ಅವತಾರ ಪುರುಷ :
2 ಪಾರ್ಟ್ಗಳಲ್ಲಿ ‘ಅವತಾರ ಪುರುಷ’ ಸಿನಿಮಾ ಮೂಡಿಬರುತ್ತಿದೆ. ಆ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿದ್ದಾರೆ.ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳು ಹವಾ ಮಾಡುತ್ತಿವೆ. ‘ಕೆಜಿಎಫ್ 2’ (KGF 2) ಚಿತ್ರದ ಭರ್ಜರಿ ಗೆಲುವಿನ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚುವಂತಾಗಿದೆ.
ಬಾಹುಬಲಿ 2 ಚಿತ್ರಕ್ಕೂ ಸಾಧ್ಯವಾಗದ ಹೊಸ ದಾಖಲೆ ನಿರ್ಮಿಸಿದ ಕೆಜಿಎಫ್ 2..!
ಹಾಗಂತ ಮುಂಬರುವ ಎಲ್ಲ ಚಿತ್ರಗಳನ್ನೂ ಇದೇ ಮಟ್ಟದಲ್ಲಿ ರಿಲೀಸ್ ಮಾಡಲು ಸಾಧ್ಯವಿಲ್ಲ. ಆ ಬಗ್ಗೆ ಸಿಂಪಲ್ ಸುನಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಅವತಾರ ಪುರುಷ’ ಸಿನಿಮಾ ಮೇ 6ರಂದು ಬಿಡುಗಡೆ ಆಗುತ್ತಿದೆ. ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿಯಾಗಿ ನಟಿಸಿರುವ ಈ ಸಿನಿಮಾ ಕೂಡ ‘ಕೆಜಿಎಫ್’ ರೀತಿ ಎರಡು ಪಾರ್ಟ್ನಲ್ಲಿ ಮೂಡಿಬರುತ್ತಿದೆ.
ಮೊದಲ ಪಾರ್ಟ್ ಹಿಟ್ ಆದರೆ ಎರಡನೇ ಪಾರ್ಟ್ ಅನ್ನುಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುತ್ತೀರಾ ಎಂಬ ಪ್ರಶ್ನೆಗೆ ಸುನಿ ಉತ್ತರಿಸಿದ್ದಾರೆ. ‘ಬೇರೆ ಭಾಷೆಗೆ ಡಬ್ ಮಾಡುವ ಆಲೋಚನೆ ಇಲ್ಲ’ ಎಂದು ಹೇಳಿರುವ ಅವರು ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








