನಡೆಯುತ್ತಿದೆ ಎಂದು ಅಭ್ಯರ್ಥಿಗಳಿಂದ ಆರೋಪ ಕೇಳಿ ಬಂದಿತ್ತು.

ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಗೆಲುವು ? ಆರ್ ಸಿಬಿ – ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ‘ನಾವು ಪಾರದರ್ಶಕವಾಗಿ ಮತ್ತು ನ್ಯಾಯೋಚಿತವಾಗಿ ಪರೀಕ್ಷೆ ನಡೆಸುತ್ತಿದ್ದೇವೆಂದು’ ಸ್ಪಷ್ಟನೆ ನೀಡಿತ್ತು. ಆದರೆ, ಪರೀಕ್ಷೆ ನಿಗದಿಗೂ ಮೊದಲೇ ಭೂಗೋಳಶಾಸ್ತ್ರದ ಪ್ರಶ್ನೆ ಪತ್ರಿಕೆ ವಾಟ್ಸ್​ಆಯಪ್​ ಮತ್ತು ಸ್ನಾಪ್ ಚಾಟ್​ಗಳಲ್ಲಿ ಸೋರಿಕೆಯಾಗಿರುವುದು ಕಂಡು ಬಂದಿದೆ ಎಂದು ಅಭ್ಯರ್ಥಿಗಳು ಆರೋಪಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?: ಮೇ. 14ರಂದು ಬೆಳಗ್ಗೆ 9 ರಿಂದ 12ರ ಅವಧಿಯಲ್ಲಿ ಭೂಗೋಳಶಾಸ್ತ್ರದ ಪರೀಕ್ಷೆ ಆಯೋಜಿಸಿತ್ತು. ಅದೇ ದಿನ ಬೆಳಗ್ಗೆ 8.30ರ ವೇಳೆ ಒಂದು ಪ್ರತ್ಯೇಕ ಮೊಬೈಲ್ ಸಂಖ್ಯೆಯಿಂದ ಪ್ರಶ್ನೆಗಳನ್ನು ಬೇರೆ ಬೇರೆ ವಾಟ್ಸ್​ಆಪ್​ಗಳಿಗೆ ರವಾನೆ ಮಾಡಲಾಗಿದೆ. ಈ ರೀತಿ ರವಾನೆಯಾಗಿರುವ 18 ಪ್ರಶ್ನೆಗಳು ಅದೇ ದಿನ ನಡೆದ ಪರೀಕ್ಷೆಯಲ್ಲೂ ಯಥಾವತ್ತಾಗಿ ಬಂದಿದೆ. ಇದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಸ್ಪಷ್ಟವಾಗಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ತಿದ್ದುಪಡಿ ಎತ್ತಿಹಿಡಿದ ಸುಪ್ರೀಂ

ಅಲ್ಲದೆ, ಪರೀಕ್ಷೆ ಬರೆದಿರುವ ನನಗೆ ಮೊದಲ ರ್ಯಾಂಕ್ ಉಳಿದವರಿಗೆ ಮುಂದಿನ ರ್ಯಾಂಕ್ ಗ್ಯಾರೆಂಟಿ ಸಿಗಲಿದೆ ಎಂದು ಪ್ರಶ್ನೆ ಬರೆದ ನಂತರ ಅಭ್ಯರ್ಥಿಗಳು ಚಾಟಿಂಗ್ ಮಾಡಿದ್ದಾರೆ. ಇದರಿಂದ ಕೆಇಎ ತುಂಬಾ ಪಾರದರ್ಶಕವಾಗಿ ಪರೀಕ್ಷೆ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ತಕ್ಷಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸಿದ್ಧ ಪಡಿಸಿದವರೇ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎಂಬ ಅನುಮಾನ ಇದೆ. ಇದರಿಂದ ಸಾಕಷ್ಟು ವರ್ಷದಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದವರಿಗೆ ಅನ್ಯಾಯವಾಗಿದೆ ತಕ್ಷಣ ತನಿಖೆ ನಡೆಸಬೇಕು. ಮರು ಪರೀಕ್ಷೆ ಆಯೋಜಿಸಬೇಕು.

ಭಾರತವನ್ನು ನೋಡಿ ಸ್ವಾಭಿಮಾನ ಕಲಿಯಬೇಕು: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಎಸ್ಸೆಸ್ಸೆಲ್ಸಿ ಹಿಂದಿ ಪ್ರಶ್ನೆಪತ್ರಿಕೆಯೂ ಬಹಿರಂಗ

ಅಫಜಲಪುರ(ಕಲಬುರಗಿ): ಎಸ್ಸೆಸ್ಸೆಲ್ಸಿ ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ಶುಕ್ರವಾರ ಪರೀಕ್ಷೆ ಆರಂಭವಾದ ಒಂದು ಗಂಟೆಯಲ್ಲೇ ಸ್ಥಳೀಯ ವಾಟ್ಸ್​ಆಪ್ ಗ್ರೂಪ್​ಗಳಲ್ಲಿ ಹರಿದಾಡಿದೆ. ಬೆಳಗ್ಗೆ ಪಟ್ಟಣದ ಐದು ಕೇಂದ್ರಗಳಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷೆ ಆರಂಭವಾಗಿದೆ. 11.10ರ ಸುಮಾರಿಗೆ ಸ್ಥಳೀಯ ವಾಟ್ಸ್​ಆಪ್ ಗ್ರೂಪ್​ಗಳಲ್ಲಿ ಹಿಂದಿ ಪತ್ರಿಕೆಯ 3, 5, 6, 11 ಸಂಖ್ಯೆಯ ಪುಟಗಳು ಹರಿದಾಡಿವೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಗುಮಾನಿ ಹರಿದಾಡುತ್ತಲೇ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಕೆಲಕಾಲ ಗಲಿಬಿಲಿಗೊಂಡರು.

ಈ ಬಗ್ಗೆ ವಿಚಾರಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ದೇಶಮುಖ ಅವರನ್ನು ಸಂರ್ಪಸಿದರೂ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಪ್ರಶ್ನೆಪತ್ರಿಕೆ ಯಾವ ಕೇಂದ್ರದ್ದು? ಹೇಗೆ ಬಹಿರಂಗವಾಯ್ತು ಎಂಬುದು ಸಮಗ್ರ ತನಿಖೆ ಬಳಿಕವೇ ತಿಳಿಯಲಿದೆ. ಇತ್ತೀಚೆಗಷ್ಟೆ ವಿಜಯಪುರ ಜಿಲ್ಲೆಯಲ್ಲಿ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು, ಇಷ್ಟಾದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಇದೀಗ ಮತ್ತೊಮ್ಮೆ ಸೋರಿಕೆ ಆಗಿದ್ದು, ಅಕ್ರಮ ತಡೆಯುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿವೆ.

ಬೆಂಗಳೂರಿನ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ – ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ

ವೆಬ್​ಸೈಟ್ ಪ್ರಶ್ನೆ: ವಾಣಿಜ್ಯ ವಿಷಯದ ಪ್ರಶ್ನೆ ಪತ್ರಿಕೆಯಲ್ಲೂ ಕೆಲವು ಖಾಸಗಿ ವೆಬ್​ಸೈಟ್​ನಿಂದ ನೇರವಾಗಿ ಪ್ರಶ್ನೆಗಳನ್ನು ತೆಗೆದು ಪ್ರಶ್ನೆ ಪತ್ರಿಕೆ ರೂಪಿಸಿರುವುದಾಗಿ ಆರೋಪಿಸಿ ಅಭ್ಯರ್ಥಿಗಳು ಈಗಾಗಲೆ, ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಇದೇ ರೀತಿ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಯಲ್ಲೂ 10ಕ್ಕೂ ಹೆಚ್ಚು ಪ್ರಶ್ನೆಗಳನ್ನು ತಪ್ಪಾಗಿ ಕೇಳಿರುವುದು, ತಪ್ಪಾಗಿ ಅನುವಾದ ಮಾಡಿರುವ ಬಗ್ಗೆಯೂ ಅಭ್ಯರ್ಥಿಗಳು ಪ್ರಾಧಿಕಾರ ಮುಂದೆ ಪ್ರತಿಭಟನೆ ನಡೆಸಿದ್ದರು.

ಅಭ್ಯರ್ಥಿಗಳು ದೂರು ದಾಖಲು ಮಾಡುತ್ತಿದ್ದರೂ, ಈವರೆಗೆ ಪ್ರಾಧಿಕಾರದಿಂದ ಅಭ್ಯರ್ಥಿಗಳಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಾಧಿಕಾರದ ಸ್ಪಷ್ಟನೆ ಕೇಳಲು ‘ವಿಜಯವಾಣಿ’ ಕಾರ್ಯನಿರ್ವಾಹಕ ನಿರ್ದೇಶಕರನ್ನು ಸಂರ್ಪಸಿದ್ದು, ಕರೆ ಸ್ವೀಕರಿಸಲಿಲ್ಲ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap