ರಷ್ಯಾ:
ಯುದ್ಧದ ವಾತಾವರಣ ಹಿನ್ನೆಲೆ ರಷ್ಯಾದಲ್ಲಿ ಜನರು ದಿನಬಳಕೆ ವಸ್ತುಗಳಿಗಾಗಿ ಹೊಡೆದಾಟ ಮಾಡಿಕೊಳ್ಳಲು ಶುರು ಮಾಡಿದ್ದಾರೆ.
ಈಗಾಗಲೇ ಯುರೋಪ್ ನಿಂದ ಆಮದು ಆಗುತ್ತಿದ್ದ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಯುರೋಪ್ ಬ್ರ್ಯಾಂಡ್ ಗಳನ್ನು ಬಳಸುತ್ತಿದ್ದ ಗ್ರಾಹಕರು, ತಮಗೆ ಬೇಕಾದ ಉತ್ಪನ್ನಗಳನ್ನು ಸಂಗ್ರಹಣೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ರಷ್ಯಾದಲ್ಲಿ ಕಾಂಡೋಮ್ ಖರೀದಿಸುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ವಿವಿಧ ಬ್ರ್ಯಾಂಡ್ ಗಳ ಕಾಂಡೋಮ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಕೊರತೆ ಕಾಣಬಹುದು ಎಂಬ ಭಯದಿಂದ ಜನರು ಖರೀದಿಗೆ ಮುಂದಾಗಿದ್ದಾರೆ.
‘SSLC ಪರೀಕ್ಷೆ’ಯಲ್ಲಿಯೂ ‘ಹಿಜಾಬ್ ಸಂಘರ್ಷ’: ವಿದ್ಯಾರ್ಥಿಗಳು ಮನೆಗೆ ವಾಪಾಸ್, ಮರಳಿ ಕರೆತಂದ ಪೋಷಕರು
ಯುದ್ಧದ ನಂತರ ರಷ್ಯಾ ಕಾಂಡೋಮ್ ಮಾರಾಟ ಶೇ.170ರಷ್ಟು ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಕಾಂಡೋಮ್ ಸರಬರಾಜು ನಿಂತು ಹೋಗಲಿದೆ ಎಂಬ ಭಯದಿಂದ ಜನರು ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಹಣದುಬ್ಬರದಿಂದಾಗಿ ರಷ್ಯಾದಲ್ಲಿ ಸಕ್ಕರೆ ಬೆಲೆ ಗಗನಕ್ಕೇರಿದೆ. ಉಕ್ರೇನ್ ನಲ್ಲಿನ ಯುದ್ಧದಿಂದ ರಷ್ಯಾ ಆರ್ಥಿಕವಾಗಿ ಕುಸಿತ ಕಾಣಲಾರಂಭಿಸಿದೆ. ಸಕ್ಕರೆ ಬೆಲೆ ಏರಿಕೆ ಆಗುತ್ತಿರೋದರಿಂದ ಕೆಲವು ಮಳಿಗೆಗಳು ಪ್ರತಿ ಗ್ರಾಹಕರಿಗೆ 10 ಕೆಜಿ ಮಿತಿಯನ್ನು ವಿಧಿಸಿವೆ. ರಷ್ಯಾದಲ್ಲಿ ವಾರ್ಷಿಕ ಹಣದುಬ್ಬರವು 2015 ರಿಂದ ಗರಿಷ್ಠ ಮಟ್ಟವನ್ನು ಮುಟ್ಟಿದೆ.
ಮಾರುಕಟ್ಟೆಯಲ್ಲಿ ಜನರು ದಿನಸಿ ವಸ್ತುಗಳಿಗಾಗಿ ಹೊಡೆದಾಡಿಕೊಳ್ಳುತ್ತಿದ್ರೆ, ರಷ್ಯಾದ ಅಧಿಕಾರಿಗಳು ಸಕ್ಕರೆಯ ಕೊರತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ದಾಸ್ತಾನುದಾರರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಜನರನಲ್ಲಿ ಆಹಾರದ ಬಗ್ಗೆ ಭಯ ಹುಟ್ಟಿಸುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ರಷ್ಯಾದ ಜನರು ಆಹಾರಕ್ಕಾಗಿ ಚಿಂತಿಸುವ ಅಗತ್ಯವಿಲ್ಲ, ಪೇಪರ್, ದಿನಸಿಗಾಗಿ ಸೂಪರ್ ಮಾರ್ಕೆಟ್ ಗಳಲ್ಲಿ ಆಹಾರಗಳ ಹಿಂದೆ ಹೋಗಬೇಕಿಲ್ಲ. ಎಲ್ಲರಿಗೂ ಎಂದಿನಂತೆ ಆಹಾರ ಸಿಗಲಿದೆ ಎಂದು ರಷ್ಯಾ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. ಇತ್ತ ರಷ್ಯಾ ನಿರ್ಯಾತದ ಮೇಲೆ ನಿರ್ಬಂಧ ಹಾಕಿದೆ.
ಬಿಡುಗಡೆಯಾದ ಬೆನ್ನಲ್ಲೇ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ 2’ ಟ್ರೈಲರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
