ಹಾಸನ:
ಜೆಡಿಎಸ್ ಗೆ ಕಗ್ಗಂಟಾಗೆ ಉಳಿದಿರುವ ಹಾಸನ ಟಿಕೆಟ್ ವಿವಾದ ಬೆಂಗಳೂರಿನಲ್ಲಿರುವ ಹೆಚ್ ಡಿ ದೇವೇಗೌಡ ಅವರ ನಿವಾಸಕ್ಕೆ ವರ್ಗಾವಣೆಯಾಗಿದ್ದು ರಾತ್ರಿಯ ಭೋಜನದ ಬಳಿಕ ಹೆಚ್ ಡಿ ದೇವೇಗೌಡ ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ ಅವರೊಂದಿಗೆ ಚರ್ಚೆ ಮಾಡಿದ್ದು, ತಮ್ಮ ನಿಲುವನ್ನು ಶೀಘ್ರವೇ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ದೇವೇಗೌಡರ ಆಪ್ತ ವಲಯದ ಪ್ರಕಾರ, ಸ್ವರೂಪ್ ಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ಹೊಂದಿರುವ ಹೆಚ್ ಡಿ ಕುಮಾರಸ್ವಾಮಿ ಅವರ ಮನವೊಲಿಕೆ ಮಾಡಲಿರುವ ದೇವೇಗೌಡ, ಭವಾನಿ ರೇವಣ್ಣ ಅವರಿಗೆ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ.
