ವಾಟ್ಸ್ಆ್ಯಪ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ಪ್ರಮುಖ ಭದ್ರತಾ ಎಚ್ಚರಿಕೆ….!

ಬೆಂಗಳೂರು

    ವಾಟ್ಸ್​ಆ್ಯಪ್ ಅನ್ನು ಡೆಸ್ಕ್‌ಟಾಪ್​ನಲ್ಲಿ ಬಳಸುತ್ತಿರುವ ಬಳಕೆದಾರರು ಪ್ರಮುಖ ಭದ್ರತಾ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಭಾರತ ಸರ್ಕಾರವು ಎಚ್ಚರಿಕೆ ನೀಡಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಅಥವಾ ಸಿಇಆರ್‌ಟಿ-ಇನ್ ಏಪ್ರಿಲ್ 9 ರಂದು ತಮ್ಮ ಪಿಸಿಗಳಲ್ಲಿ ವಾಟ್ಸ್​ಆ್ಯಪ್​ನ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಿರುವ ಬಳಕೆದಾರರಿಗೆ ‘ಹೆಚ್ಚಿನ ಅಪಾಯದ’ ಎಚ್ಚರಿಕೆಯನ್ನು ನೀಡಿದೆ.

   ಈ ಮೂಲಕ ದೇಶದಲ್ಲಿಯೇ 400 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಮೇಲೆ ವಂಚಕರ ಕಣ್ಣುಬಿದ್ದಿದೆ. ಈ ಭದ್ರತಾ ಎಚ್ಚರಿಕೆಯ ದೊಡ್ಡ ಅಪಾಯವೆಂದರೆ, ಹ್ಯಾಕರ್‌ಗಳು ನಿಮ್ಮ ಪಿಸಿಯ ದುರ್ಬಲತೆಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರೆ ವಾಟ್ಸ್​ಆ್ಯಪ್ ಬಳಕೆದಾರರು ದೊಡ್ಡ ವಂಚನೆಗೆ ಗುರಿಯಾಗುತ್ತಾರೆ. ದಾಳಿಕೋರರು ವಾಟ್ಸ್​ಆ್ಯಪ್ ಒಳಗೆ ಪ್ರವೇಶಿಸಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಬಹುದು, ಈ ಮೂಲಕ ದುರ್ಬಲತೆಯನ್ನು ಬಳಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.

   ಭದ್ರತಾ ಅಪಾಯವು ಹೆಚ್ಚಾಗಿ ವಿಂಡೋಸ್ ಪಿಸಿಗಳಲ್ಲಿ ಕಾರ್ಯನಿರ್ವಹಿಸುವ ವಾಟ್ಸ್​ಆ್ಯಪ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗೆ ಸಂಬಂಧಿಸಿದೆ. 2.2450.6 ಕ್ಕಿಂತ ಹಿಂದಿನ ವಿಂಡೋಸ್ ಆವೃತ್ತಿಗಳಿಗಾಗಿ ವಾಟ್ಸ್​ಆ್ಯಪ್ ಡೆಸ್ಕ್‌ಟಾಪ್‌ಗಳು ಈ ವಂಚನೆ ದಾಳಿಗೆ ಗುರಿಯಾಗುತ್ತವೆ ಎಂದು ಸಂಸ್ಥೆ ಹೇಳಿದೆ. 

   ವಾಟ್ಸ್​ಆ್ಯಪ್ ಸಾರ್ವಜನಿಕರಿಗೆ ವಿವರವಾದ ಭದ್ರತಾ ಸಲಹೆಯನ್ನು ನೀಡಿದ್ದು, ವಾಟ್ಸ್​ಆ್ಯಪ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಬಳಕೆದಾರರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ತಕ್ಷಣವೇ ಇತ್ತೀಚಿನ ಆವೃತ್ತಿಗೆ ನವೀಕರಿಸಲು ಸಲಹೆ ನೀಡಿದೆ:

  • ನೀವು ಮೈಕ್ರೋಸಾಫ್ಟ್ ಸ್ಟೋರ್‌ನಿಂದ ವಾಟ್ಸ್​ಆ್ಯಪ್ ಅನ್ನು ನವೀಕರಿಸಬಹುದು
  • ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ವಾಟ್ಸ್​ಆ್ಯಪ್ ಮೆಸೆಂಜರ್ ಅನ್ನು ಹುಡುಕಿ
  • ಅಪ್ಡೇಟ್ ಮೇಲೆ ಕ್ಲಿಕ್ ಮಾಡಿ.

Recent Articles

spot_img

Related Stories

Share via
Copy link