ವಾಣಿಜ್ಯ ವಿಭಾಗ : ಟಾಪರ್ಸ್ ಯಾರು …?

ಬೆಂಗಳೂರು : 

      ಕರ್ನಾಟಕದಲ್ಲಿ ಇಂದು ಪ್ರಕಟಚಾಗಿರುವ  ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನ ಪಡೆದುಕೊಂಡಿದೆ. ಉಡುಪಿ ಜಿಲ್ಲೆಗೆ ಎರಡನೇ ಸ್ಥಾನ, ಕೊಡಗು ಜಿಲ್ಲೆಗೆ ಮೂರನೇ ಸ್ಥಾನ, ಉತ್ತರ ಕನ್ನಡ ಜಿಲ್ಲೆಗೆ ನಾಲ್ಕನೇ ಸ್ಥಾನ, ಯಾದಗಿರಿಗೆ ಕೊನೆ ಸ್ಥಾನ ಸಿಕ್ಕಿದೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಮಂಗಳೂರು ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 600 ಅಂಕಗಳೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

      ಬೆಂಗಳೂರು ಗ್ರಾಮಾಂತರ ಒಂಬತ್ತನೇ ಸ್ಥಾನ, ಬೆಂಗಳೂರು ದಕ್ಷಿಣ ಜಿಲ್ಲೆ ಹತ್ತನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಉತ್ತರ ಜಿಲ್ಲೆಗೆ ಹನ್ನೊಂದನೆ ಸ್ಥಾನ ಸಿಕ್ಕಿದೆ. ಒಟ್ಟು 524,209 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ.74.67 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

       ಕಲಾ ವಿಭಾಗದಲ್ಲಿ ತಬಸ್ಸುಮ್ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಜಯನಗರದ ಎನ್ಎಂಕೆಆರ್‌ವಿ ಕಾಲೇಜು ವಿದ್ಯಾರ್ಥಿನಿ ತಬಸ್ಸುಮ್ 600ಕ್ಕೆ 593 ಅಂಕಗಳನ್ನು ಪಡೆದು ರಾಜ್ಯದಲ್ಲಿ ಟಾಪರ್ ರೇಸಿನಲ್ಲಿದ್ದಾರೆ.

      ಜೊತೆಗೆ ಕೋಲಾರದ ಗಂಗೋತ್ರಿ ಕಾಲೇಜು ವಿದ್ಯಾರ್ಥಿ ಕೌಶಿಕ್ ವಿಜ್ಞಾನ ವಿಭಾಗದಲ್ಲಿ 600ಕ್ಕೆ 596 ಅಂಕಗಳನ್ನು ಪಡೆದು ರಾಜ್ಯದ ಟಾಪ್‌ ಲಿಸ್ಟ್‌ನಲ್ಲಿದ್ದಾರೆ.

      ವಾಣಿಜ್ಯ ವಿಭಾಗದಲ್ಲಿ 600ಕ್ಕೆ 596 ಅಂಕಗಳನ್ನು ವಿದ್ಯಾರ್ಥಿನಿ ಎನ್.ಇಂಚರಾ ಪಡೆದುಕೊಂಡರೆ, ಇದೇ ವಿಭಾಗದಲ್ಲಿ ವರ್ಷಾ ಸತ್ಯ ನಾರಾಯಣ 600ಕ್ಕೆ 596 ಅಂಕಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ವಿದ್ಯಾರ್ಥಿನಿ ಗಾನಾ 600ಕ್ಕೆ 596 ಅಂಕ, ಸುರಭಿ 600ಕ್ಕೆ 594, 600ಕ್ಕೆ 594 ಅಂಕ ವಿದ್ಯಾರ್ಥಿ ಸ್ವಾತಿ ಎಸ್‌ ಪೈ, 600ಕ್ಕೆ 596 ಅಂಕಗಳನ್ನು ದಿಶಾ ರಾವ್ ಪಡೆದು ಟಾಪ್ ಲಿಸ್ಟ್‌ನಲ್ಲಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600ಕ್ಕೆ 596 ಅಂಕಗಳನ್ನು ಛಾಯಾ ರವಿಕುಮಾರ್, 600ಕ್ಕೆ 596 ಅಂಕಗಳನ್ನು ಧಾನ್ಯಶ್ರೀ ರಾವ್ ಸೇರಿದಂತೆ ವಿಜ್ಞಾನ ವಿಭಾಗದಲ್ಲಿ 2,07,087 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

1.ಅಂಕೋಲಾದ ವಿಕಾಸ್ ಸಂಯೋಜಿತ ಪಿಯು ಕಾಲೇಜು ವಿದ್ಯಾರ್ಥಿ ಅನ್ವಿತಾ ಡಿ.ಎನ್ 600ಕ್ಕೆ 596 ಅಂಕ, 2.ಬೆಂಗಳೂರಿನ ಜಯನಗರ ಟ್ರಾನ್ಸೆಂಡ್ ಪಿಯು ಕಾಲೇಜು ವಿದ್ಯಾರ್ಥಿ ಛಾಯಾ ರವಿ ಕುಮಾರ್ 596, 3.ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದರೆ ವಿದ್ಯಾರ್ಥಿ ಖುಷಿ ವೈ ಬಾಗಲಕೋಟೆ 596,

4.ಮಂಗಳೂರು ವಿಕಾಸ್ ಪಿಯು ಕಾಲೇಜು ವಿದ್ಯಾರ್ಥಿ ಸ್ವಾತಿ ಎಸ್‌ ಪೈ 596,
5.ಬೆಂಗಳೂರು ಕ್ರೈಸ್ಟ್ ಪಿಯು ಕಾಲೇಜು ವಿದ್ಯಾರ್ಥಿ ಧನ್ಯಶ್ರೀ 596,
6.ಬೆಂಗಳೂರಿನ ಜಯನಗರ ಟ್ರಾನ್ಸೆಂಡ್ ಕಾಲೇಜು ವಿದ್ಯಾರ್ಥಿ ವರ್ಷಾ ಸತ್ಯನಾರಾಯಣ 596,
7.ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿ ಕೆ. ದಿಶಾ 596,
8.ಬೆಂಗಳೂರು ರಾಜಾಜಿ ನಗರ ಎಎಸ್‌ಸಿ ಪಿಯು ಕಾಲೇಜು ವಿದ್ಯಾರ್ಥಿ ಇಂಚರಾ ಎನ್ 596,
9. ಹೊಸೂರು ರೋಡ್ ಬೆಂಗಳೂರು ಕ್ರೈಸ್ಟ್ ಪಿಯು ಕಾಲೇಜು ವಿದ್ಯಾರ್ಥಿ ಗಾನಾ ಜೆ 596,
10. ರಾಜಾಜಿ ನಗರ ಎಎಸ್‌ಸಿ ಪಿಯು ಕಾಲೇಜು ವಿದ್ಯಾರ್ಥಿ ಶುಭಶ್ರೀ 595,
11. ಚನ್ನಸಂದ್ರ ಆರ್‌ಎನ್‌ಎಸ್‌ ಕಾಲೇಜು ವಿದ್ಯಾರ್ಥಿ ಪ್ರೀತಿ ಸುಧೀರ್ 595,
12. ತುಮಕೂರು ವಿದ್ಯಾನಿಧಿ ಪಿಯು ಕಾಲೇಜು ವಿದ್ಯಾರ್ಥಿ ಚಿನ್ಮಯಿ ಎಂ 595,
13. ಮಂಗಳೂರು ಕೆನರಾ ಪಿಯು ಕಾಲೇಜು ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ 595,
14.ಬೆಂಗಳೂರು ಕ್ರೈಸ್ಟ್ ಅಕಾಡೆಮಿ ಪಿಯು ಕಾಲೇಜು ವಿದ್ಯಾರ್ಥಿ ಲಿಖಿತಾ ಸಿ 595,
15. ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿ ಆದಿತ್ಯ ನಾರಾಯಣ 595,
16.ತುಮಕೂರು ರೋಡ್ ಜಿಂದಾಲ್ ಪಿಯು ಕಾಲೇಜು ವಿದ್ಯಾರ್ಥಿ ಪ್ರಿಯಾಂಕಾ ಎನ್ 595,
17. ಬೆಂಗಳೂರು ಪದ್ಮನಾಭನಗರ ಕುಮರನ್ಸ್‌ ಕಾಲೇಜು ವಿದ್ಯಾರ್ಥಿ ಸುಮಂತ್ ಭಟ್ 595,
18. ಬೆಂಗಳೂರು ಜಯನಗರ ಟ್ರಾನ್ಸೆಂಡ್ ಪಿಯು ಕಾಲೇಜು ವಿದ್ಯಾರ್ಥಿ ಯುವರಂಜನ ಶ್ರೀನಿವಾಸ್ ಮುರುಗನ್ 595,
19. ಶಿವಮೊಗ್ಗ ಸ್ವೆಟ್ ಇಂಡಿಪೆಂಡೆಂಟ್ ಕಾಲೇಜು ವಿದ್ಯಾರ್ಥಿ ನೇಹಾಶ್ರೀ 595,
20. ತುಮಕೂರು ವಿದ್ಯಾನಿಧಿ ಪಿಯು ಕಾಲೇಜು ವಿದ್ಯಾರ್ಥಿ ಗೀತಾ 595
21. ಮೈಸೂರು ಬಿಜಿಎಸ್‌ ಹೆಣ್ಮಕ್ಕಳ ಪಿಯು ಕಾಲೇಜು ವಿದ್ಯಾರ್ಥಿ ನಿಖಿತಾ ಪಿ 595, 22. ಬೆಂಗಳೂರು ಜಯನಗರ ಸಮುದಾಯ ಕೇಂದ್ರ ಪಿಯು ಕಾಲೇಜು ವಿದ್ಯಾರ್ಥಿ ಸಹನಾ ಎನ್ 595 ಅಂಕ ಪಡೆದು ಟಾಪ್ ಲಿಸ್ಟ್‌ನಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap