ರಷ್ಯಾ- ಯುಕ್ರೇನ್:
ಆ ಕಡೆ ರಷ್ಯಾ ಯುಕ್ರೇನ್ ಮೇಲೆ ಭೀಕರ ದಾಳಿ ಮಾಡ್ತಿದ್ರು, ಈ ಕಡೆ ನ್ಯಾಚುರಲ್ ಗ್ಯಾಸ್ನ್ನು ಯುರೋಪ್ಗೆ ಸಾಗಿಸೋಕೆ ಯುಕ್ರೇನ್ಗೆ ಬಾಡಿಗೆ ಕೊಡ್ತಾ ಇದೆ ಅಂತ ಈಗ ವರದಿಯಾಗಿದೆ. ಇದೊಂದು ಮುಜುಗರದ ವಿಷಯ ಆದ್ರು ಸತ್ಯ, ಯುರೋಪ್ ದೇಶಗಳು ರಷ್ಯಾ ವಿರುದ್ಧ ಎಷ್ಟೇ ಸ್ಯಾಂಕ್ಷನ್ಸ್ ಹೇರಿದ್ರು ನೈಸರ್ಗಿಕ ಅನಿಲಕ್ಕಾಗಿ ರಷ್ಯಾ ಮೇಲೆ ಇರೋ ಅವಲಂಬನೆಯನ್ನ ಸದ್ಯಕ್ಕೆ ತಪ್ಪಿಸೋಕೆ ಆಗಲ್ಲ.
ಇನ್ನು ಅದನ್ನ ರಷ್ಯಾ ಯುಕ್ರೇನ್ ಪೈಪ್ಲೈನ್ ಮೂಲಕವೇ ಸಾಗಿಸಬೇಕು, ಹಾಗಾಗಿ ರಷ್ಯಾ ಯುಕ್ರೇನ್ಗೆ ಸಾಗಣೆಯ ವೆಚ್ಚವನ್ನ ನೀಡ್ತಾನೆ ಇದೆ. ಹಾಗೆ ನೋಡಿದ್ರೆ ಯುದ್ಧ ಶುರುವಾದ ಮರುದಿನದಿಂದ ಅನಿಲ ಪೂರೈಕೆ ದುಪ್ಪಟ್ಟು ಆಗಿದೆ ಅಂತ ಯುಕ್ರೇನ್ನ ಆಯಿಲ್ ಕಂಪನಿಯ ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಯುರಿಯ್ ವಿಟ್ರೆಂಕೋ ಹೇಳಿದ್ದಾರೆ.
ಈ ಹಿಂದೆ ಯುಕ್ರೇನ್, ರಷ್ಯಾದ ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿ ಗ್ಯಾಜ್ಪ್ರಾಮ್ ತನಗೆ ವರ್ಷಕ್ಕೆ 2 ಬಿಲಿಯನ್ ಡಾಲರ್ ಅಂದ್ರೆ ಭಾರತೀಯ ಮೌಲ್ಯದಲ್ಲಿ ಸುಮಾರು 15 ಸಾವಿರ ಕೋಟಿ ರೂಪಾಯಿ ಪಾವತಿ ಮಾಡುತ್ತೆ ಅಂತ ಹೇಳಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/03/Capture-251.gif)