ಬಾಲಿವುಡ್‌ ಗೆ ಎಂಟ್ರಿ ಕೊಡ್ತಾರಾ ಶಿವಣ್ಣ…!

ಬೆಂಗಳೂರು:
       ಇದೇ ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿಯೇ ಶಿವಣ್ಣ ಮುಂಬೈ, ದೆಹಲಿಯಲ್ಲಿ ಘೋಸ್ಟ್ ಪ್ರಚಾರದ  ಕೆಲಸಕ್ಕೆ ಹೋಗುತ್ತಿದ್ದಾರೆ.
     ಶಿವಣ್ಣ ಬಾಲಿವುಡ್‌ ಮಂದಿಗೂ ಪರಿಚಯ ಇದ್ದಾರೆ. ಸಿನಿಮಾ ಅಂತ ಬಂದ್ರೆ ಈ ಲೆವಲ್‌ಗೆ ಘೋಸ್ಟ್ ಹೋಗುತ್ತಿದೆ. ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿರೋ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇದೆ. ನಿರ್ಮಾಪಕರು ಕಾನ್ಫಿಡೆಂಟ್ ಆಗಿಯೇ ಇದ್ದಾರೆ. ದೊಡ್ಡ ಸಂಸ್ಥೆಯೊಂದು ಚಿತ್ರವನ್ನ ವಿತರಿಸೋಕೆ ಮುಂದೆ ಬಂದಿದೆ. ಈ ಬಗೆಗಿನ ಅಧಿಕೃತ ಮಾಹಿತಿ ಕೂಡ ಹೊರ ಬಂದಿದೆ. ಅದರ ಇತರ ವಿವರ ಇಲ್ಲಿದೆ.
     ಘೋಸ್ಟ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಅನ್ನುವ ವಿಚಾರ ಗೊತ್ತೇ ಇದೆ. ಆದರೆ ಯಾರು ಈ ಚಿತ್ರವನ್ನ ಬಾಲಿವುಡ್‌ನಲ್ಲಿ ವಿತರಿಸುತ್ತಿದ್ದಾರೆ ಅನ್ನುವ ಮಾಹಿತಿ ಇರಲಿಲ್ಲ. ಆದರೆ ಚಿತ್ರದ ನಿರ್ಮಾಪಕರಾದ ಸಂದೇಶ್ ನಾಗರಾಜ್ ಈಗೊಂದಷ್ಟು ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.
     ಪೆನ್ ಸ್ಡುಡಿಯೋಸ್ ಸಂಸ್ಥೆ ಜಯಂತಿ ಲಾಲ್ ಗಡ ಅವರನ್ನ ನಿರ್ಮಾಪಕ ಸಂದೇಶ ಭೇಟಿ ಆಗಿದ್ದಾರೆ. ಆ ಬಳಿಕ ಬಾಲಿವುಡ್‌ನ ಹಿಂದಿ ವಿತರಣೆ ವಿಷಯವ್ನ ಕೂಡ ಫೈನಲ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡದ ಘೋಸ್ಟ್ ಸಿನಿಮಾ ಬಾಲಿವುಡ್‌ಗೂ ದೊಡ್ಡಮಟ್ಟದಲ್ಲಿಯೇ ಕಾಲಿಡುತ್ತಿದೆ.

