ಬೆಂಗಳೂರು :
ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ‘ಕಾಂತಾರ’ ಚಿತ್ರದ ಪ್ರೀಕ್ವೆಲ್. ಇಡೀ ಚಿತ್ರದ ಕಥೆ ಕದಂಬರ ಕಾಲದಲ್ಲಿ ಸಾಗಲಿದೆ. ಕೆಲವು ವರದಿಗಳ ಪ್ರಕಾರ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಮೋಹನ್ಲಾಲ್ ಕೂಡ ನಟಿಸಲಿದ್ದಾರೆ ಎಂದು ವರದಿ ಆಗಿದೆ. ರಿಷಬ್ ಅವರ ತಂದೆಯ ಪಾತ್ರದಲ್ಲಿ ಮೋಹನ್ಲಾಲ್ ನಟಿಸುತ್ತಾರೆ ಎನ್ನುತ್ತಿವೆ ಮೂಲಗಳು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ಈ ಪೈಕಿ ಮೋಹನ್ಲಾಲ್ ಕೂಡ ತಂಡ ಸೇರಿದ್ದಾರೆ ಎನ್ನಲಾಗುತ್ತಿದೆ. ಏಪ್ರಿಲ್ನಲ್ಲಿ ರಿಷಬ್ ಅವರು ಮೋಹನ್ಲಾಲ್ನ ಭೇಟಿ ಮಾಡಿದ್ದರು. ಇದೊಂದು ಸಹಜ ಭೇಟಿ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದರ ಹಿಂದೆ ಸಿನಿಮಾ ಉದ್ದೇಶ ಇದೆ ಎಂದು ಹೇಳಲಾಗುತ್ತಿದೆ. ತಂಡದ ಕಡೆಯಿಂದ ಈ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
‘ಕಾಂತಾರ’ದ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಕುಂದಾಪುರದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. 2025ರಲ್ಲಿ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ. ಸಿನಿಮಾದ ರಿಲೀಸ್ ದಿನಾಂಕದ ಕುರಿತು ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಿನಿಮಾದ ಒಟಿಟಿ ಡೀಲ್ ಈಗಾಗಲೇ ಕುದುರಿದೆ. ಅಮೇಜಾನ್ ಪ್ರೈಮ್ ವಿಡಿಯೋ ಚಿತ್ರದ ಒಟಿಟಿ ಹಕ್ಕನ್ನು ಖರೀದಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಪೋಸ್ಟ್ ಮಾಡಲಾಗುತ್ತಿದೆ.
‘ಬರೋಜ್’ ಸಿನಿಮಾದಲ್ಲಿ ಮೋಹನ್ಲಾಲ್ ನಟಿಸುತ್ತಿದ್ದಾರೆ. ಇದನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರು ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಅನ್ನೋದು ವಿಶೇಷ. ಅವರು ‘ಎಲ್2: ಎಂಪುರಾನ್’ ಹಾಗೂ ಇನ್ನೂ ಶೀರ್ಷಿಕೆ ಇಡದ ಅವರ 360ನೇ ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ರಿಷಬ್ ಅವರ ಸಂಪೂರ್ಣ ಗಮನ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.