ಮಧ್ಯಾಹ್ನದ ಪಂದ್ಯದಲ್ಲಿ ಗೆಲ್ಲುವುದು ಯಾರು ? ಸಿಎಸ್ ಕೆ -ಎಸ್ ಆರ್ ಎಚ್ ಪ್ಲೇಯಿಂಗ್ ಇಲೆವೆನ್

IPL2022 :

15ನೇ ಆವೃತ್ತಿಯ ಐಪಿಎಲ್ ಟೂರ್ನಿ.ಏಪ್ರಿಲ್ 9. ಮ್ಯಾಚ್ ನಂಬರ್ -17. ಸಮಯ -ಮಧ್ಯಾಹ್ನ 3.30. ಡಿ.ವೈ. ಪಾಟೀಲ್ ಅಂಗಣ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳ ನಡುವಿನ ಕಾದಾಟ.

ಹೌದು, ಇದು ಸೋತವರ ನಡುವಿನ ಹೋರಾಟ. ಸನ್ ರೈಸರ್ಸ್ ಹೈದ್ರಾಬಾದ್ ತಂಡ ಆಡಿರುವ ಎರಡು ಪಂದ್ಯಗಳನ್ನು ಹೀನಾಯವಾಗಿ ಸೋತಿದೆ. ಹೀಗಾಗಿ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಅಲ್ಲದೆ ರನ್ ರೇಟ್ ನಲ್ಲೂ ಹಿಂದಿದೆ. ಹೀಗಾಗಿ ವಿಲಿಯಮ್ಸ್ ಪಡೆ ಗೆಲುವನತ್ತ ಚಿತ್ತವನ್ನಿಟ್ಟಿದೆ. ಎರಡು ಬಾರಿ ಚಾಂಪಿಯನ್ ಆಗಿರುವ ಹೈದ್ರಬಾದ್ ತಂಡ ಈ ಬಾರಿಯ ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿ ಭರವಸೆಯನ್ನು ಕಳೆದುಕೊಂಡಿದೆ.

ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಗೆಲುವು ? ಆರ್ ಸಿಬಿ – ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

ಕೂಲ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅವರು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಒದ್ದಾಟ ನಡೆಸುತ್ತಿದ್ದಾರೆ. ತಂಡದಿಂದ ಸಾಂಘಿಕ ಆಟ ಹೊರಬರುತ್ತಿಲ್ಲ. ಬೌಲಿಂಗ್ ವಿಭಾಗ ಬಲಿಷ್ಠವಾಗಿ ಕಂಡು ಬಂದ್ರೂ ಎದುರಾಳಿ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕಲು ವಿಫಲರಾಗುತ್ತಿದ್ದಾರೆ. ಹಾಗೇ ಬ್ಯಾಟಿಂಗ್ ವಿಭಾಗದಲ್ಲೂ ಯುವ ಆಟಗಾರರು ಇದ್ರೂ ಕೂಡ ನಿರೀಕ್ಷಿತ ಆಟ ಹೊರಬರುತ್ತಿಲ್ಲ. ಮುಖ್ಯವಾಗಿ ಮ್ಯಾಚ್ ಫೀನಿಶರ್ ಕೊರತೆ ಎದ್ದು ಕಾಣುತ್ತಿದೆ.


ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಚಾಂಪಿಯನ್. ಐದು ಬಾರಿ ರನ್ನರ್ ಅಪ್ ಆಗಿರುವ ತಂಡ. ನೂತನ ನಾಯಕ ರವೀಂದ್ರ ಜಡೇಜಾ ಸತತ ಮೂರು ಸೋಲಿನಿಂದ ಕಂಗೆಟ್ಟಿದ್ದಾರೆ. ಅನುಭವಿ ಹಾಗೂ ಮಾಜಿ ನಾಯಕ ಧೋನಿಯ ಅಭಯವಿದ್ರೂ ಗೆಲುವು ಮಾತ್ರ ಕಾಣುತ್ತಿಲ್ಲ.

ಮಹಿಳಾ ಸ್ವಸಹಾಯ ಸಂಘಗಳ ನೆರವಿಗೆ ಆಯಂಕರ್ ಬ್ಯಾಂಕ್ ಸ್ಥಾಪನೆ: ಸಿಎಂ ಬೊಮ್ಮಾಯಿ

ಆಡಿರುವ ಮೂರು ಪಂದ್ಯಗಳನ್ನು ಸೋತಿರುವ ಸಿಎಸ್ ಕೆ ತಂಡ ಒಂದೇ ಒಂದು ಗೆಲುವಿಗಾಗಿ ಬಕ ಪಕ್ಷಿಯಂತೆ ಕಾಯುತ್ತಿದೆ.
ಮುಖ್ಯವಾಗಿ ರುತುರಾಜ್ ಗಾಯಕ್ವಾಡ್ ಅವರ ಫಾರ್ಮ್ ತಂಡಕ್ಕೆ ದೊಡ್ಡ ಚಿಂತೆಯನ್ನುಂಟು ಮಾಡಿದೆ. ಇನ್ನುಳಿದಂತೆ ರಾಬಿನ್ ಉತ್ತಪ್ಪ, ಅಂಬಟಿ ರಾಯುಡ್ ಹಾಗೂ ಧೋನಿ ಉತ್ತಮವಾದ ಫಾರ್ಮ್ ನಲ್ಲಿದ್ದಾರೆ. ಆದ್ರೂ ಬೌಲಿಂಗ್ ವಿಭಾಗದಲ್ಲಿ ಎಡವುತ್ತಿದೆ. ಆಲ್ ರೌಂಡರ್ ಗಳಾದ ಡ್ರೇನ್ ಬ್ರೇವೋ ಮತ್ತು ಮೋಯಿನ್ ಆಲಿ ಕೂಡ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.

ಮಸ್ತಾನ್‌ ದರ್ಗಾಕ್ಕೂ ತೆರಳಲಿದೆ ಕರಗ: ಕರಗ ಸಮಿತಿ, ದರ್ಗಾ ಸಮಿತಿ ಸ್ಪಷ್ಟನೆ

ಮತ್ತೊಂದೆಡೆ ದೀಪಕ್ ಚಾಹರ್ ಅವರ ಅನುಪಸ್ಥಿತಿ ಕೂಡ ತಂಡಕ್ಕೆ ಮೈನಸ್ ಪಾಯಿಂಟ್ ಆಗುತ್ತಿದೆ. ಇಂದಿನ ಪಂದ್ಯಕ್ಕೆ ಶಿವಂ ದುಬೆ ಬದಲು ರಾಜ್ಯವರ್ಧನ ಹಂಗೇರ್ಗಕರ್ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.ಒಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳ ಹೋರಾಟ ತೀವ್ರ ಕುತೂಹಲವನ್ನು ಕೆರಳಿಸಿದೆ. ಆದ್ರೂ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಏಪ್ರಿಲ್ 10 ರಿಂದ 18 ವರ್ಷ ವಯಸ್ಸಿನವರಿಗೆ ಮುನ್ನೆಚ್ಚರಿಕೆ ಡೋಸ್, ಕೋವಿಡ್ ಹೋರಾಟಕ್ಕೆ ವೇಗ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ರಾಬಿನ್ ಉತ್ತಪ್ಪ
ರುತುರಾಜ್ ಗಾಯಕ್ವಾಡ್
ಅಂಬಟಿ ರಾಯುಡು
ರವೀಂದ್ರ ಜಡೇಜಾ (ನಾಯಕ)
ಮೋಯಿನ್ ಆಲಿ
ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್)
ರಾಜ್ಯವರ್ಧನ ಹಂಗರ್ಗೆಕರ್
ಡ್ವೇನ್ ಬ್ರೇವೋ
ಡ್ವೇನ್ ಪ್ರಿಟೊರಿಯಸ್
ಕ್ರಿಸ್ ಜೋರ್ಡಾನ್
ತುಷಾರ್ ದೇಶಪಾಂಡೆ

ಡೀಲ್​ಗೆ ವಾಟ್ಸ್​ಆಯಪ್​ ಸಾಕ್ಷ್ಯ; ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ

ಸನ್ ರೈಸರ್ಸ್ ಹೈದ್ರಬಾದ್ ಪ್ಲೇಯಿಂಗ್ ಇಲೆವೆನ್

ಕೇನ್ ವಿಲಿಯಮ್ಸನ್ (ನಾಯಕ)
ಅಭಿಷೇಕ್ ಶರ್ಮಾ
ರಾಹುಲ್ ತ್ರಿಪಾಠಿ
ಆಡೆನ್ ಮಾಕ್ರ್ರಮ್
ನಿಕೊಲಾಸ್ ಪೂರನ್ (ವಿಕೆಟ್ ಕೀಪರ್)
ಅಬ್ದುಲ್ ಸಮಾದ್
ವಾಷಿಂಗ್ಟನ್ ಸುಂದರ್
ರೊಮಾರಿಯೊ ಶೆಫರ್ಡ್
ಭುವನೇಶ್ವರ್ ಕುಮಾರ್
ಉಮ್ರಾನ್ ಮಲ್ಲಿಕ್
ಟಿ. ನಟರಾಜನ್

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link