ಮೈಸೂರು:
ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಗ್ರಾಮದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನ ಚಕ್ರಗಳಿಗೆ ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಸಿಲುಕಿ ಅರ್ಧಗಂಟೆಗೂ ಹೆಚ್ಚು ಕಾಲ, ರಸ್ತೆಯಲ್ಲಿಯೇ ನಿಂತಿತು.
ಇದರಿಂದ ಆಂಬುಲೆನ್ಸ್‌ನಲ್ಲಿದ್ದ ತರದೆಲೆ ಗ್ರಾಮದ ಗರ್ಭಿಣಿ ಪ್ರೇಮಾ ಹೆರಿಗೆ ನೋವಿನಿಂದ ಬಳಲಿದರು.
ಹುರುಳಿ ಸೊಪ್ಪು ಚಕ್ರಗಳಿಗೆ ಸಿಲುಕಿದ್ದರಿಂದ ವಾಹನ ಚಲಿಸಲಾಗದೇ ಚಾಲಕ ಸೊಪ್ಪನ್ನು ಬಿಡಿಸುವುದರಲ್ಲಿ ನಿರತರಾದರು. ಇವರ ಜತೆಗೆ ಸುತ್ತಮುತ್ತಲಿದ್ದ ರೈತರೂ ಸಹಕರಿಸಿದರು. ನಂತರ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಕಳೆದ ವಾರವಷ್ಟೇ ತಾಲ್ಲೂಕಿನ ದೇವನೂರು- ಬದನವಾಳು ಮಾರ್ಗದಲ್ಲಿ ಹುರುಳಿಸೊಪ್ಪು ಸಿಲುಕಿ ಓಮ್ನಿ ಕಾರು ಭಸ್ಮಗೊಂಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
