ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಗೆಲುವು ? ಆರ್ ಸಿಬಿ – ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

IPL 2022:

        15ನೇ ಆವೃತ್ತಿಯ ಐಪಿಎಲ್ ಟೂರ್ನಿ.ಏಪ್ರಿಲ್ 9. ರಾತ್ರಿ 7.30. ಎಮ್.ಸಿ.ಎ ಅಂಗಣ ಪುಣೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿ.

      ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಇಂದು ನಾಲ್ಕನೇ ಪಂದ್ಯ. ಈಗಾಗಲೇ ಆರ್ ಸಿಬಿ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯವನ್ನು ಸೋತಿದೆ.

ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು, ಸ್ಥಳೀಯ ಭಾಷೆಗಳಲ್ಲ; ಭಾಷೆ ಬಗ್ಗೆ ಅಮಿತ್ ಶಾ ಮಹತ್ವದ ಹೇಳಿಕೆ

      ಫಾಫ್ ಡು ಪ್ಲೇಸಸ್ ನಾಯಕತ್ವದಲ್ಲಿ ಆರ್ ಸಿಬಿ ತಂಡ ಹೊಸ ಹುರುಪಿನಲ್ಲಿದೆ. ಇಂದಿನ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಆಡುತ್ತಿರುವುದರಿಂದ ಆರ್ ಸಿಬಿ ಬಲ ಇಮ್ಮಡಿಯಾಗಿದೆ. ಅತ್ಯುತ್ತಮ ಫಾರ್ಮ್ ನಲ್ಲಿರುವ ಗ್ಲೇನ್ ಮ್ಯಾಕ್ಸ್ ವೆಲ್ ತಂಡಕ್ಕೆ ಎಷ್ಟರ ಮಟ್ಟಿಗೆ ಆಧಾರವಾಗುತ್ತಾರೆ ಎಂಬ ಕುತೂಹಲವೂ ಇದೆ.

         ಇನ್ನು ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಬೇಕಿದೆ. ಗ್ಲೇನ್ ಮ್ಯಾಕ್ಸ್ ವೆಲ್ 11ರ ಬಳಗದಲ್ಲಿ ಇರುವುದರಿಂದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಬಹುದು. ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದ್ರೂ ಅಚ್ಚರಿ ಏನಿಲ್ಲ. ಹಾಗೇ ದಿನೇಶ್ ಕಾರ್ತಿಕ್ ಮತ್ತು ಶಹಬಾಝ್ ಅಹಮ್ಮದ್ ಅವರು ಮ್ಯಾಚ್ ಫಿನಿಶಿಂಗ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.

ಹಾಗೇ ಬೌಲಿಂಗ್ ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ. ಮುಖ್ಯವಾಗಿ ಮಹಮ್ಮದ್ ಸೀರಾಜ್ ಲಯ ಕಂಡುಕೊಂಡ್ರೆ ಆರ್ ಸಿಬಿಗೆ ಹೆಚ್ಚಿನ ಚಿಂತೆ ಇಲ್ಲ.


ಆದ್ರೆ ಮುಂಬೈ ಇಂಡಿಯನ್ಸ್ ಸ್ಥಿತಿ ತುಂಬಾನೇ ಶೋಚನೀಯವಾಗಿದೆ. ಆಡಿರುವ ಮೂರು ಪಂದ್ಯಗಳನ್ನು ಸೋತಿರುವ ರೋಹಿತ್ ಬಳಗ ಗೆಲುವಿಗಾಗಿ ಹಂಬಲಿಸುತ್ತಿದೆ.

ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಬಲಿಷ್ಠವಾಗಿ ಕಂಡು ಬರುತ್ತಿದೆ. ರೋಹಿತ್ ಶರ್ಮಾ ಫಾರ್ಮ್ ಕಂಡುಕೊಂಡ್ರೆ ಹೆಚ್ಚಿನ ಸಮಸ್ಯೆ ಇಲ್ಲ. ಆದ್ರೆ ಬೌಲಿಂಗ್ ವಿಭಾಗದ ಚಿಂತೆ ಮುಂಬೈ ಇಂಡಿಯನ್ಸ್ ತಂಡವನ್ನು ಕಾಡುತ್ತಿದೆ. ಜಸ್ಪ್ರಿತ್ ಬೂಮ್ರಾಗೆ ಸಾಥ್ ಕೊಡುವ ಬೌಲರ್ ಗಳ ಕೊರತೆ ಕಾಣುತ್ತಿದೆ. IPL 2022 – Match No 18- RCB vs MI Predicted Playing 11
ಒಟ್ಟಿನಲ್ಲಿ ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಹೋರಾಟ ಅಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಲಿದೆ.

ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ರಾಹುಲ್ ಪಡೆ: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
ಫಾಫ್ ಡು ಪ್ಲೇಸಸ್ (ನಾಯಕ)
ಅನುಜ್ ರಾವತ್
ವಿರಾಟ್ ಕೊಹ್ಲಿ
ಗ್ಲೇನ್ ಮ್ಯಾಕ್ಸ್ ವೆಲ್
ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
ಡೆವಿಡ್ ವಿಲ್ಲೆ
ವನಿಂದು ಹಸರಂಗ
ಶಹಬಾಝ್ ಅಹಮ್ಮದ್
ಹರ್ಷೆಲ್ ಪಟೇಲ್
ಆಕಾಶ್ ದೀಪ್
ಮಹಮ್ಮದ್ ಸೀರಾಜ್

 ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ, ಆಧಾರ್‌ ಜೊತೆಗೆ ‘ಜಾತಿ-ಆದಾಯ ಪ್ರಮಾಣಪತ್ರ’ ಲಿಂಕ್‌ ಕಡ್ಡಾಯ

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ)
ಇಶಾನ್ ಕಿಶಾನ್ (ವಿಕೆಟ್ ಕೀಪರ್)
ಡೆವಾಲ್ಡ್ ಬ್ರೇವಿಸ್
ಸೂರ್ಯ ಕುಮಾರ್ ಯಾದವ್
ತಿಲಕ್ ವರ್ಮಾ
ಕಿರಾನ್ ಪೊಲಾರ್ಡ್
ರಿಲೆ ಮೆರೆಡಿತ್
ಟೈಮಲ್ ಮಿಲ್ಸ್
ಮುರುಗನ್ ಅಶ್ವಿನ್
ಬಾಸಿಲ್ ಥಮಿ
ಜಸ್ಪ್ರಿತ್ ಬೂಮ್ರಾ

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link