     ಈ ಸಂಸ್ಥೆ ಹಿಂದಿ ಸೇರಿದಂತೆ ಇತರ ಭಾಷೆಯಲ್ಲಿ ಘೋಸ್ಟ್ ಸಿನಿಮಾ ವಿತರಿಸುತ್ತಿದೆ. ಆದರೆ ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳನ್ನ ಬೇರೆ ಸಂಸ್ಥೆ ವಿತರಿಸುತ್ತಿದ್ದು ದೊಡ್ಡ ಮಟ್ಟದ ನಿರೀಕ್ಷೆ ಈಗಲೇ ಹುಟ್ಟಿಕೊಂಡಿದೆ.
     ಘೋಸ್ಟ್ ಸಿನಿಮಾದ ಬಹು ಕೋಟಿಯಲ್ಲಿ ರೆಡಿ ಆಗಿದೆ. ಡೈರೆಕ್ಟರ್ ಶ್ರೀನಿ ಕಲ್ಪನೆಯ ಕ್ಯಾನ್‌ವಾಸ್ ಇಲ್ಲಿ ಬೇರೆ ರೀತಿಯಲ್ಲಿಯೇ ಇದೆ. ಇದರ ಝಲಕ್ ಈಗಾಗಲೇ ಗೊತ್ತಾಗಿದೆ. ಆದರೆ ಇಡೀ ಸಿನಿಮಾ ಹೇಗಿದೆ ಅನ್ನುವ ಕುತೂಹಲ ಇದ್ದೇ ಇದೆ.

    ಇದರ ಬೆನ್ನಲ್ಲಿಯೇ ಡೈರೆಕ್ಟರ್ ಶ್ರೀನಿ ಸಿನಿಮಾದ ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ. ಚಿತ್ರದ ಬಹುತೇಕ ಕಥೆ ಜೈಲಿನಲ್ಲಿಯೇ ನಡೆಯುತ್ತದೆ. ಆದರೆ ಇದು ಗ್ಯಾಂಗ್‌ಸ್ಟರ್ ಸಿನಿಮಾ ಅಲ್ವೇ ಅಲ್ಲ. ಗ್ಯಾಂಗ್‌ಸ್ಟರ್ ಅನ್ನೋದು ಜಾಸ್ತಿ ಬರೋದಿಲ್ಲ. ಇಲ್ಲಿ ಬೇರೆ ರೀತಿಯ ಕಂಟೆಂಟ್ ಇದೆ ಅಂತಲೇ ಡೈರೆಕ್ಟರ್ ಶ್ರೀನಿ ಹೇಳಿಕೊಂಡಿದ್ದಾರೆ.

   ಘೋಸ್ಟ್ ಸಿನಿಮಾದಲ್ಲಿ ಶಿವರಾಜ್‌ ಕುಮಾರ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ನಟ ಅನುಪಮ್ ಖೇರ್ ಈ ಸಿನಿಮಾದಲ್ಲಿ ಅದ್ಭುತ ಪಾತ್ರವನ್ನೆ ಮಾಡಿದ್ದಾರೆ. ಮಲಯಾಳಂ ನಟ ಜಯರಾಮ್ ಪಾತ್ರವೂ ಇಲ್ಲಿ ಸ್ಪೆಷಲ್ ಆಗಿಯೇ ಇದೆ. ಇದರ ಹೊರತಾಗಿ ಸಿನಿಮಾದಲ್ಲಿ ನಾಯಕಿನೇ ಇಲ್ವೇನೋ ಅನ್ನುವ ಅನುಮಾನವೂ ಮೂಡಿದೆ.

    ಘೋಸ್ಟ್ ಸಿನಿಮಾ ಕನ್ನಡದ ಮತ್ತೊಂದು ನಿರೀಕ್ಷೆಯ ಮೂವಿ ಆಗಿದೆ. ಶಿವಣ್ಣನ ಫ್ಯಾನ್ಸ್ ಈ ಚಿತ್ರ ನೋಡಲು ಕಾತರದಿದಲೇ ಕಾಯುತ್ತಿದ್ದಾರೆ. ಇವರ ನಿರೀಕ್ಷೆಯನ್ನ ಬಿಗ್ ಡ್ಯಾಡಿ ಟೀಸರ್ ಹೆಚ್ಚು ಮಾಡಿದೆ. ಸಿನಿ ಪ್ರೇಮಿಗಳಿಗೂ ಇದು ಹೆಚ್ಚಿನ ಕುತೂಹಲ ಮೂಡಿಸಿದೆ ಅಂತಲೇ ಹೇಳಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap