ವಾಷಿಂಗ್ಟನ್:
ಶ್ವೇತ ಭವನದ ಬಳಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ರಾಷ್ಟ್ರೀಯ ಗಾರ್ಡ್ ಸದಸ್ಯೆಯೊಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅಫ್ಘಾನಿಸ್ತಾನದ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸಂಜೆ ತಿಳಿಸಿದ್ದಾರೆ. ಶ್ವೇತಭವನದಿಂದ ಕೆಲವೇ ಕೆಲವು ಬ್ಲಾಕ್‌ಗಳ ದೂರದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಸೈನಿಕರ ಸ್ಥಿತಿ ಗಂಭೀರವಾಗಿದ್ದು, ಸಾರಾ ಬೆಕ್‌ಸ್ಟ್ರೋಮ್ ಎಂಬವರು ಸಾವನ್ನಪ್ಪಿದ್ದಾರೆ.
ಶ್ವೇತ ಭವನದ ಬಳಿ ನಡೆದ ಗುಂಡಿನ ದಾಳಿಯಲ್ಲಿ ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ ಗಾರ್ಡ್ ಸದಸ್ಯರಲ್ಲಿ ಒಬ್ಬರಾದ ಯುಎಸ್ ಸೇನಾ ತಜ್ಞೆ ಸಾರಾ ಬೆಕ್‌ಸ್ಟ್ರೋಮ್ ಗುರುವಾರ ಸಂಜೆ ಸಾವನ್ನಪ್ಪಿದ್ದಾರೆ.. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಧನ್ಯವಾದ ಹೇಳುವ ದಿನದ ಪ್ರಯುಕ್ತ ಅಮೆರಿಕದ ಮಿಲಿಟರಿ ಸಿಬ್ಬಂದಿಗೆ ಕರೆ ಮಾಡಿದ ಟ್ರಂಪ್, 20 ವರ್ಷದ ಬೆಕ್‌ಸ್ಟ್ರೋಮ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಬೆಕ್ ಸ್ಟ್ರೋಮ್ ಅವರು ಅತ್ಯಂತ ಗೌರವಾನ್ವಿತ, ಯುವ, ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದ ಅವರು ಈಗ ನಮ್ಮೊಂದಿಗೆ ಇಲ್ಲ ಎಂದು ಹೇಳಿದರು.
ಬೆಕ್‌ಸ್ಟ್ರೋಮ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಇದರಿಂದ ಅವರು ಸಾವನ್ನಪ್ಪಿದ್ದಾರೆ. ಸಿಐಎ ನಡೆಸಿದ ಅತ್ಯಂತ ರಹಸ್ಯ ಕಾರ್ಯಾಚರಣೆಯಲ್ಲಿ ಅಫ್ಘಾನಿಸ್ತಾನ ಮೂಲದ ರಹಮಾನಲ್ಲಾ ಲಕನ್ವಾಲ್ ಎಂಬಾತನನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ ಮತ್ತೊಬ್ಬ ರಾಷ್ಟ್ರೀಯ ಗಾರ್ಡ್ ನ ಮತ್ತೋರ್ವ ಸದಸ್ಯ 24 ವರ್ಷದ ಆಂಡ್ರ್ಯೂ ವುಲ್ಫ್ ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಕೂಡ ಗಂಭೀರವಾಗಿದೆ. ಆತ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಗಂಭೀರ ಗಾಯಗೊಂಡಿದ್ದ ಬೆಕ್‌ಸ್ಟ್ರೋಮ್ ಅವರ ತಂದೆ ಗ್ಯಾರಿ ಬೆಕ್‌ಸ್ಟ್ರೋಮ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಗುರುವಾರ ಬೆಳಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ಗಂಭೀರವಾಗಿ ಗಾಯಗೊಂಡಿರುವ ಬೆಕ್‌ಸ್ಟ್ರೋಮ್ ಬದುಕುಳಿಯುವುದು ಅಸಾಧ್ಯ ಎಂದು ಹೇಳಿದ್ದರು.ಶ್ವೇತಭವನದಿಂದ ಕೊಂಚ ದೂರದಲ್ಲಿ ನಡೆದಿರುವ ಈ ದಾಳಿಯ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ ಎಂದು ರಾಷ್ಟ್ರದ ರಾಜಧಾನಿಯ ಫೆಡರಲ್ ಪ್ರಾಸಿಕ್ಯೂಟರ್ ಯುಎಸ್ ಅಟಾರ್ನಿ ಜೀನೈನ್ ಪಿರ್ರೊ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ನ್ಯಾಷನಲ್ ಗಾರ್ಡ್‌ನ 20 ವರ್ಷದ ಸಾರಾ ಬೆಕ್‌ಸ್ಟ್ರೋಮ್ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು,ಅವರ ಕುಟುಂಬದೊಂದಿಗೆ ನಾವಿದ್ದೇವೆ. ಜನರಿಗಾಗಿ ಪ್ರಾಣ ತ್ಯಾಗ ಮಾಡಿದ ನಾಯಕಿಗೆ ಜನರು ಇಂದು ಸ್ವಯಂ ಪ್ರೇರಿತರಾಗಿ ಧನ್ಯವಾದ ಹೇಳುತ್ತಿದ್ದಾರೆ. ಅದೂ ಥ್ಯಾಂಕ್ಸ್ ಗೀವಿಂಗ್ ದಿನ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಅಫ್ಘಾನ್ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ನ್ಯಾಷನಲ್ ಗಾರ್ಡ್‌ಗಳ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಅಫ್ಘಾನ್ ನ ರಹಮಾನ್ ಉಲ್ಲಾ ಲಕನ್ವಾಲ್ ಸಿಐಎಯ ಅತ್ಯಂತ ರಹಸ್ಯ ಕಾರ್ಯಾಚರಣೆಯ ಭಾಗವಾಗಿದ್ದ ಅಫ್ಘಾನ್ ಯುದ್ಧ ಘಟಕವೊಂದರಲ್ಲಿ ವರ್ಷಗಳ ಕಾಲ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.








