Z ಕ್ಯಾಟಗೆರಿ ಭದ್ರತೆ : ಒಪ್ಪಲು ನಿಧಾನಿಸುತ್ತಿರುವುದೇಕೆ ರಾಜಾಹುಲಿ…?

ಬೆಂಗಳೂರು
      ರಾಜ್ಯ ಬಿಜೆಪಿಯ ಸರ್ವೋಚ್ಛ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಸಚಿವಾಲಯವು ವಾರದ ಹಿಂದೆ ಜೆಡ್-ಕೆಟಗರಿ ಭದ್ರತೆಯನ್ನು ನೀಡಿತ್ತು, ಆದರೆ ಯಡಿಯೂರಪ್ಪನವರು ಇನ್ನೂ ಭದ್ರತೆ ತೆಗೆದುಕೊಂಡಿಲ್ಲ.
 
     ಯಡಿಯೂರಪ್ಪನವರು ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಲ್ಲ. ಮೇಲ್ ಅಥವಾ ಫೋನ್ ಮೂಲಕವೂ ಅವರಿಗೆ ಯಾವುದೇ ಬೆದರಿಕೆಗಳು ಬಂದಿಲ್ಲ. ಹಾಗಿರುವಾಗ ಕೇಂದ್ರ ಸರ್ಕಾರ ಅವರಿಗೆ ಈ ಮಟ್ಟದ ಭದ್ರತೆಯನ್ನು ಏಕೆ ನೀಡುತ್ತಿದೆ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತಿದೆ. ಎಲ್ಲಾ ಸಮಯದಲ್ಲೂ ನಾಯಕನ ಚಲನವಲನಗಳ ಮೇಲೆ ನಿಗಾ ಇರಿಸಿಕೊಳ್ಳಲು Z- ಮಟ್ಟದ ಭದ್ರತೆ ನೀಡಲಾಗುತ್ತದೆ.
      ಪ್ರಬಲ ಲಿಂಗಾಯತ ವಲಯಗಳಲ್ಲಿನ ಅನೇಕರು ಕೇಂದ್ರ ಗೃಹ ಸಚಿವಾಲಯವು ಮಾಜಿ ಸಿಎಂಗೆ ಅಂತಹ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಮಾಡುತ್ತಿರುವ ಬೆದರಿಕೆಯ ಗ್ರಹಿಕೆ ಏನೆಂದು ಯೋಚಿಸುತ್ತಿದ್ದಾರೆ. ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಅವರ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರ ಮುಂದಾಗಿದೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಕೆಲವು ಸಿಆರ್ಪಿಎಫ್ ಅಧಿಕಾರಿಗಳು ಮೊನ್ನೆ ಮಂಗಳವಾರ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಯಡಿಯೂರಪ್ಪ ಅವರ ಆಪ್ತ ವಲಯದ ಮೂಲಗಳು, ಝಡ್ ಮಟ್ಟದ ಭದ್ರತೆಯನ್ನು ಒಪ್ಪಿಕೊಳ್ಳುವುದು-ಬಿಡುವುದು ಅವರಿಗೆ ಬಿಟ್ಟಿದ್ದು ಎನ್ನುತ್ತಾರೆ.

      ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ, ಗೃಹ ಸಚಿವಾಲಯದ ಭದ್ರತೆ ವಿಷಯ ನಗೆಪಾಟಲಿ ಗೀಡಾಗಬಾರದು. ಯಡಿಯೂರಪ್ಪ ಗಾಂಧಿ ಬಜಾರ್ನಲ್ಲಿ ನಿಂತು ಯಾವುದೇ ಬೆದರಿಕೆಯಿಲ್ಲದೆ ಚಾಟ್ ತಿನ್ನುವ ರಾಜಕಾರಣಿ. ಅವರು ಎಲ್ಲರಿಗೂ ಒಪ್ಪಿಗೆಯಾಗುವ ಬಹು ಪ್ರೀತಿಯ ನಾಯಕ. ಬಹುಶಃ ಅವರು ಕರ್ನಾಟಕದ ಅತ್ಯಂತ ಜಾತ್ಯತೀತ ಬಿಜೆಪಿ ನಾಯಕರಾಗಿದ್ದಾರೆ.

     Z ಭದ್ರತೆ ಅವರಿಗೆ ಏಕೆ ಬೇಕು, ಅವರಿಗೆ ಯಾವುದಾದರೂ ಬೆದರಿಕೆಗಳು ಅಥವಾ ಎಚ್ಚರಿಕೆ ಪತ್ರಗಳು ಬಂದಿವೆಯೇ ಏನೂ ಇಲ್ಲವಲ್ಲ ಎನ್ನುತ್ತಾರೆ. ಕರ್ನಾಟಕ ಉತ್ತರ ಪ್ರದೇಶವೇ ಅಥವಾ ಮಧ್ಯಪ್ರದೇಶವೇ? ದೆಹಲಿಯಲ್ಲಿ ಯಾರೋ ತಮ್ಮ ಲೆಕ್ಕಾಚಾರವನ್ನು ತಪ್ಪಾಗಿ ಗ್ರಹಿಸಿದ್ದಾರೆಂದು ತೋರುತ್ತಿದೆ. ಬಿಜೆಪಿಯ ಮಾಜಿ ಪದಾಧಿಕಾರಿಯೊಬ್ಬರು, ಬಹುಶಃ ಇದು ಕೇಂದ್ರದ ಗೌರವದ ವಿಧಾನವಾಗಿದೆ ಎಂದು ಹೇಳಿದರು.

     ಯಡಿಯೂರಪ್ಪನವರಿಗೆ ಯಾವುದೇ ಬೆದರಿಕೆಗಳ ಕುರಿತು ಅವರು, ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಕೋಮು ಘಟನೆಯ ನಂತರ, ಯಾವುದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಅದು ಅವರ ಭದ್ರತೆಯನ್ನು ಮೇಲ್ದರ್ಜೆಗೇರಿಸಲು ಕಾರಣವಾಗಿರಬಹುದು ಎನ್ನುತ್ತಾರೆ. ಬಿಜೆಪಿ ಮುಖ್ಯ ವಕ್ತಾರ ಮಹೇಶ್, ಕೆಲವು ಬೆದರಿಕೆ ಗ್ರಹಿಕೆ ಅಥವಾ ಕೆಲವು ಗುಪ್ತಚರ ಮಾಹಿತಿಗಳು ಇದ್ದಾಗ, ಕೇಂದ್ರ ಗೃಹ ಸಚಿವಾಲಯವು ಅಂತಹ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap