ಅಬಕಾರಿ ನೀತಿ ಹಗರಣ : ಅರವಿಂದ್‌ ಜೈಲಿಗೆ ಉತ್ತರಾಧಿಕಾರಿ ಯಾರು ….?

ನವದೆಹಲಿ 

   ದೆಹಲಿ ಮುಖ್ಯಮಂತ್ರಿ ಹಾಗೂ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್ ಅವರನ್ನು ಬಂಧಿಸಿರುವ ಕಾರಣ ಅವರ ಉತ್ತರಾಧಿಕಾರಿ ಯಾರು ಆಗಬಲ್ಲರು ಎಂಬ ಪ್ರಶ್ನೆ ಕಾಡತೊಡಗಿದೆ. ಮೂಲಗಳ ಪ್ರಕಾರ ಕೇಜ್ರಿವಾಲ್ ಪತ್ನಿಗೆ ಉತ್ತರಾಧಿಕಾರಿ ಪಟ್ಟ ಸಿಗುವ ಸಾಧ್ಯತೆ ಇದೆ.

   ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಸೇರಿದಂತೆ ಸಚಿವರಾದ ಅತಿಷಿ ಹಾಗೂ ಸೌರಭ್ ಭಾರದ್ವಾಜ್‌ ಹೆಸರುಗಳು ದೆಹಲಿ ಸಿಎಂ ಸ್ಥಾನಕ್ಕೆ ಮುಂಚೂಣಿಗೆ ಬಂದಿವೆ. ಮತ್ತೊಂದೆಡೆ ಕೇಜ್ರಿವಾಲ್ ಅವರು ಜೈಲಿನಿಂದಲೇ ಆಡಳಿತ ನಡೆಸುತ್ತಾರೆ ಎಂದು ಅವರ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ ಜೈಲಿನಿಂದ ಆಡಳಿತ ನಡೆಸುವುದು ಕಾನೂನು ಪ್ರಕಾರ ಸರಿಯೇ ಎಂಬ ಪ್ರಶ್ನೆ ಕೂಡ ಹುಟ್ಟುಕೊಂಡಿದೆ. ಹೀಗಾಗಿ ಕೇಜ್ರಿವಾಲ್ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಈಗ ಪಕ್ಷದಲ್ಲಿ ಆರಂಭವಾಗಿದೆ.

   ಆದರೆ ಕೇಜ್ರಿವಾಲ್ ಅವರಂತೆ ಈತ ಯಾರು ಆಡಳಿತ ನಡೆಸಬಲ್ಲರು ಎನ್ನುವ ಹುಡುಕಾಟ ನಡೆದಿದೆ. ಕೇಜ್ರಿವಾಲ್ ಅವರಂತೆ ವರ್ಚಸ್ವಿ ನಾಯಕ ಪಕ್ಷದಲ್ಲಿ ಇಲ್ಲ. ಯಾಕೆಂದರೆ ಅವರೊಂದಿಗೆ ಬಲಗೈನಂತಿದ್ದ ಪ್ರಭಾವಿ ನಾಯಕರಾದ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ಸಂಸದ ಸಂಜಯ್ ಸಿಂಗ್ ಅವರು ಈಗಾಗಲೇ ಇದೇ ದಿಲ್ಲಿ ಮದ್ಯ ಹಗರಣದಲ್ಲಿ ಜೈಲಲ್ಲಿದ್ದಾರೆ.

    ಆದರೆ ಮಾಜಿ ಐಆರ್‌ಎಸ್‌ ಅಧಿಕಾರಿ ಆಗಿರುವ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಹೆಸರು ಈಗ ಮುಂಚೂಣಿಗೆ ಬಂದಿದೆ. ಸಾಕಷ್ಟು ಪ್ರಭಾವಿ ಖಾತೆ ಹೊಂದಿರುವ ಸಚಿವೆ ಅತಿಷಿ ಹಾಗೂ ಸೌರಭ್ ಭಾರದ್ವಾಜ್ ಹೆಸರುಗಳು ಕೂಡ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಸಂಚಾಲಕರ ಹುದ್ದೆಗೆ ಕೇಳಿ ಬಂದಿವೆ.

   ಆಪ್ ರಾಷ್ಟ್ರೀಯ ಪಕ್ಷ ಆಗಿರುವ ಕಾರಣ ಪಕ್ಷದ ಸಂಚಾಲಕ ಹುದ್ದೆಗೂ ಸುನಿತಾ ಹಾಗೂ ಅತಿಷಿ ಹೆಸರು ಮುಂಚೂಣಿಯಲ್ಲಿದೆ. ಪಂಹಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಹೆಸರು ಚಾಲ್ತಿಯಲ್ಲಿದೆ. 

   ಕೇಂದ್ರದ ಕುತಂತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಬಂಧನದ ನಾಟಕ ನಡೆಯುತ್ತಿದೆ ಎಂದು ಆಪ್ ನಾಯಕರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಚುನಾವಣೆ ವೇಳೆ ಆಪ್ ನಾಯಕರ ಮೇಲೆ ಬಂಧನದ ಮೂಲಕ ಒತ್ತಡ ಹೇರಲಾಗುತ್ತಿದೆ. ಇದು ಮೋದಿ ಅವರಿಗೆ ಇರುವ ಸೋಲಿನ ಭಯ ಎಂದು ಆಪ್ ಆಕ್ರೋಶಗೊಂಡು ದೇಶಾದ್ಯಂತ ಕೇಜ್ರಿವಾಲ್ ಬಂಧನ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ. 

   ಇನ್ನೂ ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಾತನಾಡಿದ ಪತ್ನಿ ಸುನಿತಾ ಕೇಜ್ರಿವಾಲ್, ‘ಮೋದಿ ಜೀ ನಿಮ್ಮ ದರ್ಪದ ಕಾರಣ ಮೂರು ಸಲ ಆಯ್ಕೆಯಾದ ಸಿಎಂ ಜೈಲು ಸೇರಿದ್ದಾರೆ. ಇದು ದಿಲ್ಲಿ ಜನರಿಗೆ ಮಾಡಿದ ದ್ರೋಹ. ಆದರೆ ನಿಮ್ಮ ಸಿಎಂ(ಜನರು) ಯಾವಾಗಲೂ ನಿಮ್ಮೊಂದಿಗೆ (ಜನರೊಂದಿಗೆ) ನಿಲ್ಲುತ್ತಾರೆ. ಒಳಗೆ ಇರಲಿ ಅತೌಆ ಹೊರಗೆ ಇರಲಿ ಅವರ ಜೀವನವು ದೇಶಕ್ಕಾಗಿ ಸಮರ್ಪಿಸಲಾಗಿದೆ. ಸಾರ್ವಜನಿಕರಿಗೆ ಎಲ್ಲವೂ ತಿಳಿದಿದೆ. ಇಲ್ಲಿ ಜನರೇ ಸರ್ವೋಚ್ಚ. ಜೈ ಹಿಂದ್’ ಎಂದು ಹೇಳಿದರು.

   ‘ಕೇಜ್ರಿವಾಲ್ ಅವರ ಹಿಂದೆ ಆಪ್‌ ಪಕ್ಷವು ಗಟ್ಟಿಯಾಗಿ ನಿಲ್ಲುತ್ತದೆ. ಕೇಜ್ರಿವಾಲ್ ದೇಶಭಕ್ತರಾಗಿದ್ದು, ಅವರು ಈ ಸಂಚಿನಿಂದ ನಾಯಕರಾಗಿ ಹೊರಬರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರ ಅನುಸರಿಸುತ್ತಿದ್ದಾರೆ. ಯಾವುದೇ ವಿರೋಧ ಪಕ್ಷದ ನಾಯಕ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಅವರು ಬಯಸುವುದಿಲ್ಲ’ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಮೋದಿ ವಿರುದ್ಧ ಕಿಡಿ ಕಾರಿದರು.

   ‘ಕೇಜ್ರಿವಾಲ್ ಸಿಎಂ ಆಗಿರುವ ಕಾರಣ ಝಡ್ ಶ್ರೇಣಿಯ ಭದ್ರತೆ ಹೊಂದಿದ್ದಾರೆ. ಈಗ ಇಡಿ ವಶದಲ್ಲಿದ್ದಾರೆ. ಕೇಜ್ರಿವಾಲ್ ಸುರಕ್ಷತೆಗೆ ಯಾರು ಜವಬ್ದಾರಿ? ಇಡಿ ಕಚೇರಿಯಲ್ಲಿ ಅವರ ಬಂದೀಖಾನೆಗೆ ಯಾರು ಹೋಗುತ್ತಾರೆ? ಕೇಂದ್ರ ಸರ್ಕಾರ ಉತ್ತರಿಸಬೇಕು. ಅವರ ಸುರಕ್ಷತೆ ಬಗ್ಗೆ ಕಳವಳ ಆಗುತ್ತಿದೆ’ ಎಂದು ಆಪ್ ಸಚಿವ ಅತಿಷಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap