ನವದೆಹಲಿ :
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾಗೆ ಚಿನಾ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಡ್ರೋನ್‌ಗಳನ್ನು ರವಾನಿಸಲು ಯೋಜನೆ ರೂಪಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.ಬೇಹುಗಾರಿಕೆ ಉದ್ದೇಶಕ್ಕಾಗಿ ಆಗಸದಲ್ಲಿ ಹಾರಾಡುತ್ತಿದ್ದ ಚೀನಾ ಬಲೂನ್ ಅನ್ನು ಅಮೆರಿಕ ನೌಕಾ ಪಡೆ ಹೊಡೆದುರುಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಉಕ್ರೇನ್ ಯುದ್ಧದಿಂದಾಗಿ ರಷ್ಯಾ ಆರ್ಥಿಕ ಹೊರೆಯನ್ನು ಅನುಭವಿಸುತ್ತಿದೆ. ಅಲ್ಲದೇ ಅನೇಕ ಯೋಧರನ್ನು ರಷ್ಯಾ ಕಳೆದುಕೊಂಡಿದೆ. ಹೀಗಾಗಿ ಮಿತ್ರ ರಾಷ್ಟ್ರಗಳಾದ ಉತ್ತರ ಕೊರಿಯಾ ಮತ್ತು ಬೆಲಾರಸ್‌ನಿಂದ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ನೆರವಿಗೆ ರಷ್ಯಾ ಪ್ರಯತ್ನಿಸಿತು. ಅಲ್ಲದೇ ತಟಸ್ಥ ದೇಶಗಳಾದ ಭಾರತ ಮತ್ತು ಚೀನಾಗೆ ಕಚ್ಚಾ ತೈಲ ಮಾರಾಟದ ಮೂಲಕ ಸಂಪನ್ಮೂಲ ಕ್ರೋಢೀಕರಿಸುತ್ತಿದೆ.
ಇನ್ನೊಂದೆಡೆ, ಜಗತ್ತಿಗೆ ಬಹಿರಂಗವಾಗಿ ತಿಳಿಯದಂತೆ ರಷ್ಯಾಗೆ ಮಿಲಿಟರಿ ನೆರವು ನೀಡಲು ಚೀನಾ ಯೋಜಿಸುತ್ತಿದೆ. ನೇರವಾಗಿ ಯುದ್ಧದಲ್ಲಿ ಭಾಗವಹಿಸಿದರೆ ಆಗುವ ಸಕಾರಾತ್ಮಕ, ನಕಾರಾತ್ಮಕ ಫಲಗಳ ಬಗ್ಗೆ ಅದು ಚಿಂತಿಸುತ್ತಿದೆ ಎಂದು ಮಿಲಿಟರಿ ತಜ್ಞರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
