ಮುಂಬೈ :
ಇಷ್ಟು ದಿನ ನೆಪೊಟಿಸಂ ನೆಪೊಟಿಸಂ ಎನ್ನುತ್ತಿದ್ದವರಿಗೆ ಇರುವ ಹಳೆ ವಿಚಾರಗಳ ಬದಲಿಗೆ ಈಗ ಹೊಸ ವಿಷಯವೊಂದು ಸಿಕ್ಕಿದೆ ಅದೂ ಸಾಮಾನ್ಯ ಕುಟುಂಬದಿಂದ ಬಂದಿರುವುದಲ್ಲ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ .
ಶಾರುಖ್ ಖಾನ್ ಅವರು ಬಾಲಿವುಡ್ನ ಖ್ಯಾತ ಹೀರೋಗಳಲ್ಲಿ ಒಬ್ಬರು. ಅವರು ಕೆಲವು ಚಿತ್ರಗಳಿಗಾಗಿ ತೂಕ ಹೆಚ್ಚಿಸಿಕೊಂಡಿದ್ದು ಹಾಗೂ ಇಳಿಸಿಕೊಂಡಿದ್ದು ಇದೆ. ಈಗ ಅವರು ಮಗಳ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ. ಹಾಗಂತ ಇದು ವದಂತಿ ಅಲ್ಲ. ಯಾರೋ ಊಹಿಸಿ ಬರೆದ ಕಥೆಯೂ ಅಲ್ಲ. ಸ್ವತಃ ಶಾರುಖ್ ಖಾನ್ ಅವರೇ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.
ಶಾರುಖ್ ಖಾನ್ ಅವರು ಸ್ವಿಜರ್ಲೆಂಡ್ನಲ್ಲಿ ನಡೆದ ‘ಲೊಕಾರ್ನೋ ಫಿಲ್ಮ್ ಫೆಸ್ಟಿವಲ್’ಗೆ ತೆರಳಿದ್ದಾರೆ. ಅಲ್ಲಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಆಧರಿಸಿ ಈ ಗೌರವ ನೀಡಲಾಗಿದೆ. ಅವರು ಈ ಗೌರವ ಸ್ವೀಕರಿಸಲು ಸ್ವಿಜರ್ಲೆಂಡ್ಗೆ ತೆರಳಿದ್ದರು. ಈ ವೇಳೆ ಅವರು ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುಜಯ್ ಘೋಷ್ ನಿರ್ದೇಶನದ ‘ಕಿಂಗ್’ ಸಿನಿಮಾದಲ್ಲಿ ನಟಿಸೋದಾಗಿ ಶಾರುಖ್ ಖಾನ್ ಹೇಳಿದ್ದಾರೆ. ಇದಕ್ಕಾಗಿ ಅವರು ತೂಕ ಇಳಿಸಿಕೊಳ್ಳಲಿದ್ದಾರೆ. ‘ಆ್ಯಕ್ಷನ್ ಸಿನಿಮಾಗಳನ್ನು ಮಾಡೋದು ಕಷ್ಟ. ನೀವು ಪ್ರ್ಯಾಕ್ಟಿಸ್ ಮಾಡಬೇಕು, ಕಲಿಯಬೇಕು. ಇದರ ಜೊತೆಗೆ ಅಪಾಯಕಾರಿ ಸ್ಟಂಟ್ಗಳನ್ನು ಮಾಡಬೇಕು. ನಮ್ಮ ಜೊತೆ ಅನೇಕ ನುರಿತ ತಂತ್ರಜ್ಞರು ಇದ್ದಾರೆ. ಆದರೆ, ಶೇ.80ರಷ್ಟು ಶ್ರಮ ನಾವೇ ಹಾಕಬೇಕು. ಇಲ್ಲದಿದ್ದರೆ ಸರಿ ಕಾಣುವುದಿಲ್ಲ’ ಎಂದಿದ್ದಾರೆ ಶಾರುಖ್.
‘ನಾನು ಮಾಡುತ್ತಿರುವ ಮುಂದಿನ ಸಿನಿಮಾ ಕಿಂಗ್. ಇದರ ಕೆಲಸ ಆರಂಭಿಸಬೇಕಿದೆ. ನಾನು ಸ್ವಲ್ಪ ತೂಕ ಇಳಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. ಜೊತೆಗೆ ಈ ಅವಾರ್ಡ್ನ ನೀಡಿದವರಿಗೆ ಅವರು ಧನ್ಯವಾದ ಹೇಳಿದ್ದಾರೆ. ಶಾರುಖ್ ಖಾನ್ ಬಳಿ ನೂರಾರು ಪ್ರಶಸ್ತಿಗಳು ಇವೆ. ಅವರಿಗೆ ಈ ಮೊದಲು ಪ್ರಶಸ್ತಿ ಬಗ್ಗೆ ಘೀಳು ಇತ್ತು. ಹೀಗಾಗಿ ಅವರು ಹಣ ಕೊಟ್ಟು ಪ್ರಶಸ್ತಿ ಸ್ವೀಕರಿಸಿದ್ದೂ ಇದೆ.