ರಾಜ್ಯದಲ್ಲಿ ಮೊದಲ ʼವೈಟ್‌ ಫಂಗಸ್‌ʼ ಪ್ರಕರಣ ಪತ್ತೆ!!

ರಾಯಚೂರು: 

      ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 6 ಜನರಲ್ಲಿ ವೈಟ್ ಫಂಗಸ್  ಪ್ರಕರಣ ಪತ್ತೆಯಾಗಿದ್ದು, ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ 6 ಪ್ರಕರಣಗಳು ಪತ್ತೆಯಾದ ಮಾಹಿತಿ ಲಭ್ಯವಾಗಿದೆ.

      ಸೋಂಕಿತರೆಲ್ಲರೂ ಕೊರೊನಾ ಸೋಂಕಿನಿಂದ ಗುಣಮುಖರಾದವರಾಗಿದ್ದಾರೆ ಎಂದು ವೈದ್ಯ ಡಾ. ಮಂಜುನಾಥ್ ಮಾಹಿತಿ ನೀಡಿದ್ದು,  ವೈಟ್ ಫಂಗಸ್ ಸೋಂಕಿತರು ಆತಂಕಪಡುವ ಅಗತ್ಯವಿಲ್ಲ. 14 ದಿನಗಳ ಕಾಲ ಚಿಕಿತ್ಸೆ ನೀಡಿದರೆ ಗುಣಮುಖರಾಗಬಹುದು. ಈ ಸೋಂಕಿನಲ್ಲಿ ಅನ್ನನಾಳಕ್ಕೆ ತೊಂದರೆಯಾಗುತ್ತದೆ ಹೊರತು ಜೀವಕ್ಕೆ ಮಾರಕವಲ್ಲ.  100 ಜನರಿಗೆ ಸ್ಟಿರಾಯ್ಡ್‌ ನೀಡಿದ್ರೆ ಒಬ್ಬರಲ್ಲಿ ವೈಟ್‌ ಫಂಗಸ್‌ ತಗುಲುತ್ತೆ, ಆದರೆ ಫಂಗಸ್ ರಕ್ತದಲ್ಲಿ ಸೇರಿದರೆ ಮಾತ್ರ ಪ್ರಾಣಕ್ಕೆ ಅಪಾಯ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

     ಇನ್ನು ಈ ಕುರಿತು ಪ್ರತಿಕ್ರಿಸಿರುವ ರಾಯಚೂರು ಜಿಲ್ಲಾಧಿಕಾರಿ ಆರ್‌. ವೆಂಕಟೇಶ್‌ ‘ ವೈಟ್‌ ಫಂಗಸ್‌ ಪ್ರಕರಣಗಳು ಪತ್ತೆಯಾದ ಬಗ್ಗೆ ರಾಯಚೂರಿನ ಖಾಸಗಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ವೈಟ್‌ ಫಂಗಸ್‌ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಸಂಜೆಯೊಳಗೆ ಈ ಬಗ್ಗೆ ಡಿಹೆಚ್‌ಒ ಮಾಹಿತಿ ನೀಡುತ್ತಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap